Delhi Election 2025 : ಗೆಲುವು ನಮ್ಮದೇ ಎನ್ನುತ್ತಿರುವುದೇಕೆ ಎಎಪಿ ನಾಯಕರು?
ನವದೆಹಲಿ, ಫೆಬ್ರವರಿ 08: ಸಮೀಕ್ಷೆಗಳು ಏನೇ ಹೇಳಿದರೂ ಎಎಪಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಾಧ್ಯವೇ ಇಲ್ಲ ಎಂಬ ವಿಶ್ವಾಸದಲ್ಲಿ ಎಎಪಿ ನಾಯಕರಿದ್ದಾರೆ. ಒಮ್ಮೆಲೆ 62 ಸ್ಥಾನದಿಂದ ಮ್ಯಾಜಿಕ್ ಸಂಖ್ಯೆಯೂ ಬಾರದಂತೆ ಕುಸಿಯುವ ಮಾತೇ ಇಲ್ಲ. ನಮ್ಮ ಅಧಿಕಾರವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತು ಜನ ತಮ್ಮ ಮೇಲಿಟ್ಟಿರುವ ವಿಶ್ವಾಸದಿಂದ ಸಮೀಕ್ಷೆಗಳನ್ನು ಸುಳ್ಳು ಮಾಡಿ ಎಎಪಿ ಅಧಿಕಾರ ಹಿಡಿದೇ ಹಿಡಿಯುತ್ತದೆ ಎಂಬ ಮಾತುಗಳು ಎಎಪಿ ಕಡೆಯಿಂದ ಕೇಳಿ ಬರುತ್ತದೆ.
ಎಎಪಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಾಗ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಘೋಷಣೆ ಮಾಡಿದ್ದು ಅದರಲ್ಲಿ ಎಷ್ಟು ಕಾರ್ಯಗಳು ಆಗಿವೆಯೋ ಎಂಬುದನ್ನು ಆಚೆಗಿಟ್ಟು ನೋಡಿದರೆ. ಆದರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಇದು ಮತದಾರರಿಗೆ ಎಎಪಿ ಸರ್ಕಾರದ ಬಗ್ಗೆ ನಂಬಿಕೆ ಮೂಡಿಸಿದೆ. ಬಡ, ಮಧ್ಯಮವರ್ಗದ ಜನರಿಗೆ ತಲುಪುವಂತಹ ಯೋಜನೆಗಳನ್ನು ನೀಡುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಇದು ಜನವಲಯವನ್ನು ತಲುಪಿದೆ. ಹೀಗಾಗಿ ಮತದಾರರು ತಮ್ಮ ಕೈಬಿಡುವುದಿಲ್ಲ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ನಂಬಿಕೆಯಲ್ಲಿ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.

ಕಳೆದೊಂದು ದಶಕದ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಮತ್ತು ಅದರ ವಿರುದ್ಧದ ಹೋರಾಟಗಳು ದೆಹಲಿಯಲ್ಲಿ ಎಎಪಿ ಪಕ್ಷದ ಹುಟ್ಟಿಗೆ ಕಾರಣವಾಯಿತು. ಪಕ್ಷ ಉದಯವಾದ ಕಡಿಮೆ ಅವಧಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ಸಹಕಾರಿಯಾಯಿತು. 2015ರ ವೇಳೆಗೆ ಪಕ್ಷ ಸ್ಥಾಪಿಸಿದ ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರದ ಹೋರಾಟಗಳು ದೆಹಲಿ ದಾಟಿ ದೇಶದಾದ್ಯಂತ ಗಮನಸೆಳೆದಿತ್ತು.
ಯಾರೂ ಊಹಿಸಲು ಸಾಧ್ಯವಾಗದ ಗೆಲುವು
ಅದಾಗಲೇ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರ ಉದ್ದೇಶಗಳು ಯುವ ಜನರ ಗಮನಸೆಳೆದಿತ್ತು. ಅವರತ್ತ ಮತದಾರರು ಆಕರ್ಷಿತರಾಗಲು ಆರಂಭಿಸಿದರು. ಹೀಗಾಗಿ ಎಎಪಿಯ ರಾಜಕೀಯ ಹೋರಾಟಗಳಿಗೆ ಹೆಚ್ಚಿನ ಜನಮನ್ನಣೆ ದೊರೆಯಲಾರಂಭಿಸಿತು. ಬಹುಶಃ ರಾಜಕೀಯ ಪಕ್ಷವೊಂದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನಮನ್ನಣೆ ಪಡೆದ ಪಕ್ಷವಿದ್ದರೆ ಅದು ಎಎಪಿ ಎಂಬ ಮಟ್ಟಿಗೆ ಬೆಳೆಯಿತು. 2015 ಚುನಾವಣೆ ಸ್ಪರ್ಧೆ ಮಾಡಿದಾಗ ಯಾರೂ ಊಹಿಸಲು ಸಾಧ್ಯವಾಗದ ಮಟ್ಟಿಗೆ ಗೆಲುವನ್ನು ದಾಖಲಿಸಿತ್ತು.

70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಿತ್ತು. ಬಿಜೆಪಿ ಮೂರು ಸ್ಥಾನಗಳಿಗೆ ಸಮಾಧಾನ ಪಟ್ಟುಕೊಂಡರೆ ಕಾಂಗ್ರೆಸ್ ಖಾತೆ ತೆರೆಯಲು ಆಗದಂತೆ ನೆಲಕಚ್ಚಿತ್ತು. ಅಧಿಕಾರಕ್ಕೆ ಬಂದ ಎಎಪಿ ಉಚಿತ ಭಾಗ್ಯಗಳಾದ ನೀರು ಮತ್ತು ವಿದ್ಯುತ್ ನ್ನು ಜನರಿಗೆ ಕರುಣಿಸಿತ್ತು. ಈ ಯೋಜನೆಗಳನ್ನು ಜಾರಿ ಮಾಡಿದಾಗ ಜನ ಹುಬ್ಬೇರಿಸಿದರು. ಇದರ ಸಕ್ಸಸ್ ಎರಡನೇ ಬಾರಿಗೆ 2020ರಲ್ಲಿ ಚುನಾವಣೆ ನಡೆದಾಗ 2015 ಚುನಾವಣೆಗೆ ಹೋಲಿಸಿದರೆ ಮತ್ತೆ ಐದು ಸ್ಥಾನಗಳನ್ನು ಕಳೆದು ಕೊಂಡು 62ಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಆದರೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಸಫಲವಾಗಿತ್ತು.

ಅಧಿಕಾರ ಹಿಡಿಯುತ್ತೇವೆ ಎನ್ನುವ ನಾಯಕರು
ಕಳೆದ ಎರಡು ಚುನಾವಣೆಗಳನ್ನು ಎದುರಿಸಿದ ಎಎಪಿಗೆ ಈ ಬಾರಿಯ ವಿಧಾಸಭಾ ಚುನಾವಣೆ ಸವಾಲ್ ಆಗಿದೆ. ಎಎಪಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಸ್ವತಃ ಕೇಜ್ರಿವಾಲ್ ಅವರೇ ಹಗರಣದ ಆರೋಪದಲ್ಲಿ ಜೈಲ್ ಗೆ ಸೇರಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಅತಿಶಿಯವರಿಗೆ ಬಿಟ್ಟುಕೊಟ್ಟಿರುವುದು ಹೀಗೆ ಹಲವು ನೂನ್ಯತೆಗಳು, ಆರೋಪಗಳು ಎಎಪಿಯನ್ನು ಸುತ್ತಿಕೊಂಡಿದೆ. ಆದರೆ ಎಲ್ಲದಕ್ಕೂ ಉತ್ತರಕೊಡುತ್ತೇವೆ. ಗೆದ್ದು ಬಂದೇ ಬರುತ್ತೇವೆ ಎನ್ನುವುದು ಎಎಪಿ ನಾಯಕರ ಮಾತುಗಳಾಗಿವೆ. ಈ ಹಿಂದಿನ ಎರಡು ಅವಧಿಯಷ್ಟು ಸ್ಥಾನಗಳನ್ನು ಗೆಲ್ಲದೇ ಹೋದರೂ ಅಧಿಕಾರ ಹಿಡಿಯುವಷ್ಟು ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಕೇಜ್ರಿವಾಲ್ ಮತ್ತು ತಂಡವಿದೆ. ಎಲ್ಲದಕ್ಕೂ ಉತ್ತರ ಫಲಿತಾಂಶ ನೀಡಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications