ದೆಹಲಿಯ ಕೆಂಪುಕೋಟೆ ಬಳಿ ಸ್ಫೋಟದಲ್ಲಿ 9 ಸಾವು, 24 ಮಂದಿಗೆ ಗಾಯ?
ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದ ತೀವ್ರತೆ ಹಿನ್ನೆಲೆ ಭಾರಿ ದೊಡ್ಡ ಹಾನಿ ಉಂಟಾಗಿದೆ. ದಿಢೀರ್ ಕಾರಿನ ಒಳಗಡೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಈವರೆಗೂ 9 ಸಾವು, 24 ಮಂದಿಗೆ ಗಾಯವಾಗಿದೆ ಎನ್ನಲಾಗಿದ್ದು. ಹೆಚ್ಚಿನ ಮಾಹಿತಿ ಈಗಷ್ಟೇ ಸಿಗಬೇಕಿದೆ, ಈ ಘಟನೆಯ ನಂತರ ಇಡೀ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ದೆಹಲಿ ರಾಷ್ಟ್ರ ರಾಜಧಾನಿ ಆಗಿದ್ದು, ದೇಶದ ಪವರ್ ಹೌಸ್ ಅಂತಾ ಕೂಡ ಕರೆಯುತ್ತಾರೆ. ಅಲ್ಲಿರುವ ಕೆಂಪು ಕೋಟೆ ಕೂಡ ಹೆಚ್ಚು ಭದ್ರತೆ ಇರುವ ಸ್ಥಳವಾಗಿದ್ದು, ಪ್ರತಿಕ್ಷಣವೂ ಹದ್ದಿನ ಕಣ್ಣಿಟ್ಟು ಭದ್ರತಾ ಸಿಬ್ಬಂದಿ ಕಾಯುತ್ತಾರೆ. ಇಂತಹ ಪರಿಸ್ಥಿತಿ ಇದ್ದಾಗಲೂ ದಿಢೀರ್ ಇಂದು ಭೀಕರ ಸ್ಫೋಟ ಸಂಭವಿಸಿ ದೊಡ್ಡ ಪ್ರಮಾಣದಲ್ಲಿ ಸಾವು & ನೋವು ಉಂಟಾಗಿದೆ. ಅದರಲ್ಲೂ ಕೆಂಪು ಕೋಟೆ ಬಳಿ ಸ್ಫೋಟದಲ್ಲಿ ಈವರೆಗೆ 9ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 24 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ಇದೀಗ ದೇಶದ ಮೂಲೆ ಮೂಲೆಯಲ್ಲೂ ಭಾರಿ ದೊಡ್ಡ ಪ್ರಮಾಣದಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಲ್ಲೂ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ.













Click it and Unblock the Notifications