Delhi Metro: ಪೋಷಕರಿಂದ ತಪ್ಪಿಸಿಕೊಂಡ ಪುಟ್ಟ ಬಾಲಕ: CISF ಯೋಧನ ನೆರವಿನಿಂದ ತಾಯಿಯ ಮಡಿಲಿಗೆ!, ಭಾವನಾತ್ಮಕ ವಿಡಿಯೋ ವೈರಲ್
Delhi Metro: ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿತ್ತು. ಆದರೆ ಇದೀಗ ಒಳ್ಳೆಯ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ದೆಹಲಿ ಮೆಟ್ರೋದ ಬಗ್ಗೆ ಚರ್ಚೆ ನಡೆದಿದೆ. CISF ಯೋಧರೊಬ್ಬರ ಮಾತು ಇದೀಗ ವೈರಲ್ ಆಗುತ್ತಿದ್ದು, ತಾಯಿ ಮತ್ತು ಕಳೆದು ಹೋದ ಮಗು ಸೇರುವ ಭಾವನಾತ್ಮಕ ಕ್ಷಣಗಳಿಗೆ ದೆಹಲಿ ಮೆಟ್ರೋ ಸಾಕ್ಷಿಯಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ದೆಹಲಿಯ ಮೆಟ್ರೋ ನಿಲ್ದಾಣವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಪುಟ್ಟ ಬಾಲಕನೊಬ್ಬ ತಂದೆ - ತಾಯಿಂದ ತಪ್ಪಿಸಿಕೊಂಡಿದ್ದಾನೆ. ಮೆಟ್ರೋದ ಸಿಬ್ಬಂದಿ ಹಾಗೂ CISF ಯೋಧ ಸಹಾಯದಿಂದ ಮಗು ಫೋಷಕರ ಮಡಿಲು ಸೇರಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯೋಧರೊಬ್ಬರು ಬಾಲಕನ ಪೋಷಕರು ಪತ್ತೆ ಆಗುವವ ವರೆಗೂ ಆ ಮಗುವನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು.

ಮೆಟ್ರೋ ಇಳಿದು ಬಂದ ತಾಯಿ ಮಗುವನ್ನು ನೋಡಿದ ಕೂಡಲೇ ಓಡೋಡಿ ಬಂದು ಮಗುವನ್ನು ತಬ್ಬಿಕೊಂಡಿದ್ದಾರೆ. ಮಗು ಸಹ ತಂದೆ - ತಾಯಿಯನ್ನು ನೋಡಿ ಪ್ರೀತಿಯಿಂದ ತಬ್ಬಿಕೊಂಡಿರುವ ದೃಶ್ಯಗಳು ವೈರಲ್ ವಿಡಿಯೋದಲ್ಲಿದೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ವೈರಲ್ ಆಗಿದ್ದು, ಭಯದಲ್ಲಿದ್ದ ಮಗುವನ್ನು ತನ್ನ ಕುಟುಂಬಕ್ಕೆ ಹಿಂತಿರುಗಿಸಲು ಸಹಾಯ ಮಾಡಿದ್ದಕ್ಕಾಗಿ ಜನರು ಭದ್ರತಾ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.
ರೋಷನ್ ಎನ್ನುವವರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹುಡುಗನ ತಾಯಿ ರೈಲಿನಿಂದ ಓಡಿ ಬರುತ್ತಿರುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ತಾಯಿ ಮತ್ತು ತಂದೆ ತಮ್ಮ ಮಗುವನ್ನು ಕರೆದುಕೊಂಡು ಹೋಗಲು ಓಡಿಹೋದಾಗ ಅವನ ತಂದೆ ಅವರ ಹಿಂದೆಯೇ ಇದ್ದರು. ಹುಡುಗನ ತಾಯಿ ಅವನನ್ನು ನೋಡಿದ ತಕ್ಷಣ, ಅವನನ್ನು ಬಿಗಿಯಾಗಿ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಕುಟುಂಬವು ಕೊನೆಗೂ ಒಂದಾಯಿತು. ಮೆಟ್ರೋದ ಜನದಟ್ಟಣೆಯಲ್ಲಿ ಮಗು ತಂದೆ - ತಾಯಿಂದ ತಪ್ಪಿಸಿಕೊಂಡಿತ್ತು. ಫೋಷಕರು ಹಿಂದಿರುಗಿದಾಗ ಮಗುವಿನ ಮುಖದಲ್ಲಿ ಸಂತೋಷ, ನೋವು, ಭಯ ಹೋದ ಎಲ್ಲ ಭಾವಗಳು ಏಕಕಾಲಕ್ಕೆ ಕಾಣಿಸಿಕೊಂಡಿತು.
ಭಾವನಾತ್ಮಕ ಕ್ಷಣಗಳ ನಡುವೆ, ಒಬ್ಬರು ಸಹ ಪ್ರಯಾಣಿಕರು ಪೋಷಕರಿಗೆ ಕೆಲವು ಪ್ರಾಯೋಗಿಕ ಸಲಹೆಯನ್ನು ನೀಡಿದರು. "ಮಗು ಫೋನ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಅವನಿಗೆ ವಿಳಾಸ ತಿಳಿದಿದೆ, ಆದರೆ ಅವನಿಗೆ ಫೋನ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಕಲಿಸಿ' ಎಂದು ಅವರು ಸಲಹೆ ನೀಡಿದ್ದಾರೆ. ಆದರೆ ಸಿಐಎಸ್‌ಎಫ್ ಯೋಧರೊಬ್ಬರು ಧೈರ್ಯ ತುಂಬುವ ಮಾತುಗಳು ಗಮನ ಸೆಳೆದಿದೆ. "ಟೆನ್ಷನ್ ಮತ್ ಲೋ, ಹಮ್ ಲೋಗ್ ಲಗೇ ಹೈನ್ ಸೇವಾ ಮೇ (ಚಿಂತಿಸಬೇಡಿ, ನಾವು ಸೇವೆ ಮಾಡಲು ಮತ್ತು ಸಹಾಯ ಮಾಡಲು ಇಲ್ಲಿದ್ದೇವೆ)' ಎಂದು ಅವರು ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.
Delhi Metro: ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 1.4 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಡಿಯೊವನ್ನು ನೋಡಿದ್ದಾರೆ ಮತ್ತು ಅನೇಕರು ಈ ದಯಸ್ಪರ್ಶಿ ವಿಡಿಯೋಗೆ ಮನಸೋತಿದ್ದಾರೆ. ಮಗುವನ್ನು ಜನನಿಬಿಡ ಸಾರ್ವಜನಿಕ ಸ್ಥಳದಲ್ಲಿ ಒಂಟಿಯಾಗಿ ಬಿಡದಂತೆ ನೋಡಿಕೊಂಡ ಸಿಐಎಸ್‌ಎಫ್‌ಗೆ ಧನ್ಯವಾದ ಹೇಳಿದ್ದಾರೆ.


Click it and Unblock the Notifications
