Delhi Accident Case: ಆರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
ನವದೆಹಲಿ, ಜ. 09 : ಹೊಸ ವರ್ಷದ ಮಾರನೇ ದಿನ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿಯ ಅಪಘಾತ ಪ್ರಕರಣದ ಆರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ವಿಧಿಸಲಾಗಿದೆ.
ನವದೆಹಲಿ ಯುವತಿಯ ಗಾಡಿಗೆ ಡಿಕ್ಕಿ ಹೊಡೆದು ಆಯೆಯ ದೇಹವನ್ನು ಕಿಲೋಮೀಟರ್‌ಗಟ್ಟಲೆ ಎಳೆದುಕೊಂಡು ಹೋಗಿದ್ದ ಕಾರ್‌ನಲ್ಲಿದ್ದ ಆರೋಪಿಗಳಿಗೆ ದೆಹಲಿಯ ರೋಹಿಣಿ ಕೋರ್ಟ್ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಘಟನೆಯಲ್ಲಿ ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಅಶುತೋಷ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿಯ ರೋಹಿಣಿ ಕೋರ್ಟ್ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 12.30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ಯುವತಿಯ ಮೃತದೇಹ ಕಾರಿನ ಚಕ್ರಗಳ ಕೆಳಗೆ ಇದೆ ಎಂಬ ಬಗ್ಗೆ ಆರೋಪಿಗಳಿಗೆ ಮಾಹಿತಿಯಿತ್ತು ಎಂಬುದನ್ನು ನ್ಯಾಯಾಂಗ ಬಂಧನದ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.
ಜನವರಿ 1 ರ ಮುಂಜಾನೆ ಮಾರುತಿ ಸುಜುಕಿ ಬಲೆನೊಗೆ 20 ವರ್ಷದ ಅಂಜಲಿ ಸಿಂಗ್ ಎಂಬ ಯುವತಿಯ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಬಳಿಕ ಆಕೆಯ ದೇಹವು ಕಾರಿನ ಚಕ್ರಗಳಲ್ಲಿ ಸಿಲುಕಿಕೊಂಡಿತು. ಆದರೆ, ಅಪಘಾತವಾದ ನಂತರ ಕಾರು ನಿಲ್ಲಿಸದೇ ಆರೋಫಿಗಳು ಆಕೆಯ ದೇಹವನ್ನು ಸುಲ್ತಾನ್‌ಪುರಿಯಿಂದ ಕಾಂಜಾವಾಲಾಗೆ ಎಳೆದುಕೊಂಡು ಹೋಗಿದ್ದರು. ಅದು ಬರೋಬ್ಬರಿ 12 ಕಿಲೋಮೀಟರ್!.

ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಘಟನೆಯನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದರು.
ಬಳಿಕ ಕಳೆದ ಸೋಮವಾರ ಈ ಪ್ರಕರಣದಲ್ಲಿ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ ಎಂಬ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆರನೇ ಆರೋಪಿ ಅಶುತೋಷ್ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಡಿಸೆಂಬರ್ 31 ರಂದು ಅಮಿತ್, ಕ್ರಿಶನ್, ಮಿಥುನ್ ಮತ್ತು ಮನೋಜ್ ಎಂಬುವವರಿಗೆ ಕಾರನ್ನು ಕೊಟ್ಟಿದ್ದು ಅಶುತೋಷ್ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಶರಣಾದ ಮತ್ತೊಬ್ಬ ಆರೋಪಿ ಅಂಕುಶ್ ಖನ್ನಾಗೆ ಶನಿವಾರ ಜಾಮೀನು ಮಂಜೂರಾಗಿದೆ.












Click it and Unblock the Notifications