Delhi Elections 2025: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಕೇಜ್ರಿವಾಲ್ ವಿರುದ್ಧ ಯಾರು?

ನವದೆಹಲಿ, ಜನವರಿ 04: ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿಯಲ್ಲಿ ನಡೆಯಲಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು( ಶನಿವಾರ,ಜನವರಿ 4) 29ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ದೆಹಲಿ ಘಟಕದ ಪ್ರಮುಖ ಹೆಸರುಗಳು ಮೊದಲ ಪಟ್ಟಿಯಲ್ಲಿ ಉಲ್ಲೇಖವಾಗಿವೆ.

ಅಭ್ಯರ್ಥಿಗಳ ಪಟ್ಟಿಯಲ್ಲಿ , ಪರ್ವೇಶ್ ವರ್ಮಾ ನವದೆಹಲಿ ಕ್ಷೇತ್ರದಿಂದ ಆಮ್ ಆದ್ಮ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕರೋಲ್ ಬಾಗ್ನಿಂದ ದುಶ್ಯಂತ್ ಗೌತಮ್, ರಾಜೇರಿ ಗಾರ್ಡನ್ನಿಂದ ಮಂಜಿಂದರ್ ಸಿಂಗ್ ಸಿರ್ಸಾ, ಬಿಜ್ಞಾಸನ್ನಿಂದ ಕೈಲಾಶ್ ಗೆಹೋಟ್ ಮತ್ತು ಗಾಂಧಿ ನಗರದಿಂದ ಅರವಿಂದರ್ ಸಿಂಗ್ ಲವಿ ಸ್ಪರ್ಧಿಸಲಿದ್ದಾರೆ

Delhi Assembly elections BJP releases first list of 29 candidates

ಎಎಪಿ ಸಂಚಾಲಕ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಅವರು ಕಲ್ಕಾಜಿ ಕ್ಷೇತ್ರದಿಂದ ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಅಲ್ಕಾ ಲಾಂಬಾ ಅವರನ್ನು ಕಣಕ್ಕಿಳಿಸಿದೆ.

ಇತರ ಪ್ರಮುಖ ಅಭ್ಯರ್ಥಿಗಳೆಂದರೆ ಅನಿಲ್ ಶರ್ಮಾ ಅವರು ಆರ್.ಕೆ. ಪುರಂ, ಮಾಳವೀಯ ನಗರದಿಂದ ಸತೀಶ್ ಉಪಾಧ್ಯಾಯ, ಪಟ್ಪರ್‌ಗಂಜ್‌ನಿಂದ ರವೀಂದರ್ ಸಿಂಗ್ ನೇಗಿ ಮತ್ತು ಮಾಡೆಲ್ ಟೌನ್‌ನಿಂದ ಅಶೋಕ್ ಗೋಯೆಲ್ ಅವರನ್ನ ಕಣಕ್ಕಿಳಿಸಿದೆ. ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಕರೋಲ್ ಬಾಗ್ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದ್ದು, ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ ಬಿಜೆಪಿ ರೇಖಾ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಂಗ್‌ಪುರ ಕ್ಷೇತ್ರದಿಂದ ವಿರುದ್ಧ ಬಿಜೆಪಿ ಸರ್ದಾರ್ ತರ್ವಿಂದರ್ ಸಿಂಗ್ ಮರ್ವಾ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಮಾಜಿ ಮೇಯರ್ ಫರ್ಹಾದ್ ಸೂರಿ ಅವರನ್ನು ಕಣಕ್ಕಿಳಿಸಿದೆ.

2020 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ರಲ್ಲಿ 62 ಸ್ಥಾನಗಳನ್ನು ಗೆದ್ದಿತ್ತು. 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 70ರಲ್ಲಿ 67 ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಿತ್ತು.

'Aaapda' ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ: ಮೋದಿ

ಆಮ್ ಆದ್ಮಿ ಪಾರ್ಟಿಯು ದೆಹಲಿಯ 'ವಿಪತ್ತು' ಆಗಿದ್ದು, ಕಳೆದ 10 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
AAP ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಅದರ (ಎಎಪಿ) ಆಳ್ವಿಕೆಯು ಮುಂದುವರಿದರೆ ರಾಷ್ಟ್ರ ರಾಜಧಾನಿಯ ಪರಿಸ್ಥಿತಿಯು ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದರು.

ಕೇಂದ್ರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ; ಮತ್ತೊಂದೆಡೆ, ಕೇಂದ್ರಾಡಳಿತ ಪ್ರದೇಶದಲ್ಲಿನ ಸರ್ಕಾರವು ಕಟುವಾದ ಸುಳ್ಳಿನ ಪರವಾಗಿ ನಿಂತಿದೆ. ಎಎಪಿ ಸರ್ಕಾರವು ಶಾಲಾ ಶಿಕ್ಷಣದಿಂದ ಹಿಡಿದು ಮಾಲಿನ್ಯ ಮತ್ತು ಮದ್ಯ ವ್ಯಾಪಾರದವರೆಗೆ ಹಲವಾರು ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+