2000 ನೋಟು ನಿಷೇಧಕ್ಕೆ ಚಂದ್ರಬಾಬು ನಾಯ್ಡು ಆಗ್ರಹ
ಅಮರಾವತಿ, ಸೆಪ್ಟೆಂಬರ್ 06: ಅಪನಗದೀಕರಣ ಅಥವಾ ನೋಟ್ ನಿಷೇಧ ಯೋಜನೆ, ಮೋದಿ ಸರ್ಕಾರದ ದೊಡ್ಡ 'ದುರಂತ' ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಕಾರ್ಯಕರ್ತರ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು 2000 ನೋಟುಗಳನ್ನು ಕೂಡಲೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡುವ ಸರ್ಕಾರ ಇನ್ನೊಂದೆಡೆ ಕರೆನ್ಸಿ ನೋಟುಗಳ ಬಳಕೆ ಹೆಚ್ಚಿಸುತ್ತಿದೆ. ಡಿಜಿಟಲ್ ಕರೆನ್ಸಿ, ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ವಿಸ್ತೃತಗೊಳ್ಳಬೇಕಿದೆ ಎಂದರು.

ಅಮರಾವತಿ ನಗರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಅವರು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕೂಡ ನೀಡದೆ ಕೇಂದ್ರ ಸಮಸ್ಯೆಯುಂಟು ಮಾಡುತ್ತಿದೆ ಕೇಂದ್ರ ಸಾಕಷ್ಟು ಹಣಕಾಸು ಒದಗಿಸದೆ ಅಡ್ಡಿಯಾಗುತ್ತಿದೆ. ನಗರ ನಿರ್ಮಿಸುವ ಕಾರ್ಯ ವೇಗದಿಂದ ನಡೆಯುತ್ತಿದ್ದು, ಹೈಕೋರ್ಟ್ ಕಟ್ಟಡಗಳು ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 10 ಲಕ್ಷ ಕೆರೆಗಳನ್ನು ನಿರ್ಮಿಸಲಾಗಿದೆ. ಹತ್ತು ನೀರಾವರಿ ಯೋಜನೆಗಳೂ ಪೂರ್ಣಗೊಂಡಿದ್ದು, ಇನ್ನೂ 10-16 ಯೋಜನೆಗಳು ಜಾರಿಗೊಳ್ಳಲಿವೆ. ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಕೃಷಿಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಂದರು.












Click it and Unblock the Notifications