ವಿಮಾನ ಪ್ರಯಾಣಿಕರ ಗಮನಕ್ಕೆ: ದೆಹಲಿಯಲ್ಲಿ ದಟ್ಟ ಮಂಜು: ಕೆಲವು ವಿಮಾನಗಳ ಹಾರಾಟ ರದ್ದು, ವಿಳಂಬ
ನವದೆಹಲಿ: ದೆಹಲಿಯಲ್ಲಿ ಕಳಪೆ ಗಾಳಿ ದಾಖಲಾತಿ ಮತ್ತು ದಟ್ಟ ಮಂಜಿನ ವಾತಾವರಣ ಮುಂದುವರಿದಿದೆ. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ. ಇನ್ನೊಂದೆಡೆ ಅಗೋಚರತೆಯು ವಿಮಾನಯಾನ ಸೇವೆಗೆ ಅಡ್ಡಿ ಉಂಟು ಮಾಡಿದೆ. ಗುರುವಾರ ಒಂದೇ ದಿನ 22 ವಿಮಾನಗಳ ಹಾರಾಟ ರದ್ದಾಗಿದೆ. 80ಕ್ಕೂ ಅಧಿಕ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿತು. ಸಂಕಷ್ಟದಲ್ಲಿರುವ ಪ್ರಯಾಣಿಕರೊಂದಿಗೆ ದೆಹಲಿ ಏರ್‌ಪೋರ್ಟ್ ನಿರಂತರ ಸಂಪರ್ಕದಲ್ಲಿತ್ತು.
ಬೆಳಗಿನ ಜಾವ ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಬಹುತೇಕ ನಗರ ಮಂಜಿನಿಂದ ಮುಚ್ಚಿಕೊಂಡಿತ್ತು. ಗೋಚರತೆ ಕ್ಷಣಿಸಿತ್ತು. ಇದರಿಂದ ನಗರವಾಸಿಗಳು ಸಂಚಾರ ತೊಂದರೆ ಅನುಭವಿಸಬೇಕಾಯಿತು. ವಾಹನಗಳು, ರೈಲುಗಳ ಸಂಚಾರ ಅಸ್ತವ್ಯಸ್ತವಾಯಿತು. ಇದೇ ವೇಳೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ22 ವಿಮಾನಗಳ ಹಾರಾಟ ರದ್ದಾಯಿತು. ಹತ್ತಾರು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಯಿತು. ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿಯೇ ಕೆಲ ಗಂಟೆಗಳನ್ನು ಕಳೆಯಬೇಕಾಯಿತು.

ಚಳಿ, ಮಂಜು ಮುನ್ಸೂಚನೆ: ವಿಮಾನ ಸೇವೆ ವ್ಯತ್ಯಯ ಮುಂದುವರಿಕೆ
ಐಎಂಡಿ ಪ್ರಕಾರ, ಮುಂದಿನ ಮೂರು ನಾಲ್ಕು ದಿನ ದೆಹಲಿಯಲ್ಲಿ ಇದೇ ರೀತಿ ಮಂಜು, ತೀವ್ರ ಚಳಿ ಮುಂದುವರಿಯಲಿದೆ. ಹೀಗಾಗಿ ಎರಡು ಮೂರು ದಿನ ಬೆಳಗ್ಗೆ ವಿಮಾನ ಸೇವೆಯಲ್ಲಿ ವ್ಯತ್ಯಯ, ಸಂಚಾರ ರದ್ದು ಹಾಗೂ ಸೇವೆಯಲ್ಲಿನ ವಿಳಂಬವು ಸಹ ಮುಂದುವರಿಯುವ ಸಾಧ್ಯತೆ ಇದೆ. ಮಧ್ಯಾಹ್ನ ಹೊತ್ತಿಗೆ ಎಂದಿನಂತೆ ಸಹಜ ಸ್ಥಿತಿಗೆ ವಿಮಾನ ಸೇವೆ ಮರಳಿತು ಎಂದು ದೆಹಲಿ ಐಜಿಐ ಗುರುವಾರ ತಿಳಿಸಿತು.
ಕಾಲ ಕಾಲಕ್ಕೆ ವಿಮಾನಗಳ ಸಂಚಾರ ಕುರಿತು ಪ್ರಯಾಣಿಕರಿಗೆ ದೆಹಲಿ ಏರ್‌ಪೋರ್ಟ್ ಎಕ್ಸ್ ಹ್ಯಾಂಡಲ್‌ನಲ್ಲಿ (@DelhiAirport) ಸಲಹೆ, ಸೂಚನೆ ನೀಡುತ್ತಲೆ ಇದ್ದದ್ದು ಕಂಡು ಬಂತು. ಇದೇ ವಿಚಾರವಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸಹ ಅಗತ್ಯ ಸಲಹೆಗಳನ್ನು ವಿಮಾನಯಾನ ಸಂಸ್ಥೆಗಳಿಗೆ ಕೊಟ್ಟಿದೆ. ಶುಕ್ರವಾರ ಬೆಳಗ್ಗೆ ಸಹ ದಟ್ಟ ಮಂಜು, ಕಡಿಮೆ ಗೋಚರತೆ ಸ್ಥಿತಿ ಉಂಟಾಗಬಹುದು. ವಿಮಾನಯಾನ ಸಂಸ್ಥೆಗಳು, ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಸಹ ನಿರಂತರ ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ.
ವಿಮಾನ ಸೇವೆಯ ಜೊತೆಗೆ ದೆಹಲಿ ಮಾರ್ಗದಲ್ಲಿ ಸಂಚರಿಸುವ ಹಾಗೂ ದೆಹಲಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ರೈಲುಗಳಲ್ಲಿ ಸೇವೆ ಇಂದು ವ್ಯತ್ಯಯವಾಯಿತು. ಅವುಗಳ ಪಟ್ಟಿ ಇಲ್ಲಿದೆ.
ವಿಳಂಬವಾದ ರೈಲುಗಳ ಪಟ್ಟಿ
1) ಹರಿದ್ವಾರ ಭಾವನಗರ ಎಕ್ಸ್‌ಪ್ರೆಸ್ ರೈಲು (19272 ) 1 ಗಂಟೆ 7 ನಿಮಿಷ ವಿಳಂಬ
2) ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲು (12417) 4 ಗಂಟೆ 4 ನಿಮಿಷ ವಿಳಂಬ.
3) ರೇವಾ ಆನಂದ್ ವಿಹಾರ್ ಎಕ್ಸ್‌ಪ್ರೆಸ್ ರೈಲು (12427) 3 ಗಂಟೆ 57 ನಿಮಿಷ ವಿಳಂಬವಾಗಿದೆ.
4) ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (12427) 8 ಗಂಟೆ 52 ನಿಮಿಷ ತಡವಾಗಿ ಆಗಮಿಸಿತು.
5) ಗೀತಾ ಜಯಂತಿ ಎಕ್ಸ್‌ಪ್ರೆಸ್ ರೈಲು (11841) 1 ಗಂಟೆ 40 ನಿಮಿಷ ವಿಳಂಬವಾಯಿತು.
6) ನೌಚಂಡಿ ಎಕ್ಸ್‌ಪ್ರೆಸ್ ರೈಲು (14241) ಸುಮಾರು 5 ಗಂಟೆ ಸೇವೆಯಲ್ಲಿ ವ್ಯತ್ಯವಾಯಿತು.
7) ಆನಂದ್ ವಿಹಾರ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು (13257) ಸುಮಾರು 12 ಗಂಟೆ ತಡವಾಗಿ ಚಲಿಸಿದೆ.
8) ಸಪ್ತ ಕ್ರಾಂತಿ ಎಕ್ಸ್‌ಪ್ರೆಸ್ ರೈಲು (12557) 45 ನಿಮಿಷ ವಿಳಂಬ.
9) ನವದೆಹಲಿ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12429) ಸುಮಾರು 45 ನಿಮಿಷಗಳಷ್ಟು ವಿಳಂಬವಾಗಿದೆ.
10) ಪದ್ಮಾವತ್ ಎಕ್ಸ್‌ಪ್ರೆಸ್ ರೈಲು (14207) ಸುಮಾರು 4 ಗಂಟೆಗಳಷ್ಟು ತಡವಾಯಿತು.












Click it and Unblock the Notifications