Delhi: ದೆಹಲಿ ಚುನಾವಣಾ ಫಲಿತಾಂಶ 2025: ಎಎಪಿಯನ್ನು ಟೀಕಿಸಿದ ಅಣ್ಣಾ ಹಜಾರೆ

ದೆಹಲಿ ಜನವರಿ 8: ಹಲವು ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿಯನ್ನು ಜನ ಗೆಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡು ದೆಹಲಿಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ತನ್ನದಾಗಿಸಿಕೊಂಡಿದೆ. ಎಎಪಿ ವಿರುದ್ಧ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, 'ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸೋಲಲು ಭ್ರಷ್ಟಾಚಾರ ಹಗರಣ ಹಾಗೂ ಕಳಪೆ ನಾಯಕತ್ವವೇ ಕಾರಣ' ಎಂದಿದ್ದಾರೆ. "ಚುನಾವಣಾ ಅಭ್ಯರ್ಥಿಗಳು ಬಲವಾದ ವ್ಯಕ್ತಿತ್ವ, ಉತ್ತಮ ಆಲೋಚನೆಗಳು ಮತ್ತು ಶುದ್ಧ ಇಮೇಜ್ ಹೊಂದಿರಬೇಕು ಎಂದು ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ಆದರೆ ಎಎಪಿಗೆ ಅದು ಇರಲಿಲ್ಲ. ಅವರು ಮದ್ಯ ಮತ್ತು ಹಣದ ಹಗರಣಗಳಲ್ಲಿ ಸಿಲುಕಿಕೊಂಡರು, ಇದು ಅರವಿಂದ್ ಕೇಜ್ರಿವಾಲ್ ಅವರ ಪ್ರತಿಷ್ಠೆಗೆ ಕಳಂಕ ತಂದಿತು. ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ" ಎಂದು ಹಜಾರೆ ಹೇಳಿದರು.

Delhi election results 2025 anna hazare criticizes aap

ಕೇಜ್ರಿವಾಲ್ ಅವರ ಪತನವನ್ನು ಎತ್ತಿ ತೋರಿಸಿದ ಹಜಾರೆ, "ಜನರು ಅವರು ಮದ್ಯ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ನೋಡಿದರು. ರಾಜಕೀಯದಲ್ಲಿ ಆರೋಪಗಳು ಸಾಮಾನ್ಯ, ಆದರೆ ತಾವು ಆರೋಪಿಗಳಲ್ಲ ಎಂದು ಸಾಬೀತುಪಡಿಸಬೇಕು. ಸತ್ಯ ಯಾವಾಗಲೂ ಸತ್ಯವಾಗಿ ಉಳಿಯುತ್ತದೆ" ಎಂದು ಹೇಳಿದ್ದಾರೆ.

ಇದೇ ಕಾರಣಕ್ಕೆ ನಾನು ಎಎಪಿಯಿಂದ ದೂರ ಉಳಿಯಲು ನಿರ್ಧರಿಸಿದೆ- ಹಜಾರೆ

ಇಂತಹ ಕಾರಣಗಳಿಂದಾಗಿ ನಾನು ಎಎಪಿಯಿಂದ ದೂರವಿರಲು ನಿರ್ಧರಿಸಿದೆ ಎಂದು ಹಜಾರೆ ಹೇಳಿದ್ದಾರೆ. "ಈ ಕಾರಣಗಳಿಂದಾಗಿ ನಾನು ಎಎಪಿ ಸಭೆ ನಡೆದಾಗ ಪಕ್ಷದ ಭಾಗವಾಗಿರದಿರಲು ನಿರ್ಧರಿಸಿದೆ ಮತ್ತು ಆ ದಿನದಿಂದ ನಾನು ಪಕ್ಷದಿಂದ ದೂರ ಉಳಿದಿದ್ದೇನೆ" ಎಂದು ಅವರು ಕೇಜ್ರಿವಾಲ್ ಅವರ ರಾಜಕೀಯ ಪ್ರಯಾಣದಿಂದ ತಮ್ಮ ಪ್ರತ್ಯೇಕತೆಯನ್ನು ಹಜಾರೆ ಹೇಳಿದರು.

ದೆಹಲಿಯ ಜನ ಬದಲಾವಣೆ ಬಯಸಿದ್ದಾರೆ- ಪ್ರಿಯಾಂಕಾ ಗಾಂಧಿ

ಇದೇ ವೇಳೆ ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, 'ದೆಹಲಿಯ ಜನ ಬದಲಾವಣೆಯನ್ನು ಬಯಸಿದ್ದಾರೆ. ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಕೆಲಸ ಮಾಡಲಿದೆ. ದೆಹಲಿ ಮತದಾರರ ನಿರ್ಧಾರವನ್ನು ನಾವು ಗೌರವಿಸುತ್ತೇವೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+