Delhi hit and run case: ಅಂಜಲಿಯ ಸ್ನೇಹಿತೆ ನಿಧಿ ಬಗ್ಗೆ ಹೊರಬಿದ್ದ ಅಘಾತಕಾರಿ ಸತ್ಯ
ನವದೆಹಲಿ ಜನವರಿ 7: ದೆಹಲಿಯಲ್ಲಿ ಹೊಸ ವರ್ಷದ ರಾತ್ರಿ ಸಂಭವಿಸಿದ ನೋವಿನ ಅಪಘಾತದ ಬಗ್ಗೆ ಪೊಲೀಸರಿಗೆ ಇದುವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಕಾಂಜಾವಾಲಾ ಅಪಘಾತದಲ್ಲಿ ಅಂಜಲಿ ಸಾವಿನ ಪ್ರಕರಣದಲ್ಲಿ ಒಂದರ ಹಿಂದೆ ಒಂದರಂತೆ ಹಲವು ವಿಚಾರಗಳು ಬಹಿರಂಗಗೊಂಡಿವೆ. ಇದೇ ವೇಳೆ ಅಂಜಲಿಯ ಸ್ನೇಹಿತೆ ನಿಧಿ ಬಗ್ಗೆ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ. ಡ್ರಗ್ಸ್ ಹೊಂದಿದ್ದ ಪ್ರಕರಣದಲ್ಲಿ ನಿಧಿಯನ್ನು ಬಂಧಿಸಲಾಗಿದೆ ಎನ್ನಲಾಗಿತ್ತು ಎನ್ನುವ ವಿಚಾರ ಬಹಿರಂಗಗೊಂಡಿದೆ.
ಕಂಜಾವಾಲಾ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿರುವ ನಿಧಿ ಅವರನ್ನು 2020 ರಲ್ಲಿ ಆಗ್ರಾದಲ್ಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಸಿ) ಕಾಯ್ದೆಯಡಿ ಬಂಧಿಸಲಾಗಿತ್ತು ಎಂಬ ವಿಚಾರ ಬಹಿರಂಗಗೊಂಡಿದೆ. ತೆಲಂಗಾಣದಿಂದ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಆಗ್ರಾ ರೈಲು ನಿಲ್ದಾಣದಲ್ಲಿ ನಿಧಿಯನ್ನು ಬಂಧಿಸಲಾಗಿತ್ತು. ಅವರನ್ನು ಡಿಸೆಂಬರ್ 6, 2020 ರಂದು ಬಂಧಿಸಲಾಯಿತು. ನಿಧಿ ಜೊತೆಗೆ ಸಮೀರ್ ಮತ್ತು ರವಿ ಎಂಬ ಇನ್ನಿಬ್ಬರನ್ನು ಬಂಧಿಸಲಾಗಿತ್ತು. ಇವರು ಜಾಮೀನಿನ ಮೇಲೆ ಹೊರಗಿದ್ದಾರೆ.
ವಾಸ್ತವವಾಗಿ ಜನವರಿ 1, 2023 ರ ಮುಂಜಾನೆ ದೆಹಲಿಯ ಕಾಂಜಾವಾಲಾ ಪ್ರದೇಶದಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ ಸ್ಕೂಟಿಯಲ್ಲಿದ್ದ ಅಂಜಲಿ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಬಸಕ್ಕೆ ಅಂಜಲಿ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡಿದ್ದಾರೆ. ಈ ವೇಳೆ ಅವರನ್ನು ಸುಮಾರು 12 ಕಿಮೀ ವರೆಗೆ ಕಾರು ಎಳೆದೊಯ್ದಿದೆ. ನಂತರ ಅವರು ಸಾವನ್ನಪ್ಪಿದ್ದಾರೆ. ಅಪಘಾತವಾದ ಮೂರು ದಿನಗಳ ನಂತರ ನಿಧಿ ಮಾಧ್ಯಮದ ಮುಂದೆ ಬಂದು ಹಲವು ಆರೋಪಗಳನ್ನು ಮಾಡಿದ್ದಾಳೆ. ಸದ್ಯ ದೆಹಲಿ ಪೊಲೀಸರು ನಿಧಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಡಿಕ್ಕಿಯ ನಂತರ ತಾನು ಸ್ಕೂಟಿಯಿಂದ ಕೆಳಗೆ ಬಿದ್ದೆ ಎಂದು ಆರಂಭದಲ್ಲಿ ನಿಧಿ ಹೇಳಿಕೊಂಡಳು ಮತ್ತು ತಾನು ಭಯಗೊಂಡಿದ್ದರಿಂದ ಅಪಘಾತ ಸ್ಥಳದಿಂದ ಓಡಿಹೋಗಿರುವುದಾಗಿ ಹೇಳಿಕೊಂಡಿದ್ದಾಳೆ. ಡಿಸೆಂಬರ್ 31 ರ ರಾತ್ರಿ ಅಂಜಲಿ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋಟೆಲ್‌ಗೆ ಹೋಗಿದ್ದಳು ಎಂದು ನಿಧಿ ಹೇಳಿಕೊಂಡಿದ್ದಳು. ಬಳಿಕ ಬರುವಾಗ ಅಂಜಲಿ ಜೊತೆ ನಿಧಿ ಕೂಡ ಇದ್ದಳು. ಆದರೆ ಆರೋಪಿಗಳಿಗೂ ಅಂಜಲಿ ಹಾಗೂ ನಿದಿಗೂ ಯಾವುದೇ ಸಂಬಂಧವಿರುವ ಬಗ್ಗೆ ಪೊಲೀಸರಾಗಲಿ ನಿಧಿಯಾಗಲಿ ಈವರೆಗೂ ಸ್ಪಷ್ಟನೆ ನೀಡಿಲ್ಲ.
ಘಟನೆಯ ಬಳಿಕ ಪೊಲೀಸರು ಕಾಂಜಾವಾಲಾ ಪ್ರಕರಣದಲ್ಲಿ ದೀಪಕ್ ಖನ್ನಾ, ಅಮಿತ್ ಖನ್ನಾ, ಕೃಷ್ಣ, ಮಿಥುನ್, ಮನೋಜ್ ಮಿತ್ತಲ್ ಮತ್ತು ಅಶುತೋಷ್ ಅವರನ್ನು ಬಂಧಿಸಿದ್ದಾರೆ. ಏಳನೇ ಆರೋಪಿ ಅಂಕುಶ್ ಖನ್ನಾ ಜನವರಿ 6 ರಂದು ಸಂಜೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಐವರು ಆರೋಪಿಗಳನ್ನು ರಕ್ಷಿಸಿದ ಆರೋಪ ಅಶುತೋಷ್ ಮತ್ತು ಅಂಕುಷ್ ಮೇಲಿದೆ.












Click it and Unblock the Notifications