ಎಡಪಕ್ಷಗಳ ಅವಸಾನ ಭಾರತಕ್ಕೆ ದುರಂತ: ಜೈರಾಮ್ ರಮೇಶ್
ತಿರುವನಂತಪುರಂ, ಮಾರ್ಚ್ 05: ಎಡಪಕ್ಷಗಳ ಅವಸಾನವಾದರೆ ಅದು ಭಾರತದ ಅತೀ ದೊಡ್ಡ ದುರಂತವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಕೇರಳದ ತಿರುವನಂತಪುರಂ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಎಡಪಕ್ಷಗಳ ಕುರಿತು ಆತಂಕ ವ್ಯಕ್ತಪಡಿಸಿದರು.
ಭಾರತದಲ್ಲಿ ಎಡಪಕ್ಷ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ನಾವು ರಾಜಕೀಯ ವಿರೋಧಿಯಿರಬಹುದು. ಆದರೆ ಒಬ್ಬ ವ್ಯಕ್ತಿಯಾಗಿ ಹೇಳುವುದಾದರೆ ಭಾರತದಲ್ಲಿ ಎಡಪಕ್ಷಗಳ ಅವಸಾನವನ್ನು ನಾವು ಸಹಿಸಿಕೊಳ್ಳುವುದು ಕಷ್ಟ. ಅದು ಭಾರತಕ್ಕೆ ದುರಂತವಾಗಿ ಪರಿಣಮಿಸಬಹುದು ಎಂದು ಅವರು ಹೇಳಿದರು.

ತ್ರಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಾ.3 ರಂದು ಹೊರಬಿದ್ದಿದ್ದು, ಇಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಪ್ರಥಮ ಬಾರಿಗೆ ಆಧಿಪತ್ಯ ಸ್ಥಾಪಿಸಿವೆ. ತ್ರಿಪುರ ಚುನಾವಣಾ ಫಲಿತಾಂಶ: ಬಿಜೆಪಿ-43, ಕಾಂಗ್ರೆಸ್-0, ಸಿಪಿಎಂ- 16












Click it and Unblock the Notifications