Delhi Election Results 2025: ದೆಹಲಿಯಲ್ಲಿ ಮತ ಎಣಿಕೆ; ಎಲ್ಲಾ ಮತಗಟ್ಟೆಗಳಲ್ಲೂ ಭಾರೀ ಬಿಗಿ ಭದ್ರತೆ
Delhi Assembly Election Results 2025: ರಾಷ್ಟ್ರ ರಾಜಧಾನಿ ದಹಲಿಯಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ (ಫೆಬ್ರವರಿ 05) ಮತದಾನ ನಡೆಯಿತು. ಇಂದು (ಫೆಬ್ರವರಿ 08) ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಯಾವುದೇ ಗಲಭೆಗಳು ನಡೆಯಂತೆ ಶಾಂತಿಯುತವಾಗಿ ಮತ ಎಣಿಕೆ ನಡೆಸಿಕೊಡುವ ದೃಷ್ಟಿಯಿಂದ ಬೆಳಗಿನ ಜಾವದಿಂದಲೇ ಎಲ್ಲಾ ಮತಗಟ್ಟೆಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಮತ ಎಣಿಕೆ ಇಂದು (ಫೆಬ್ರವರಿ 8) ಬೆಳಗ್ಗೆ 8 ಗಂಟೆಗೆ ಆರಂಭ ಆಗಲಿದೆ. ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದೆಹಲಿಯಲ್ಲಿ ಸ್ಪರ್ಧಿಸಿದ ಪ್ರಮುಖ 3 ಪಕ್ಷಗಳಾಗಿವೆ.

ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಎಎಪಿ ಮಾತ್ರ ಈ ಸಮೀಕ್ಷೆಗಳನ್ನು ನಿರಾಕರಿಸಿದ್ದು, ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಎಎಪಿ 4ನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ 26 ವರ್ಷಗಳಿಗೂ ಹೆಚ್ಚು ಕಾಲದ ನಂತರ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸುತ್ತದೆಯೇ ಎಂಬುದು ಇಂದು ನಿರ್ಧಾರವಾಗಲಿದೆ. ಕಳೆದ ಎರಡು ಚುನಾವಣೆಗಳಲ್ಲಿ ಶೂನ್ಯ ಸಾಧನೆ ಮಾಡಿದ ನಂತರ ಕಾಂಗ್ರೆಸ್ ಸಹ ಕೆಲವು ಲಾಭಗಳನ್ನು ಹುಡುಕುತ್ತಿದೆ.
ಸಂಸ್ಥೆಗಳ ಸಮೀಕ್ಷೆಗಳ ವಿವರ ಹೀಗಿದೆ
* ಚಾಣಾಕ್ಯ ಸ್ಟ್ರಾಟೆಜೀಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಎಎಪಿ 25-28, ಬಿಜೆಪಿ 39-44, ಕಾಂಗ್ರೆಸ್ 2-3 ಮತಗಳನ್ನು ಪಡೆಯಲಿವೆ. ಈ ಮೂಲಕ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
* ಮಾರ್ಟೈಜ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 35-40, ಎಎಪಿ 32-37, ಕಾಂಗ್ರೆಸ್ 0-1 ಮತಗಳನ್ನು ಪಡೆಯಲಿವೆ.
* ಪೀಪಲ್ ಪಲ್ಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 51-60, ಎಎಪಿ 10-19 ಮತಗಳನ್ನು ಪಡೆಲಿವೆ.
* ಪಿ ಮಾರ್ಕ್ಯೂ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 39-49, ಎಎಪಿ 21-31, ಕಾಂಗ್ರೆಸ್ 0-1 ಮತಗಳನ್ನು ಪಡೆಲಿವೆ.
* ಪೋಲ್ ಆಫ್ ಪೋಲ್ಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 38-44, ಎಎಪಿ 25-32, ಕಾಂಗ್ರೆಸ್ 0-2, ಪಕ್ಷೇತರ 0-1 ಮತಗಳನ್ನು ಪಡೆಲಿವೆ.
* JVC ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 39-45, ಎಎಪಿ 22-31, ಕಾಂಗ್ರೆಸ್ 0-2, ಪಕ್ಷೇತರ 0-1 ಮತಗಳನ್ನು ಪಡೆಲಿವೆ.
* ಡಿವಿ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 36-44, ಎಎಪಿ 26-34 ಮತಗಳನ್ನು ಪಡೆಲಿವೆ.
* People's Insight ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 40-44, ಎಎಪಿ 25-29, ಕಾಂಗ್ರೆಸ್ 0-1 ಮತಗಳನ್ನು ಪಡೆಲಿವೆ.












Click it and Unblock the Notifications