ಉಗ್ರರ ಭೀತಿ: 4 ರಾಜ್ಯಗಳ 22 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್, 07 : ಪಾಕಿಸ್ತಾನ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಮಾಹಿತಿ ಮೇರೆಗೆ ದೇಶದ 4 ರಾಜ್ಯಗಳ 22 ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ಪಾಕ್ ಗಡಿಯ ಪಂಜಾಬ್, ಜಮ್ಮು ಮತ್ತು ಕಾಶ್ಮೀರ್, ಗುಜರಾತ್, ಹಾಗೂ ರಾಜಸ್ಥಾನದ ಎಲ್ಲಾ ವಿಮಾನ ನಿಲ್ದಾಣಗಳು ಉಗ್ರರ ಟಾರ್ಗೆಟ್ ಆಗಿವೆ. ಇದರಿಂದ ಬಿಗಿ ಭದ್ರತೆ ಕೈಗೊಳ್ಳಿ ಎಂದು ಆಯಾ ರಾಜ್ಯಗಳ ಮುಖ್ಯ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಪತ್ರ ಬರೆದಿದೆ.

Warning Of Possible Attack Sent To 22 Airports Including Delhi

ಗುಪ್ತರಚರ ಇಲಾಖೆ ಮಾಹಿತಿ ನೀಡಿದ ಮೇರೆಗೆ ನಾಲ್ಕು ರಾಜ್ಯಗಳ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು. ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕ ಬ್ಯಾಗ್, ಸರಕು ಸಾಗಣೆ ಸ್ಥಳಗಳ ಮೇಲೆ ಕಣ್ಣಿಡಲಿದೆ.

ಪಾಕ್ ಗಡಿಯಲ್ಲಿ ಭಾರತ ನಡೆಸಿದ ದಾಳಿಯ ನಂತರ ಲಷ್ಕರ್ ಸೇರಿದಂತೆ ಪಾಕ್ ನ ಭಯೋತ್ಪಾದನಾ ಸಂಘಟನೆಗಳು ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಹಬ್ಬದ ಸೀಸನ್ ನಲ್ಲಿ ಪ್ರಮುಖ ನಗರಗಳ ಜನಸಂದಣಿ ಪ್ರದೇಶಗಳು ಭಯೋತ್ಪಾದಕರ ಗುರಿಯಾಗಿವೆ. ಹಾಗಾಗಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸಿ ಐ ಎಸ್ ಎಫ್ ನಿರ್ದೇಶಕ ಜನರಲ್ ಓ.ಪಿ ಸಿಂಗ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Intelligence agencies have warned of a possible terror attack at airports in four states as well as Delhi. 22 airports in the four states have been sent detailed warnings and authorities have confirmed high security measures are being implemented.
Please Wait while comments are loading...