Airport: ಇಂದು 45 ವಿಮಾನ ಹಾರಾಟ ರದ್ದು, 400ಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬ, ಕಾರಣವೇನು?

ನವದೆಹಲಿ, ಜನವರಿ 05: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿದೆ. ಈ ಭಾಗದಲ್ಲಿ ಬೆಳಗ್ಗೆ, ರಾತ್ರಿ ಚಳಿ ಪ್ರಮಾಣ ಹೆಚ್ಚಾಗಿದೆ. ಅಧಿಕ ಮಂಜು ಕವಿದ ಪರಿಣಾಮ ಗೋಚರತೆ ಕಡಿಮೆ ಆಗಿದ್ದರಿಂದ ಹತ್ತಾರು ವಿಮಾನಗಳು ರದ್ದಾಗಿವೆ. ಕೆಲವು ವಿಮಾನಗಳು ಮಾರ್ಗ ಬದಲಿಸಿದರೆ, ಸುಮಾರು 400 ಕ್ಕೂ ಹೆಚ್ಚು ಅಧಿಕ ವಿಮಾನಗಳ ಕಾರ್ಯಾಚರಣೆಯು ವಿಳಂಬವಾಗಿದೆ. ಪ್ರತಿನಿತ್ಯ ದೆಹಲಿ ವಿಮಾನ ನಿಲ್ದಾಣದಿಂದ 1,300 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ ಎಂದು ವರದಿ ಆಗಿದೆ.

ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ನಗರಗಳಲ್ಲಿ ದಟ್ಟ ಮಂಜು ಆವರಿಸಿಕೊಂಡಿದೆ. ಇದು ವಿಮಾನಯಾನದ ಮೇಲೆ ಪ್ರಭಾವ ಬೀರಿದೆ. ಅತ್ಯಧಿಕ ಮಂಜು ಬೀಳುವ ಪರಿಣಾಮ ದೆಹಲಿಗೆ ಬರಬೇಕಿದ್ದ 19 ವಿಮಾನಗಳ ಮಾರ್ಗ ಬದಲಾವಣೆ ಆಗಿದೆ. ದೆಹಲಿಗೆ ಬರುವ ಮತ್ತು ದೆಹಲಿಯಿಂದ ಬೇರೆಡೆ ತೆರಳಬೇಕಾದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ವಿಳಂಬಯಿತು. ಸುಮಾರು 400 ಕ್ಕೂ ಹೆಚ್ಚು ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ಸೇವೆ ಆರಂಭಿಸಿದವು ಎಂದು ಎನ್‌ಡಿಟಿವಿ ವರದಿ ಮಾಡಿದೆ.

Delhi Fog Disrupts Flights 45 Canceled 400 Delayed Today

ಬೆಳ್ಳಬೆಳಗ್ಗೆ 12.15 ರಿಂದ 1.30 ಗಂಟೆವರೆಗೆ ದೆಹಲಿಗೆ ಬರಬೇಕಿದ್ದ 19 ವಿಮಾನಗಳನ್ನು ಬೇರೆಡೆ ತಿರುಗಿಸಲಾಗಿದೆ. ಗೋಚರತೆ ಕಡಿಮೆಯಾದ ಕಾರಣ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಬರಲಿಲ್ಲ. ಅದರಲ್ಲಿ 13 ದೇಶೀಯ ಮತ್ತು ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳಾಗಿವೆ ಎಂದು ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಗೆ ಬಂದಿಳಿಯಬೇಕಾದ ಅನೇಕ ಪ್ರಯಾಣಿಕರಿಗೆ ನಗರದ ಕೆಟ್ಟ ಹವಾಮಾನವು ಕೆಟ್ಟ ಅನುಭವ ನೀಡಿದೆ. ವಿಮಾನಗಳ ವಿಳಂಬ ಕಾರ್ಯಾಚರಣೆ, ಮಾರ್ಗ ಬದಲಾವಣೆಯಿಂದ ಪ್ರಯಾಣಿಕರಿಗೂ ತೊಂದರೆ ಆಗಿದೆ. ದೆಹಲಿಗೆ ಬಂದಿಳಿದ ಇಂಡಿಗೋ ವಿಮಾನ ಮರಳಿ ನಿರ್ಗಮಿಸಲೇ ಇಲ್ಲ. ದೆಹಲಿಯಿಂದ ತೆರಳಬೇಕಿದ್ದ ಸುಮಾರು 45 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದಲ್ಲಿ ಆಗಾಗ, ಹವಾಮಾನ ಪರಿಸ್ಥಿತಯಿಂದ ಉಂಟಾದ ಅನಾನುಕೂಲತೆಗೆ ತೀವ್ರವಾಗಿ ವಿಷಾದಿಸುತ್ತೇವೆ. ಪ್ರಯಾಣಿಕರು ಸಹಕರಿಸಬೇಕು. ಹೆಚ್ಚಿನ ಮಾಹಿತಿಗೆ ಏರ್‌ಲೈನ್ಸ್ ಸಂಪರ್ಕಿಸುವಂತೆ ಆಗಾಗ ಧ್ವನಿ ವರ್ಧಕದಲ್ಲಿ ಕೇಳಿ ಬರುತ್ತಿತ್ತು. ವಿಮಾನ ಹಾರಾಟ ವಿಳಂಬ, ಆಗಮನ, ನಿರ್ಗಮನ ಮುಂದಾದ ಪ್ರಯಾಣ ಸಂಬಂಧ ಸಮಯ, ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಏರ್‌ಪೋರ್ಟ್‌ ಅಪ್ಡೇಟ್ ನೀಡುತ್ತಾ ಬಂದಿದೆ.

ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (IGIA) ತನ್ನ ಎಕ್ಸ್‌ ಖಾತೆಯಲ್ಲಿ (#travelAdvisory) ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡಿದೆ. ಪ್ರತಿ ಗಂಟೆಗೂ ಅಪ್ಡೇಟ್ ಮಾಡಿದೆ. ದಟ್ಟ ಫಾಗ್ ನಿಂದಾಗಿ ಕಡಿಮೆ ಗೋಚರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ಹಾರಾಟ ಸೂಕ್ತವಲ್ಲ. ಹೀಗಾಗಿ ವಿಮಾನ ಕಾರ್ಯಾಚರಣೆ ತಡೆ ಹಿಡಿಯಲಾಗಿದೆ ಎಂದು ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಏರ್‌ಪೋರ್ಟ್ ನೀಡಿದ ಮಾಹಿತಿ ಪ್ರಕಾರ, ಇಂಡಿಗೋ ದೆಹಲಿ, ಚಂಡೀಗಢ, ಅಮೃತಸರ, ಶ್ರೀನಗರ, ಗುವಾಹಟಿ ಮತ್ತು ಪಾಟ್ನಾ ವಿಮಾನಯಾನ ಸಂಚಾರದ ಮೇಲೆ ಕಡಿಮೆ ದಟ್ಟ ಮಂಜು ಪ್ರಭಾವ ಭೀರಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂದಿದೆ. ಸಿಬ್ಬಂದಿಯು ಅವರಿಗೆ ಅಗತ್ಯ ಮಾಹಿತಿ, ಸಹಾಯಕ್ಕೆ ಧಾವಿಸಿದ್ದಾರೆ. ಶೀಘ್ರವೇ ವಿಮಾನಯಾನ ಆರಂಭಿಸುವುದಾಗಿ ಅವರಿಗೆ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+