ದೆಹಲಿ: ಲಿವ್-ಇನ್ ಸಂಗಾತಿಯನ್ನು ಕೊಂದ ಅಂದೇ ಮತ್ತೊಬ್ಬಳ ಮದುವೆಯಾದವ ಅರೆಸ್ಟ್!

ಲಿವ್-ಇನ್ ಸಂಗಾತಿಯನ್ನು ಕೊಂದ ಅಂದೇ ಮತ್ತೊಬ್ಬಳನ್ನು ಮದುವೆಯಾದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ

ಫೆಬ್ರವರಿ
15:
ದೆಹಲಿಯ
ಯುವತಿಯೊಬ್ಬಳು
ತನ್ನ
ಪ್ರಿಯಕರನಿಂದ
ಹತ್ಯೆಗೀಡಾಗಿರುವುದು
ಬೆಳಕಿಗೆ
ಬಂದಿದೆ.
ಚಾರ್ಜಿಂಗ್
ಕೇಬಲ್‌ನಿಂದ
ಆಕೆಯ
ಕತ್ತು
ಹಿಸುಕಿ
ಕೊಂದು
ಬಳಿಕ
ಮೃತದೇಹವನ್ನು
ಫ್ರಿಡ್ಜ್‌ನಲ್ಲಿ
ತುಂಬಿಡಲಾಗಿದೆ.
23
ವರ್ಷದ
ನಿಕ್ಕಿ
ಯಾದವ್
ಅವರ
ಮೃತದೇಹ
ಮಂಗಳವಾರ
ಆಕೆಯ
ಗೆಳೆಯ
ಸಾಹಿಲ್
ಗೆಹ್ಲೋಟ್
ಅವರ
ಕುಟುಂಬದ
ಒಡೆತನದ
ರೆಸ್ಟೋರೆಂಟ್‌ನ
ಫ್ರಿಡ್ಜ್‌ನಲ್ಲಿ
ಪತ್ತೆಯಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಆರೋಪಿ

ಸಾಹಿಲ್
(24)
ನನ್ನು
ಪೊಲೀಸರು
ಬಂಧಿಸಿದ್ದಾರೆ.
ನಿಕ್ಕಿ
ಯಾದವ್
ನೈಋತ್ಯ
ದೆಹಲಿಯಲ್ಲಿ
ತನ್ನ
ಬಾಡಿಗೆ
ಮನೆಗೆ
ಪ್ರವೇಶಿಸಿದ
ಸಿಸಿಟಿವಿ
ದೃಶ್ಯಾವಳಿಗಳಲ್ಲಿ
ಕೊನೆಯದಾಗಿ
ಕಂಡುಬಂದಿದ್ದಾರೆ.
ಆಕೆಯ
ಕುಟುಂಬ
ಹರಿಯಾಣದ
ಜಜ್ಜರ್‌ನಲ್ಲಿ
ನೆಲೆಸಿದೆ.
ಫೆಬ್ರವರಿ
9
ವಿಡಿಯೊದಲ್ಲಿ
ಅವಳು
ಒಬ್ಬಂಟಿಯಾಗಿದ್ದಾಳೆ.
ಕೆಲವು
ಗಂಟೆಗಳ
ನಂತರ
ಆಕೆಯನ್ನು
ಸಾಹಿಲ್
ಗೆಹ್ಲೋಟ್
ಕೊಂದಿದ್ದಾನೆ
ಎಂದು
ಪೊಲೀಸರು
ಹೇಳಿದ್ದಾರೆ.

id='are-slot-2'
class='oiad
oi-axt
oiadv'>

ಸಿಸಿಟಿವಿ ದೃಶ್ಯ ಪರಿಶೀಲನೆ

ಸಿಸಿಟಿವಿ ದೃಶ್ಯ ಪರಿಶೀಲನೆ

ಮನೆಯಿಂದ ಸ್ವಲ್ಪ ದೂರದಲ್ಲಿ ಸಾಹಿಲ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ನಿಕ್ಕಿ ಸುಮಾರು ಮೂರು ಗಂಟೆಗಳ ಕಾಲ ಕಾರಿನೊಳಗೆ ಜಗಳವಾಡಿದ್ದಾರೆ. ಬಳಿಕ ಜಗಳ ಉಲ್ಬಣಗೊಳ್ಳುತ್ತಿದ್ದಂತೆ ಸಾಹಿಲ್ ಚಾರ್ಜಿಂಗ್ ಕೇಬಲ್ ಬಳಸಿ ನಿಕ್ಕಿಯ ಕತ್ತು ಹಿಸುಕಿದ್ದಾನೆ. ಶವವನ್ನು ತಮ್ಮ ಕುಟುಂಬದ ರೆಸ್ಟೋರೆಂಟ್‌ನ ಫ್ರೀಜರ್‌ನಲ್ಲಿ ಇಟ್ಟಿದ್ದು ಬೆಳಕಿಗೆ ಬಂದಿದೆ.


"ನಾವು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸಾಕ್ಷ್ಯವನ್ನು ಸಂಗ್ರಹಿಸಲು ಮತ್ತು ಏನಾಯಿತು ಎಂಬುದನ್ನು ತಿಳಿಯಲು ಹೆಚ್ಚಿನದನ್ನು ಸ್ಕ್ಯಾನ್ ಮಾಡುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ

ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ

ನಿಕ್ಕಿ ತನ್ನ ಲಿವ್-ಇನ್ ಸಂಗಾತಿ ಇನ್ನೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆಂದು ತಿಳಿದಿರಲಿಲ್ಲ. ಆತನ ಮದುವೆಗೆ ಒಂದು ದಿನ ಮುಂಚಿತವಾಗಿ ಆಕೆಗೆ ಈ ವಿಷಯ ತಿಳಿಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೇರೆಯವರನ್ನು ಮದುವೆಯಾದರೆ ಕೇಸು ದಾಖಲಿಸುವುದಾಗಿ ನಿಕ್ಕಿ ಬೆದರಿಕೆ ಹಾಕಿದ್ದಾಳೆ ಎಂದು ಕೆಲವು ವರದಿಗಳು ಹೇಳಿವೆ. ಇತರ ವರದಿಗಳು ಆಕೆ ಗೋವಾಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಳು ಮತ್ತು ತನ್ನೊಂದಿಗೆ ಹೋಗಲು ಅವನನ್ನು ಒತ್ತಾಯಿಸುತ್ತಿದ್ದಳು ಎಂದಿವೆ. ಈ ಜಗಳದಲ್ಲಿ ನಿಕ್ಕಿಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಸಾಹಿಲ್ ಆಕೆಯ ಶವವನ್ನು ಬಚ್ಚಿಟ್ಟ ಸ್ಥಳದಿಂದ ಕೇವಲ 700 ಮೀಟರ್ ದೂರದಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿದ್ದನು.

ಇನ್ನೊಬ್ಬ ಮಹಿಳೆಯೊಂದಿಗೆ ಮದುವೆ

ಇನ್ನೊಬ್ಬ ಮಹಿಳೆಯೊಂದಿಗೆ ಮದುವೆ

ನೆರೆಹೊರೆಯವರು ನಿಕ್ಕಿ ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದ ನಂತರ ಪೊಲೀಸರು ಸಾಹಿಲ್ ಅನ್ನು ಪತ್ತೆಹಚ್ಚಿದರು. ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಸಿಂಗ್ ಯಾದವ್ ಅವರು, ಫೆಬ್ರವರಿ 10 ರಂದು ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದು ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಬಳಿಕ ಸಾಹಿಲ್ ತನ್ನ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ನಿಕ್ಕಿಯ ದೇಹವನ್ನು ಎಲ್ಲಿ ಮರೆಮಾಡಿದ್ದಾನೆಂದು ಬಹಿರಂಗಪಡಿಸಿದ್ದಾನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+