ದಿಲ್ಲಿ ಸರಕಾರ ರಚನೆಗೆ ನಾ ಒಲ್ಲೆ ಎಂದ ಬಿಜೆಪಿ
ನವದೆಹಲಿ, ಡಿ.9: ನಿರೀಕ್ಷೆಯಂತೆ ರಾಷ್ಟ್ರ ರಾಜಧಾನಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಭಾರಿ ಭರವಸೆಯ ಹೊಚ್ಚ ಹೊಸ ಪಕ್ಷದ ಸ್ಪರ್ಧೆಯಿಂದಾಗಿ ತ್ರಿಕೋನ ಸ್ಪರ್ಧೆ ಕಂಡ ದಿಲ್ಲಿಯಲ್ಲಿ ಒಂದು ಕೋನ ಬಿದ್ದು ಹೋಗಿದೆ. ಉಳಿದೆರಡು ಸರಕಾರ ರಚನೆಗಾಗಿ ಅಖಾಡದಲ್ಲಿವೆ.
ಈ ಸಂದರ್ಭದಲ್ಲಿ ಸಹಜವಾಗಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರಕಾರ ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಹರ್ಷವರ್ಧನ ಅವರಿಗೆ ಆಹ್ವಾನ ನೀಡಲಿದ್ದಾರೆ. ಆದರೆ ಮುಂದೇನು ಎಂಬುದೇ ಸದ್ಯದ ಕುತೂಹಲ.
(ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣ: ಮುಂದೇನು?)

ಇನ್ನು ಉಳಿದಿರುವುದು ಬಿಜೆಪಿ. ಗದ್ದುಗೆವರೆಗೂ ಬಂದು ಕೇವಲ 4 ಸ್ಥಾನಗಳೊಂದಿಗೆ ಮುಗ್ಗರಿಸಿದ ಬಿಜೆಪಿ ಸದ್ಯಕ್ಕೆ ಜಾಣ ನಡೆಗೆ ಮುಂದಾಗಿದೆ. ಅಧಿಕಾರ ಲಾಲಸೆಗೆ ಬಿದ್ದು ಕರ್ನಾಟಕ ಕುಖ್ಯಾತಿಯ ಆಪರೇಶನ್ ಕಮಲ ಸೇರಿದಂತೆ ಯಾವುದೇ 'ಕಸರತ್ತು' ನಡೆಸಿ, ಕೆಸರು ಮೆತ್ತಿಕೊಳ್ಳಲು ಬಿಜೆಪಿ ಬಯಸಿಲ್ಲ. ತಾವರೆ ಎಲೆಯಂತೆ ನಿಷ್ಕಳಂಕವಾಗಿರಲು ಬಯಸಿರುವ ಬಿಜೆಪಿ ಸರಕಾರ ರಚನೆಗೆ ನಾ ಒಲ್ಲೆ ಎಂದಿದೆ.
ಯಾರಪ್ಪಾ ಈ ವಿಷಯ ತಿಳಿಸಿದ್ದು ಅಂತ ಕೇಳಿದರೆ ಖುದ್ದು ಸರಕಾರ ರಚಿಸಬೇಕಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ ಅವರೇ ಇದನ್ನು ಕಡ್ಡಿಮುರಿದಂತೆ ಹೇಳಿದ್ದಾರೆ. ಒಂದು ವೇಳೆ ರಾಜ್ಯಪಾಲರು ಸರಕಾರ ರಚಿಸುವಂತೆ ಸೂಚಿಸಿದರೂ ನಾನಂತೂ ಅಂತಹ ದುಸ್ಸಾಹಸಕ್ಕೆ ಕೈಹಾಕಲಾರೆ ಎಂದು ಅವರು ಒತ್ತಿಹೇಳಿದ್ದಾರೆ.
'ಬಿಜೆಪಿಯ ಮನಮೋಹನ್ ಸಿಂಗ್' ಎಂದೇ ಖ್ಯಾತರಾದ ಸಜ್ಜನ ಹರ್ಷವರ್ಧನ ಈ ಮಾತು ಹೇಳಿರುವುದು ಕುತೂಹಲಕಾರಿಯಾಗಿದೆ. ಇಲ್ಲಿ ಒಂದು ವಿಷಯ ಹೇಳಬೇಕು. ಕಾಂಗ್ರೆಸ್ಸಿನ ಪ್ರಧಾನಿ ದಿವ್ಯಮೌನಿ ಮನಮೋಹನ ಸಿಂಗ್ ಮತ್ತು ಹರ್ಷವರ್ಧನ ಅವರಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಹರ್ಷವರ್ಧನ ಅವರು ಸತತವಾಗಿ ನಿನ್ನೆ 5ನೆಯ ಬಾರಿಗೆ ಜನರಿಂದ ಆರಿಸಿಬಂದಿದ್ದಾರೆ. ಆದರೆ ನಮ್ಮ ಪ್ರಧಾನಿ ಭವಿಷ್ಯದಲ್ಲಾದರೂ ಒಮ್ಮೆ ಜನರಿಂದ ಆರಿಸಿ ಬರುವ ಆಸೆ ಮತದಾರರಿಗೆ ಇಲ್ಲ.
ಹೌದು ಸತತವಾಗಿ ಐದನೆಯ ಬಾರಿಗೆ ಗೆದ್ದು ಬಂದಿರುವ ಡಾ. ಹರ್ಷವರ್ಧನ ಜನ ಪೂರ್ಣಮಟ್ಟದ ಬಹುಮತ ನೀಡಿಲ್ಲ. ಜತೆಗೆ ಈಗಿನ ಸಂಖ್ಯೆಗಳನ್ನು ನೋಡಿದರೆ ಖಂಡಿತಾ ಸರಕಾರ ರಚನೆ ಸಾಧ್ಯವಾಗದು. ಹಾಗಾಗಿ ಅಧಿಕಾರಕ್ಕೆ ಆಸೆ ಪಡದೆ, ಇನ್ನಾರು ತಿಂಗಳಲ್ಲಿ ಜನರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿ, ಅವರ ಮನಗೆಲ್ಲುವುದರೊಂದಿಗೆ ಚುನಾವಣೆಯನ್ನು ಗೆಲ್ಲುತ್ತೇವೆ. ಹಾಗಾಗಿ ನಾನಂತೂ ಮುಖ್ಯಮಂತ್ರಿ ಸರಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಡಾ. ಹರ್ಷವರ್ಧನ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಸಹ ಇದೇ ಮಾತನ್ನು ಹೇಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಸರಕಾರ ರಚನೆಗೆ ಮುಂದಾಗುವುದು ಜಾಣತನವಲ್ಲ. ಹಾಗಾಗಿ ನಾವು ಸರಕಾರ ರಚನೆ ದಾವೆಗೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಒಬ್ಬ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮಾತ್ರ ದಿಲ್ಲಿ ಸೇರಿದಂತೆ ಎಲ್ಲಾ ನಾಲ್ಕೂ ರಾಜ್ಯಗಳಲ್ಲಿ ಸರಕಾರ ರಚಿಸುತ್ತೇವೆ ಎಂದು ಹೇಳಿರುವುದು ಕುತೂಹಲಕಾರಿಯಾಗಿದೆ. ಉಳಿದ ಮೂರು ಕಡೆ ಓಕೆ. ಆದರೆ ದಿಲ್ಲಿಯಲ್ಲಿ ಮೈಯೆಲ್ಲಾ ಕೆಸರು ಮಾಡಿಕೊಂಡು ಸರಕಾರ ರಚಿಸುತ್ತಾರಾ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಮಾಜಿ ರಾಷ್ಟ್ರಾಧ್ಯಕ್ಷರ ವಿವೇಕವನ್ನು ಪ್ರದರ್ಶಿಸುತ್ತಾರಾ? ಎಂಬುದು ಸದ್ಯದ ಕುತೂಹಲ. ಓವರ್ ಟು ರಾಜನಾಥ್ ಜೀ...
ಮರೆತ ಮಾತು: ಈಗಾಗಲೇ ದಿಲ್ಲಿ ಆಡಳಿತ ಶೋಚನೀಯ ಸ್ಥಿತಿಯಲ್ಲಿದೆ. ಹಾಗಿರುವಾಗ ದಿಲ್ಲಿಯಂತಹ ಆಯಕಟ್ಟಿನ ರಾಜ್ಯದ ವಿಧಾನಸಭೆಯನ್ನು ಹೆಚ್ಚು ಕಾಲ ಅತಂತ್ರವಾಗಿಡುವುದು ಸಮಂಜಸವಲ್ಲ. ಸಂವಿಧಾನದಲ್ಲಿಯೂ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಅದು ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿ ಉಳಿಯುವಂತಿಲ್ಲ.
ಡಿಸೆಂಬರ್ 17ಕ್ಕೆ ಈಗಿನ ವಿಧಾನಸಭೆಯ ಕಾಲಾವಧಿ ಮುಗಿಯುತ್ತದೆ. ಅಲ್ಲಿಂದ ಮುಂದಕ್ಕೆ 6 ತಿಂಗಳಲ್ಲೇ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಅಂದರೆ ಆ ವೇಳೆಗೆ ಲೋಕಸಭಾ ಚುನಾವಣೆಗಳೂ ನಡೆಯಲಿದ್ದು, ಅದರೊಟ್ಟಿಗೆ ದಿಲ್ಲಿ ವಿಧಾನಸಭೆ ಚುನಾವಣೆಯನ್ನೂ ಮತ್ತೆ ನಡೆಸಬಹುದಾಗಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications