Delhi: ಗೆಳೆಯನ ಮಗನನ್ನು ಕೊಂದು ಹಾಸಿಗೆಯಲ್ಲಿ ಮುಚ್ಚಿಟ್ಟ ಲಿವ್-ಇನ್ ಸಂಗಾತಿ!
ತನ್ನ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ತನ್ನ ಗೆಳೆಯನ ಮಗನನ್ನು ಮಹಿಳೆಯೊಬ್ಬಳು ಕೊಂದು ಪೆಟ್ಟಿಗೆಯಲ್ಲಿ ತುಂಬಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ 24 ವರ್ಷದ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಪೂಜಾ ಎಂದು ಗುರುತಿಸಲಾಗಿದ್ದು, ಅಪ್ರಾಪ್ತ ವಯಸ್ಕ ಬಾಲಕ ಮಲಗಿದ್ದಾಗ ಕತ್ತು ಹಿಸುಕಿ ಕೊಲೆಗೈದು ಶವವನ್ನು ತಮ್ಮ ಹಾಸಿಗೆಯ ಪೆಟ್ಟಿಗೆಯೊಳಗೆ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದಾಳೆ. ಆಕೆಯ ಬಂಧನದ ನಂತರ, ಪೂಜಾ ತನ್ನ ತಪ್ಪನ್ನು ಒಪ್ಪಿಕೊಂಡು ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪಶ್ಚಿಮ ದೆಹಲಿಯ ರಂಹೋಲಾ ನಿವಾಸಿಯಾಗಿದ್ದಾಳೆ. ಪೂಜಾ ಜಿತೇಂದರ್ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದಳು. ಜಿತೇಂದರ್ ತನ್ನ ಹೆಂಡತಿಯೊಂದಿಗೆ ವಿಚ್ಛೇದನವನ್ನು ನೀಡದಿರಲು ಅಪ್ರಾಪ್ತ ಬಾಲಕನೇ ಕಾರಣ ಎಂದು ಭಾವಿಸಿ ಆತನನ್ನು ಕೊಂದಿದ್ದಾಳೆ.
ಹಲವು ಸ್ಥಳಗಳಲ್ಲಿ ಅಳವಡಿಸಲಾಗಿರುವ ಸುಮಾರು 300 ಸಿಸಿಟಿವಿಗಳ ಮೂಲಕ ಅಧಿಕಾರಿಗಳು ಭಾನುವಾರ ಬಕ್ಕರ್ವಾಲಾದಲ್ಲಿ ಪೂಜಾ ಕುಮಾರಿಯನ್ನು ಬಂಧಿಸಿದ್ದಾರೆ. ಆರೋಪಿಯು ನಿಯಮಿತವಾಗಿ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಳು ಮತ್ತು ಪೊಲೀಸ್ ತಂಡದಿಂದ ತಪ್ಪಿಸಿಕೊಳ್ಳುತ್ತಿದ್ದಳು ಎಂದು ಅಪರಾಧ ವಿಭಾಗ ತಿಳಿಸಿದೆ.
ಏನಾಯಿತು?
ದೆಹಲಿ ಪೊಲೀಸರಿಗೆ ಆಗಸ್ಟ್ 10 ರಂದು BLK ಆಸ್ಪತ್ರೆಯಿಂದ ಮಾಹಿತಿ ಬಂದಿತು. ಒಬ್ಬ ಹುಡುಗನ ಕುತ್ತಿಗೆಗೆ ಕತ್ತು ಹಿಸುಕಿದ ಗುರುತುಗಳಿದ್ದು ಆತ ಸತ್ತಿದ್ದಾನೆ ಎಂದು ಕರೆಯಲ್ಲಿ ಹೇಳಲಾಗಿತ್ತು.
"10/08/2023 ರಂದು 11 ವರ್ಷ ಪ್ರಾಯದ ಅಪ್ರಾಪ್ತ ಗಂಡು ಮಗುವನ್ನು ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಮತ್ತು ಅವನ ಶವವನ್ನು ಹಾಸಿಗೆಯೊಳಗೆ ಬಚ್ಚಿಟ್ಟಿರುವುದು ಕಂಡುಬಂದಿತ್ತು. ಅದರಂತೆ 302 ಐಪಿಸಿ ಅಡಿಯಲ್ಲಿ ಎಫ್ಐಆರ್ ಅನ್ನು ಪೊಲೀಸ್ ಠಾಣೆ ಇಂದರ್ಪುರಿಯಲ್ಲಿ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದರು.
ಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ, ಮೃತರ ಮನೆಗೆ ಭೇಟಿ ನೀಡಿದ ಕೊನೆಯ ವ್ಯಕ್ತಿ ಒಬ್ಬ ಮಹಿಳೆ, ಅಂದರೆ ಪೂಜಾ ಎಂದು ದೃಶ್ಯಗಳಿಂದ ತಿಳಿದುಬಂದಿದೆ. ಆಕೆಯ ಪೋಷಕರು ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಟದ ನಂತರ ಆಕೆ ಪತ್ತೆಯಾಗಲಿಲ್ಲ. ಅನುಮಾನ ಹೆಚ್ಚಾಗಿ ಪೊಲೀಸರು ಆಕೆಯನ್ನು ಹಿಡಿಯಲು ಹುಡುಕಾಟವನ್ನು ಪ್ರಾರಂಭಿಸಿದರು.
ಆಕೆಯನ್ನು ಕೊನೆಗೆ ಬಂಧಿಸಲಾಯಿತು. ವಿಚಾರಣೆ ಬಳಿಕ ಮೃತ ಅಪ್ರಾಪ್ತ ಬಾಲಕನ ತಂದೆಯೊಂದಿಗೆ ಪೂಜಾ ವಿವಾಹವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಜಿತೇಂದರ್ ಈಗಾಗಲೇ ಮದುವೆಯಾಗಿದ್ದು, ಪೂಜಾಗೆ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯುವ ಭರವಸೆ ನೀಡಿದ್ದರು. ಸ್ವಲ್ಪ ಸಮಯದ ನಂತರ, ಜಿತೇಂದರ್ ವಿಚ್ಛೇದನವನ್ನು ಪಡೆಯಲು ನಿರಾಕರಿಸಿದರು. ಡಿಸೆಂಬರ್ 2022 ರಿಂದ ಜಿತೇಂದರ್ ತನ್ನ ಮೊದಲ ಹೆಂಡತಿಯೊಂದಿಗೆ ವಾಸಿಸಲು ಪುನರಾರಂಭಿಸಿದ್ದರು. ಇದರಿಂದ ಕೋಪಗೊಂಡ ಪೂಜಾ ಮನಸ್ಸು ಮಾಡಿ ಆಗಸ್ಟ್ 10 ರಂದು ಮಧ್ಯಾಹ್ನ ಮಲಗಿದ್ದ ಜಿತೇಂದರ್ ಅವರ ಮಗನನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications