ದೆಹಲಿ ಸುಗ್ರೀವಾಜ್ಞೆ ಇಂದು ಸಂಸತ್ತಿನಲ್ಲಿ ಮಂಡನೆ ಆಗದು: ಪ್ರಹ್ಲಾದ್ ಜೋಶಿ
ನವದೆಹಲಿ, ಜುಲೈ 31: ದೆಹಲಿ ಆಡಳಿತ ಸೇವೆಗಳ ನಿಯಂತ್ರಣದ ಸುಗ್ರೀವಾಜ್ಞೆ(Delhi Ordinance) ಬದಲಿಸುವ ಮಸೂದೆ ಇಂದಿನ ಸಂಸತನಲ್ಲಿ ಚರ್ಚೆಗೆ ಪಟ್ಟಿ ಮಾಡಲಾಗಿದೆ. ಇಂದು ಆ ಕುರಿತು ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವುದಿಲ್ಲ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದೆಹಲಿ ಸುಗ್ರೀವಾಜ್ಞೆ ಮಸೂದೆ ಯಾವಾಗ ಪರಿಚಯಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದರು. ಇಂದಿನ ವ್ಯವಹಾರಗಳ ಪಟ್ಟಿಯಲ್ಲಿ ಮಸೂದೆ ಬಗ್ಗೆ ಉಲ್ಲೇಖಿಸಲಾಗಿಲ್ಲ ಎಂದರು.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾದ ದಿನದಿಂದ ಹತ್ತು ದಿನಗಳ ಒಳಗೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುವುದು ಇಂದು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ನಾವು ಮೊದಲ ದಿನದಿಂದಲೂ ವಿರೋಧ ಪಕ್ಷದವರ ಬೇಡಿಕೆಯನ್ನು ಆಲಿಸುತ್ತಿದ್ದೇವೆ. ಸದನದಲ್ಲಿ ಮಣಿಪುರದ ಬಗ್ಗೆ ಚರ್ಚೆ ಮಾಡುವಂತೆ ಅವರು ಕೇಳಿದ್ದರು. ನಾವು ಅದಕ್ಕೆ ಒಪ್ಪಿದ್ದೇವು. ಆದರೆ ಅವರು ತಮ್ಮ ಬೇಡಿಕೆಯನ್ನು ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರ ವಿಚಾರವಾಗಿ ಸದನದಲ್ಲಿ ಮಾತನಾಡಬೇಕು ಎಂದು ಅವರು ಬಯಸಿದ್ದಾರೆ. ಈ ಮೂಲಕ ಅವರು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಮೇಘವಾಲ್ ಮಾಹಿತಿ ನೀಡಿದರು.
ಎಎಪಿಯಿಂದ ಸಂಸದರಿಗೆ ವಿಪ್ ಜಾರಿ
ಸೋಮವಾರ ಬೆಳಗ್ಗೆ ಆಮ್ ಆದ್ಮಿ ಪಕ್ಷವು (AAP) ತನ್ನೆಲ್ಲ ರಾಜ್ಯಸಭಾ ಸಂಸದರಿಗೆ ಜುಲೈ 31 ರಿಂದ ಆಗಸ್ಟ್ 4 ರವರೆಗೆ ಸದನದಲ್ಲಿ ಹಾಜರಿರಲು ಮೂರು ಸಾಲಿನ ವಿಪ್ ಅನ್ನು ಜಾರಿಗೊಳಿಸಿದೆ. ದೆಹಲಿಯಲ್ಲಿ ಆಡಳಿತ ಸೇವೆಗಳ ನಿಯಂತ್ರಣದ ಸುಗ್ರೀವಾಜ್ಞೆ ಮಸೂದೆ ಹಿಂಪಡೆಯುವ ವಿಚಾರದಲ್ಲಿ ಪಕ್ಷದ ನಿಲುವನ್ನು ಬೆಂಬಲಿಸುವಂತೆ ಸೂಚಿಸಿದೆ.

ದೆಹಲಿಯಲ್ಲಿ ಸೇವೆಗಳ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯು ಈ ವಾರದ ಲೋಕಸಭೆ ಮತ್ತು ರಾಜ್ಯಸಭೆ ಮುಂದಿದೆ.
ಸಂಸತ್ ವ್ಯವಹಾರಗಳ ಕುರಿತು ಮಾಹಿತಿ
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಸರ್ಕಾರದ ವ್ಯವಹಾರಗಳ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರಾಜ್ಯಸಭೆಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಮುಂಬರುವ ವಾರದಲ್ಲಿ ಸರ್ಕಾರದ ಮುಂದಿರುವ ಚರ್ಚೆಗಳ ಪಟ್ಟಿ ಕುರಿತು ವಿವರಿಸಿದ್ದಾರೆ.
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ- 2023, ದೆಹಲಿ ಶಾಸಕಾಂಗ ವನ್ನು ಸೇವೆಗಳಿಂದ ಹೊರಗಿಡುವ ದುರುದ್ದೇಶದಿಂದ ಹೊರಗಿಡುವ ಕೇಂದ್ರವು ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಬದಲಿಸಲು ಪ್ರಯತ್ನಿಸಿತು. ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಆದೇಶದ ನಂತರ ಕೆಲವೇ ದಿನಗಳ ಬಳಿಕ ಕೇಂದ್ರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು.
ಮಸೂದೆ ಅಂಗೀಕಾರ ವಿಶ್ವಾಸ
ದೆಹಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಈ ಸುಗ್ರೀವಾಜ್ಞೆ ವಿರುದ್ಧ ಪ್ರತಿಪಕ್ಷಗಳ ಬೆಂಬಲವನ್ನು ಕೋರಿದ್ದಾರೆ. ಈ ವೇಳೆ ಮೌನವಹಿಸಿದ್ದ ಕಾಂಗ್ರೆಸ್ ತಡವಾಗಿ ತನ್ನ ಬೆಂಬಲ ಕುರಿತು ತಿಳಿಸಿತು. ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (I.N.D.I.A) ಸದಸ್ಯರು ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ವಿರೋಧಿಸಲಿದ್ದಾರೆ. ಇತ್ತ ಕೇಂದ್ರ ಮಾತ್ರ ಈ ಮಸೂದೆಗೆ ಅಂಗಿಕಾರ ಪಡೆಯುವ ವಿಶ್ವಾಸದಲ್ಲಿದೆ.












Click it and Unblock the Notifications