8th Pay Commission: ಸರ್ಕಾರಿ ನೌಕರರಿಂದ 8ನೇ ವೇತನ ಆಯೋಗಕ್ಕೆ ಬೇಡಿಕೆ ಏಕೆ?
ನವದೆಹಲಿ, ಜೂನ್ 19: ಲೋಕಸಭೆ ಚುನಾವಣೆ ಮುಗಿದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೇಂದ್ರ ಸರ್ಕಾರಿ ನೌಕರರು ನೂತನ ಸರ್ಕಾರ ನೌಕರರಿಗೆ, ಪಿಂಚಣಿದಾರರಿಗೆ ಸಿಹಿಸುದ್ದಿ ನೀಡುವಂತೆ 8ನೇ ವೇತನ ಆಯೋಗ ರಚನೆಯ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಿ, ವರದಿ ಪಡೆದು ಅನುಷ್ಠಾನ ಮಾಡುತ್ತದೆ. 2016ರ ಜನವರಿಯಲ್ಲಿ 7ನೇ ವೇತನ ಆಯೋಗ ವರದಿ ನೀಡಿತ್ತು. ಈಗ 2026ರ ಜನವರಿಗೆ 8ನೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು.

ಕೇಂದ್ರ ಸರ್ಕಾರಿ ನೌಕರರ ಜಂಟಿ ಸಲಹಾ ರಾಷ್ಟ್ರೀಯ ಮಂಡಳಿ (ಸಿಬ್ಬಂದಿ ಕಡೆ) ಕಾರ್ಯದರ್ಶಿ ಎಸ್. ಗೋಪಾಲ್ ಮಿಶ್ರಾ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ತಕ್ಷಣ ಸರ್ಕಾರ 8ನೇ ವೇತನ ಆಯೋಗವನ್ನು ಏಕೆ ರಚನೆ ಮಾಡಬೇಕು?, ತುರ್ತು ಅಗತ್ಯ ಏನಿದೆ? ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
8ನೇ ವೇತನ ಆಯೋಗ ರಚನೆ ಏಕೆ?; ಎಸ್. ಗೋಪಾಲ್ ಮಿಶ್ರಾ ತಮ್ಮ ಪತ್ರದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ/ ಭತ್ಯೆಗಳು/ ಪಿಂಚಣಿ ಪರಿಷ್ಕರಣೆ ಮಾಡಲು 8ನೇ ಕೇಂದ್ರ ವೇತನ ಆಯೋಗವನ್ನು ತಕ್ಷಣ ರಚನೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
7ನೇ ಕೇಂದ್ರ ವೇತನ ಆಯೋಗಗಳ ಶಿಫಾರಸುಗಳನ್ನು ಸರ್ಕಾರವು 1/1/2016ರಿಂದ ಜಾರಿಗೊಳಿಸಿದೆ. ವೇತನ ಆಯೋಗದ ಶಿಫಾರಸಿನಂತೆ ಕನಿಷ್ಠ ವೇತನವನ್ನು ರೂ. 26,000 ತಿಂಗಳಿಗೆ ನಿಗದಿ ಮಾಡಿದೆ. 7ನೇ ವೇತನ ಆಯೋಗದ ಮುಂದೆ ರಾಷ್ಟ್ರೀಯ ಕೌನ್ಸಿಲ್‌ನ ಸಿಬ್ಬಂದಿ ಪ್ರಸ್ತಾಪಿಸಿದ ಕನಿಷ್ಠ ವೇತನ ಅತ್ಯಂತ ಕಡಿಮೆ ಇತ್ತು. ನಮ್ಮ ಹಲವು ಬೇಡಿಕೆಗಳನ್ನು ಆಯೋಗ ಯಾವುದೇ ವಿವರಣೆ ನೀಡದೆ ತಿರಸ್ಕಾರ ಮಾಡಿದೆ ಎಂದು ಹೇಳಿದ್ದಾರೆ.
ನಾವು ಶೇ 3.68 ಫಿಟ್‌ಮೆಂಟ್‌ಗೆ ಒತ್ತಾಯಿಸಿದರೆ, 7ನೇ ವೇತನ ಆಯೋಗ ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸದೆ 2.57ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು ಮಾಡಿತು. ಸರ್ಕಾರವು ಅದನ್ನು ನೇರವಾಗಿ ಒಪ್ಪಿಕೊಂಡಿತು. ಸರ್ಕಾರ ಸಹ ಸಿಬ್ಬಂದಿಗಳ ಬಳಿ ಯಾವುದೇ ಚರ್ಚೆ ನಡೆಸದೆ ಮತ್ತು ಸಿಬ್ಬಂದಿಯ ಕಡೆಯ ಪ್ರಸ್ತಾವನೆಗಳನ್ನು ಪರಿಗಣಿಸದೆ ಆಯೋಗದ ಶಿಫಾರಸು ಅಂಗೀಕರಿಸಿದೆ.
ಸರ್ಕಾರ ಕನಿಷ್ಠ ವೇತನ ಮತ್ತು ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸಲು ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುರೇಶ್ ಪ್ರಭು ಮುಂತಾವರನ್ನು ಒಳಗೊಂಡ ಸಮಿತಿ ರಚನೆ ಮಾಡಿತು. ಈ ಸಮಿತಿ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಬೇಡಿಕೆಗಳ ಸೌಹಾರ್ದಯುತ ಇತ್ಯರ್ಥಕ್ಕೆ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿತು. ಆದ್ದರಿಂದ ಕೇಂದ್ರ ಸರ್ಕಾರಿ ನೌಕರರು ಕರೆ ನೀಡಿದ್ದ ಮುಷ್ಕರ ಸಹ ಮುಂದಕ್ಕೆ ಹೋಯಿತು.
ಆದರೆ ಸಿಬ್ಬಂದಿಗಳ ಮನವಿ ಆಲಿಸಿದ ಬಳಿಕವೂ ಕನಿಷ್ಠ ವೇತನ ಮತ್ತು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಸರ್ಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಸರ್ಕಾರವೇ ಹೇಳುವಂತೆ ಹಣದುಬ್ಬರವು ಸರಾಸರಿ ಶೇ 4 ರಿಂದ 7ರಷ್ಟಿದೆ. ಕೋವಿಡ್ ಬಳಿಕ ಅದು ಕೋವಿಡ್ ಪೂರ್ವ ಪರಿಸ್ಥಿತಿಗಿಂತಲೂ ಹೆಚ್ಚಾಗಿದೆ.
ದೈನಂದಿನ ಜೀವನಕ್ಕೆ ಅಗತ್ಯವಿರುವ ವಸ್ತು ಮತ್ತು ಸರಕುಗಳ ಬೆಲೆಗಳಲ್ಲಿ ನಿರಂತರ ಏರಿಕೆಯಾಗಿದೆ. ಆದರೆ 1/7/2023ರಂತೆ ಶೇ 46ರಷ್ಟು ತುಟ್ಟಿಭತ್ಯೆ ನೀಡಲಾಗಿದೆ. ಸದ್ಯದ ಬೆಲೆ ಏರಿಕೆಯನ್ನು ಗಮನಿಸಿದರೆ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಎ ನಡುವೆ ಅಪಾರ ಅಂತರವಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಸರ್ಕಾರವೇ ಬಜೆಟ್‌ನಲ್ಲಿ ಹೇಳುವಂತೆ 2015 ರಿಂದ 2023ರ ವರೆಗೆ ಕೇಂದ್ರ ಸರ್ಕಾರದ ಆದಾಯವು ದ್ವಿಗುಣಗೊಂಡಿದೆ, ಆದಾಯ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಲಕ್ಷಾಂತರ ಹುದ್ದೆ ಖಾಲಿ ಇದೆ. ಇದರಿಂದಾಗಿ ಇರುವ ಸಿಬ್ಬಂದಿಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಸರ್ಕಾರ ತನ್ನ ಆದಾಯದಲ್ಲಿ ಶೇ 7.29ರಷ್ಟು ಮಾತ್ರ ವೇತನ, ಭತ್ಯೆಗಳಿಗೆ ಬಳಕೆ ಮಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದೆ.
ವೇತನ ಹೆಚ್ಚಳಕ್ಕೆ 10 ವರ್ಷಗಳ ತನಕ ಕಾಯಬೇಕಿಲ್ಲ. ಬೆಲೆ ಏರಿಕೆ ಸೇರಿ ವಿವಿಧ ಅಂಶಗಳನ್ನು ಪರಿಗಣಿಸಿ ವೇತನ ಪರಿಷ್ಕರಿಸಬಹುದು ಎಂಬ ಶಿಫಾರಸು ಇದೆ. ಸರ್ಕಾರವು ಇದುವರೆಗೆ ಈ ಶಿಫಾರಸುಗಳನ್ನು ಅಂಗೀಕರಿಸಿಲ್ಲ ಅಥವಾ 8 ನೇ ಕೇಂದ್ರ ವೇತನ ಆಯೋಗವನ್ನು ರಚನೆ ಮಾಡಿಲ್ಲ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಈಗಾಗಲೇ 1/1/2024ಕ್ಕೆ ಅನ್ವಯವಾಗುವಂತೆ ಶೇ 50ಕ್ಕೆ ಏರಿಕೆಯಾಗಿದೆ.
ಸದ್ಯ ಕೇಂದ್ರದ ಹೆಚ್ಚು ನೌಕರರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿಯಲ್ಲಿ ಇದ್ದಾರೆ. ಅವರ ಪ್ರತಿ ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆಯಲ್ಲಿ ಶೇ 10ರಷ್ಟನ್ನು ಎನ್‌ಪಿಎಸ್‌ಗೆ ಕೊಡುಗೆ ನೀಡಬೇಕು. ಆದ್ದರಿಂದ ನೌಕರರ ಟೇಕ್ ಹೋಮ್ ವೇತನ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಎನ್‌ಪಿಎಸ್ ರದ್ದುಗೊಳಿಸುವ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಮತ್ತು ಇಂದಿನ ದೈನಂದಿನ ಜೀವನದ ಅವಶ್ಯಕತೆಗಳನ್ನು ಸರ್ಕಾರಿ ನೌಕರರ ಬೇಡಿಕೆಯನ್ನು ಪರಿಗಣಿಸಿ 8ನೇ ಕೇಂದ್ರ ವೇತನ ಆಯೋಗವನ್ನು ತಕ್ಷಣವೇ ರಚಿಸಬೇಕು ಮತ್ತು ವೇತನ/ ಭತ್ಯೆಗಳು/ ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications