ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಜಾಮಾ ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ವಾಪಸ್

|
Google Oneindia Kannada News

ನವದೆಹಲಿ, ನವೆಂಬರ್ 25: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರೊಂದಿಗಿನ ಮಾತುಕತೆಯ ನಂತರದಲ್ಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಗುರುವಾರ ಮಸೀದಿಯಲ್ಲಿ ಮಹಿಳೆಯರ ಪ್ರವೇಶದ ಕುರಿತು ನಿಷೇಧದ ಆದೇಶವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ.

ಪ್ರವಾಸಿಗರು ಹಾಗೂ ಸಂದರ್ಶಕರು ಜಾಮಾ ಮಸೀದಿಯ ಪಾವಿತ್ರ್ಯವನ್ನು ಗೌರವಿಸುವ ಮತ್ತು ನಿರ್ವಹಿಸುವ ಷರತ್ತಿನ ಮೇಲೆ ಇಮಾಮ್ ಬುಖಾರಿ ಈ ಹಿಂದಿನ ಆದೇಶವನ್ನು ವಾಪಸ್ ಪಡೆದುಕೊಳ್ಳಲು ಒಪ್ಪಿದರು ಎಂದು ತಿಳಿದು ಬಂದಿದೆ.

ಸೈಬರ್ ದಾಳಿ ಶಂಕೆ: ದೆಹಲಿ ಏಮ್ಸ್ ಆಸ್ಪತ್ರೆಯ ಸರ್ವರ್ ಡೌನ್ ಸೈಬರ್ ದಾಳಿ ಶಂಕೆ: ದೆಹಲಿ ಏಮ್ಸ್ ಆಸ್ಪತ್ರೆಯ ಸರ್ವರ್ ಡೌನ್

ದೆಹಲಿಯ ಜಾಮಾ ಮಸೀದಿಯ ಆಡಳಿತ ಮಂಡಳಿಯು ಬುಧವಾರ ಮುಖ್ಯ ದ್ವಾರಗಳ ಹೊರಗೆ ಏಕಾಂಗಿಯಾಗಿರಲಿ ಅಥವಾ ಗುಂಪುಗಳಲ್ಲಿ ಇರಲಿ 'ಹುಡುಗಿಯರ ಮಸೀದಿ ಪ್ರವೇಶವನ್ನು ನಿಷೇಧಿಸುವ ಬಗ್ಗೆ ನೋಟಿಸ್ ಅನ್ನು ಅಂಟಿಸಿತ್ತು. ಈ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಮಸೀದಿಯ ಶಾಹಿ ಇಮಾಮ್ ಗುರುವಾರ ಪ್ರಾರ್ಥನೆ ಸಲ್ಲಿಸಲು ಬರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಿದ್ದರು.

Delhi’s Jama Masjid Withdraws Ban Order On Girls Entry after Lt Governor’s Request

ಮಹಿಳಾ ಹಕ್ಕುಗಳಿಗೆ ವಿರೋಧ:

ಜಾಮಾ ಮಸೀದಿಯಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿರುವ ಕ್ರಮವು ಮಹಿಳೆಯರ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದರು. ಜಾಮಾ ಮಸೀದಿ ನಿರ್ಧಾರವು ಸ್ವೀಕಾರಾರ್ಹವಲ್ಲ ಎಂದು ಕರೆದಿದ್ದು ಕೆಲವು ಭಾಗಗಳಲ್ಲಿ ಮಹಿಳೆಯರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿಂದೆ ದಿನಾಂಕವನ್ನು ಉಲ್ಲೇಖಿಸದ ನೋಟಿಸ್‌ಗಳು ಮಸೀದಿಯ ಮೂರು ಮುಖ್ಯ ಪ್ರವೇಶ ದ್ವಾರಗಳ ಹೊರಗೆ ಅಂಟಿಸಲಾಗಿದ್ದವು ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿದ್ದವು. ಆದಾಗ್ಯೂ, ಇದು ಇದೀಗ ಗಮನಕ್ಕೆ ಬಂದಿದೆ.

"ಜಾಮಾ ಮಸೀದಿಯು ಹುಡುಗಿಯ ಅಥವಾ ಹುಡುಗಿಯರ ಪ್ರವೇಶವನ್ನು ಅನುಮತಿಸಲಾಗಿಲ್ಲ," ಎಂದು 17ನೇ ಶತಮಾನದ ಮೊಘಲ್ ಯುಗದ ಸ್ಮಾರಕದ ಆಡಳಿತದ ಸೂಚನೆಯನ್ನು ಉಲ್ಲೇಖಿಸಿತ್ತು. ಇದೊಂದು ಸಂದೇಶವೇ ಸಾವಿರಾರು ವಿಹಾರಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.

English summary
Delhi’s Jama Masjid Withdraws Ban Order On Girls Entry after Lt Governor’s Request. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X