Delhi Government: ದೆಹಲಿ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?
ಬುಧವಾರ ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ ಬಳಿಕ , ಗುರುವಾರ ಪ್ರಮುಖ ಆರು ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಗುರುವಾರ ಸಂಜೆ ನಡೆದ ಸಂಪುಟ ಸಭೆಯ ಬಳಿಕ ಸಚಿವರ ಖಾತೆಗಳನ್ನು ಘೋಷಣೆ ಮಾಡಲಾಗಿದೆ. ಸಚಿವಾಲಯಗಳನ್ನು ಮುಖ್ಯಮಂತ್ರಿ ಮತ್ತು ಅವರ ಆರು ಸಂಪುಟ ಸಹೋದ್ಯೋಗಿಗಳ ನಡುವೆ ವಿಂಗಡಿಸಲಾಗಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ನೀರಾವರಿ ಖಾತೆಯನ್ನು ಪಡೆದುಕೊಂಡಿದ್ದಾರೆ. ಯಮುನಾ ನದಿಯ ಶುದ್ಧೀಕರಣದ ಕಾರ್ಯವನ್ನು ನಿರ್ವಹಿಸುವ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಖಾತೆಯನ್ನು ಸಹ ಹೊಂದಿದ್ದು. ಕಪಿಲ್ ಮಿಶ್ರಾ ಅವರಿಗೆ ಕಾನೂನು ಖಾತೆಯನ್ನು ನೀಡಲಾಗಿದೆ.

ಮುಖ್ಯಮಂತ್ರಿ ಗುಪ್ತಾ ಕನಿಷ್ಠ 10 ಖಾತೆಗಳನ್ನು ನಿರ್ವಹಿಸಲಿದ್ದಾರೆ. ಇನ್ನೂ ಹಂಚಿಕೆಯಾಗದ ಯಾವುದೇ ಖಾತೆಗಳನ್ನು ನಿರ್ವಹಿಸಲಿದ್ದಾರೆ. ರೇಖಾ ಗುಪ್ತಾ ಪ್ರಮುಖವಾದ ಹಣಕಾಸು ಖಾತೆಯನ್ನು ನಿರ್ವಹಿಸಲಿದ್ದಾರೆ. ಗೃಹ ಖಾತೆಯನ್ನು ಅವರೇ ಉಳಿಸಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಿದ್ದರೂ ಅದನ್ನು ಆಶಿಶ್ ಸೂದ್ ವಹಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ರೇಆಖಾ ಗುಪ್ತ ಕಂದಾಯ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಜಾಗೃತ, ಭೂಮಿ ಮತ್ತು ಕಟ್ಟಡ ನಿರ್ಮಾಣ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷರಾಗಿರುವ ಆಶಿಶ್ ಸೂದ್ ಎರಡು ದೊಡ್ಡ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶಿಕ್ಷಣ ಮತ್ತು ವಿದ್ಯುತ್ ಇಲಾಖೆ ಜವಾಬ್ದಾರಿ ಆಶಿಶ್ ಸೂದ್ ಅವರ ಪಾಲಾಗಿದೆ. ಎಎಪಿ ಸರ್ಕಾರವಿದ್ದಾಗ ಉಚಿತ ಶಿಕ್ಷಣ ಮತ್ತು ಬೃಹತ್ ವಿದ್ಯುತ್ ನೀಡುವ ಮೂಲಕ ಜನಮನ ಗೆದ್ದಿತ್ತು, ಈಗ ಆಶಿಶ್ ಸೂದ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ದೆಹಲಿಯ ಬಿಜೆಪಿ ಸಿಖ್ ನಾಯಕನಾಗಿರುವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಆಹಾರ ಮತ್ತು ಸರಬರಾಜು, ಅರಣ್ಯ ಮತ್ತು ಪರಿಸರ ಹಾಗೂ ಕೈಗಾರಿಕಾ ಖಾತೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಕೈಗಾರಿಕೆಗಳ ಸಚಿವರಾಗಿ, ಅವರು ಯಮುನಾ ಶುದ್ಧೀಕರಣದಲ್ಲಿ ಅವರ ಪಾತ್ರ ಮುಖ್ಯವಾಗಲಿದೆ. ಏಕೆಂದರೆ ಕೈಗಾರಿಕೆಗಳ ತ್ಯಾಜ್ಯವು ನದಿಯ ಮಾಲಿನ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಬಳಿಕ ಎಎಪಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಕಪಿಲ್ ಮಿಶ್ರಾಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಕಾನೂನು ಮತ್ತು ನ್ಯಾಯ ಇಲಾಖೆಯ ಜೊತೆಗೆ, ಅವರು ಕಾರ್ಮಿಕ, ಕಲೆ ಮತ್ತು ಸಂಸ್ಕೃತಿ, ಭಾಷೆ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ನಿರ್ವಹಿಸಲಿದ್ದಾರೆ. ರವೀಂದರ್ ಸಿಂಗ್ ಅವರಿಗೆ ಸಮಾಜ ಕಲ್ಯಾಣ, ಎಸ್‌ಸಿ ಮತ್ತು ಎಸ್‌ಟಿ ಕಲ್ಯಾಣ, ಸಹಕಾರಿ ಮತ್ತು ಚುನಾವಣಾ ಖಾತೆಗಳ ಉಸ್ತುವಾರಿ ನೀಡಲಾಗಿದೆ.












Click it and Unblock the Notifications