ಪ್ರವಾಹದ ನೀರಲ್ಲೇ ದೇಶದ ರಾಜಧಾನಿಯಲ್ಲಿ ಮಕ್ಕಳ ನೀರಾಟ!
ದೆಹಲಿ: ಭೀಕರ ಪ್ರವಾಹದ ಬಲೆಗೆ ಸಿಲುಕಿ ನಲುಗಿ ಹೋಗಿದ್ದ ರಾಷ್ಟ್ರ ರಾಜಧಾನಿ ದೆಹಲಿ ಈಗ ನಿಟ್ಟುಸಿರು ಬಿಟ್ಟಿದೆ. ಅದರಲ್ಲೂ ದೆಹಲಿ ಜನರು ಯಮುನಾ ನದಿಯ ಅಬ್ಬರವನ್ನು ನೋಡಿ ಬೆಚ್ಚಿಬಿದ್ದಿದ್ದರು. ಈಗ ಪ್ರವಾಹ ಇಳಿಕೆಯಾದ ನಂತರ, ಅದೇ ನೀರಲ್ಲಿ ದೆಹಲಿಯ ಜನರು ಆಟವಾಡಿದ್ದಾರೆ. ಅದರಲ್ಲೂ ದೆಹಲಿಯ ಮಕ್ಕಳು ಪ್ರವಾಹದ ನೀರಲ್ಲಿ ಮೋಜು, ಮಸ್ತಿ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
Delhi Home Guards on duty need to actively ensure people don’t turn this sewage mixed water into recreation points.
— Sreya (@Sreya_Chattrjee) July 15, 2023
If this can’t be stopped we are moving towards a health hazard. pic.twitter.com/BQw3q2foIl
ಅಷ್ಟಕ್ಕೂ ಮೊನ್ನೆ ಮೊನ್ನೆಯಷ್ಟೇ ನವದೆಹಲಿ ಯುಮುನಾ ನದಿ ಅಬ್ಬರದಲ್ಲಿ ಮುಳುಗಿತ್ತು. ಈಗ ಪ್ರವಾಹದ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆಗಳಿಂದ ಹೊರ ಬರುತ್ತಿರುವ ದೆಹಲಿ ಜನ ನಡು ರಸ್ತೆಯಲ್ಲೇ ಹರಿಯುವ ನೀರಿಗೆ ಮೈಯೊಡ್ಡಿ ಆಟವಾಡಿದ್ದಾರೆ. ಅದ್ರಲ್ಲೂ ಮಕ್ಕಳು ಸಖತ್ ಎಂಜಾಯ್ ಮಾಡಿದ್ದು, ದೊಡ್ಡವರು ಕೂಡ ಮಕ್ಕಳ ಈ ತುಂಟಾಟಕ್ಕೆ ಸಾಥ್ ನೀಡಿದ್ದಾರೆ. ಕಳೆದ ಒಂದು ವಾರದಿಂದ ದೆಹಲಿಯ ಜನ ಭಯದಲ್ಲಿ ಮುಳುಗಿದ್ರು. ಬಹುತೇಕ ದೆಹಲಿ ಯಮುನಾ ನದಿಯ ಪ್ರವಾಹದಲ್ಲಿ ಮುಳುಗಿ ಹೋಗಿತ್ತು. ಈಗ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದ್ದು, ಜನರು ಕೂಡ ರಿಲ್ಯಾಕ್ಸ್ ಆಗಿದ್ದಾರೆ.

ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ
ಅತ್ತ ದೆಹಲಿಯಲ್ಲಿ ಮಳೆ ನಿಂತಿದ್ದರೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಮಳೆ ನಿಂತಿಲ್ಲ ಈ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಅಲ್ಲದೆ ಜುಲೈ 17ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ಆರೆಂಜ್ ಅಲರ್ಟ್ ಕೂಡ ಘೋಷಿಸಿದೆ. ಜುಲೈ 18ರಂದು ಯಲ್ಲೊ ಅಲರ್ಟ್ ಘೋಷಿಸಿದ್ದು, ದಿಢೀರ್ ಪ್ರವಾಹ, ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಹೀಗಾಗಿಯೇ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಕೈಮೀರಿ ಹೋಗುತ್ತಿದೆ. ಅಲ್ಲದೆ ದೆಹಲಿಗೂ ಮತ್ತೆ ಕಂಟಕ ಎದುರಾಗುತ್ತಾ? ಎಂಬ ಭಯ ಕೂಡ ಈಗ ಆವರಿಸಿದೆ. ಕೇಜ್ರಿವಾಲ್ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ.
ಭೋರ್ಗರೆದ ಯಮುನಾ ನದಿ ಪ್ರವಾಹ
ಉಕ್ಕಿ ಹರಿಯುತ್ತಿರುವ ಯಮುನಾ ನದಿಯು ಅದೆಷ್ಟು ಭಯಾನಕವಾಗಿ ಕಾಣುತ್ತಿದೆ ಅಂದ್ರೆ, ಜೀವನದಿ ಎಂದು ಕರೆಸಿಕೊಳ್ಳುವ ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವಿನ ಮಟ್ಟ ಸುಮಾರು 40 ವರ್ಷ ಹಿಂದಿನ ದಾಖಲೆಯನ್ನೂ ಧೂಳ್ ಮಾಡಿದೆ. 200 ಮೀಟರ್ ಮೇಲ್ಮಟ್ಟದಲ್ಲಿ ಯಮುನಾ ಹರಿಯುತ್ತಿತ್ತು ಆದರೆ ಈಗ ಒಂದಷ್ಟು ಕಡಿಮೆ ಆಗಿದೆ. ಹರಿಯಾಣದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಹೀಗಾಗಿ ಯಮುನೆ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ. ಈಗೀಗ ಒಂದಷ್ಟು ಹಿಡಿತಕ್ಕೆ ಬರುತ್ತಿದ್ದರೂ ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿರುವುದು ಆತಂಕ ಮೂಡಿಸಿದೆ.
ಒಟ್ನಲ್ಲಿ ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ದೆಹಲಿ ಜಗ ಈಗಷ್ಟೇ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಆದರೂ ಪ್ರವಾಹದ ಭೀತಿ ಸಂಪೂರ್ಣವಾಗಿ ಮಾಯವಾಗಿಲ್ಲ. ಇದೇ ಕಾರಣಕ್ಕೆ ಕೇಜ್ರಿವಾಲ್ ಸರ್ಕಾರ ಅಲರ್ಟ್ ಆಗಿದ್ದು, ಮುಂದಿನ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದೆ. ಈ ಮಧ್ಯೆ ದೆಹಲಿ ಪ್ರವಾಹ ಕೂಡ ರಾಜಕೀಯ ಕಾರಣಕ್ಕೆ ಸುದ್ದಿಯಾಗಿ ಸದ್ದು ಮಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸ್ವಲ್ಪವಾದರೂ ಪ್ರವಾಹ ಕಡಿಮೆ ಆಗಿದೆಯಲ್ಲ ಅಂತಾ ದೆಹಲಿ ಜನ ಖುಷಿಯಾಗಿದ್ದಾರೆ.












Click it and Unblock the Notifications