ವಿಶ್ವದ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ
ನವದೆಹಲಿ, ಅ.23: ವಿಶ್ವದ ಹೆಚ್ಚು ಕಲುಷಿತಗೊಡಿರುವ ನಗರಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿದೆ. ನಾಲ್ಕು ಕಲುಷಿತ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ.
ಈ ಮಾಹಿತಿಯು ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿಯಾದ IQAir ನೀಡಿದೆ. ಈ ಕಂಪಿಯು 2021ರ ವರೆಗಿನ ವಿಶ್ವ ವಾಯು ಗುಣಮಟ್ಟ ವರದಿಯ ಒಂದು ಭಾಗವಾಗಿದೆ.
IQAir ವರದಿ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿ 2021 ರಲ್ಲಿ ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ಅದರ ನಂತರ ಕಲುಷಿತ ನಗರದಗಳ ಪಟ್ಟಿಯಲ್ಲಿ, ಕೋಲ್ಕತ್ತಾ, ಮುಂಬೈ ಮತ್ತು ಹೈದರಾಬಾದ್ ಸೇರಿಕೊಂಡಿವೆ.

ದೆಹಲಿ, ಕೋಲ್ಕತ್ತಾ ಮತ್ತು ಮುಂಬೈ ಈಗಾಗಲೇ ಈ ಪಟ್ಟಿಯಲ್ಲಿದ್ದವು. ಆದರೆ, ಈ ಪಟ್ಟಿಗೆ ಹೊಸದಾಗಿ ಹೈದರಾಬಾದ್ ಸೇರಿರುವುದು ಒಂದು ಆತಂಕದ ವಿಷಯವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಸಾಲಿನಿಂದ ಹೈದರಾಬಾದ್ ಈ ಪಟ್ಟಿಗೆ ಸೇರ್ಪಡೆಯಾಗಿದೆ.
IQAir ನಲ್ಲಿನ ಮಾಹಿತಿಯ ಪ್ರಕಾರ, PM 2.5 ಮಟ್ಟಗಳು 2020ರಲ್ಲಿ ಪ್ರತಿ ಘನ ಮೀಟರ್ ಗಾಳಿಗೆ 34.7 ಮೈಕ್ರೋಗ್ರಾಂಗಳದ್ದು, 2021 ರಲ್ಲಿ 39.4 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 21 ರಂದು IQAir ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ನಗರದಲ್ಲಿನ ವಾಯು ಮಾಲಿನ್ಯದ ಮಟ್ಟವನ್ನು 159 ರ ವಾಯು ಗುಣಮಟ್ಟ ಸೂಚ್ಯಂಕ (AQI) ದೊಂದಿಗೆ ಸೋಲಿಸಿ ಅನಾರೋಗ್ಯಕರ ಎಂದು ವರ್ಗೀಕರಿಸಿದೆ.
ಪ್ರಮುಖ ಮಾಲಿನ್ಯಕಾರಕವೆಂದರೆ ಆಟೋಮೊಬೈಲ್‌ಗಳು ಮತ್ತು ಕೈಗಾರಿಕೆಗಳಿಂದ ಬಿಡುಗಡೆಯಾಗಿವ ಪಾರ್ಟಿಕ್ಯುಲೇಟ್ ಮ್ಯಾಟರ್ (PM) 2.5 ಅಥವಾ ಸಣ್ಣ ಕಣಗಳು ಇದರ ಪ್ರಾಥಮಿಕ ಮೂಲಗಳು ಎನ್ನಲಾಗಿದೆ. ತಜ್ಞರು ಹೇಳುವ ಪ್ರಕಾರ ವಾಹನಗಳು ನಗರದಲ್ಲಿನ ವಾಯುಮಾಲಿನ್ಯದ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತವೆ.

ಹೈದರಾಬಾದ್‌ನಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್ 2.5 ಸಾಂದ್ರತೆಯು ಪ್ರತಿ ಘನ ಮೀಟರ್ ಗಾಳಿಗೆ 70.4 ಮೈಕ್ರೋಗ್ರಾಂಗಳಷ್ಟಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ವಾರ್ಷಿಕ ವಾಯು ಗುಣಮಟ್ಟದ ಮಾರ್ಗದರ್ಶಿ ಮೌಲ್ಯಕ್ಕಿಂತ 14.1 ಪಟ್ಟು ಹೆಚ್ಚು.
ಪಳೆಯುಳಿಕೆ ಇಂಧನ ದಹನ, ನಿರ್ಮಾಣ, ಭೂಕುಸಿತ ಮತ್ತು ಘನ ತ್ಯಾಜ್ಯದ ಭೂಮಿಯಲ್ಲಿ ಹೂಳುವುದು ಕೂಡ ಹೈದರಾಬಾದ್ ನಗರದಲ್ಲಿ ವಾಯು ಗುಣಮಟ್ಟ ಹದಗೆಡಲು ಕಾರಣ. ಇದರ ಜೊತೆಗೆ ವಾಹನ ಮಾಲಿನ್ಯ ಕೂಡ ವಾಯು ಮಾಲಿನ್ಯಕ್ಕೆ ದೊಡ್ಡ ಕಾರಣವೆಂದು ಹೇಳಲಾಗಿದೆ.
ಈ ವರದಿಗಾಗಿ ನವೆಂಬರ್ 20, 2020 ರಿಂದ ನವೆಂಬರ್ 20, 2021 ರವರೆಗೆ ದೇಶದ ವಿವಿದ ನಗರಗಳ ಮಾಲಿನ್ಯದ ಮಟ್ಟವನ್ನು ವಿಶ್ಲೇಷಿಸಲಾಗಿದೆ. ಫಲಿತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ (NAAQS) ಉಲ್ಲೇಖಿಸಿದಂತೆ ನಿಗದಿತ ಗಾಳಿಯ ಗುಣಮಟ್ಟದ ಮಾನದಂಡಗಳೊಂದಿಗೆ ಹೋಲಿಸಿ ವರದಿ ನೀಡಲಾಗಿದೆ.












Click it and Unblock the Notifications