ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ರಕ್ಷಣಾ ಇಲಾಖೆ ಚಿಂತನೆ

|
Google Oneindia Kannada News

ನವದೆಹಲಿ, ಮಾರ್ಚ್ 15: ಉಗ್ರರ ವಿರುದ್ಧದ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವ ಕೇಂದ್ರ ಸರ್ಕಾರ, ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟಹಾಕಲು ಹ್ಯಾಂಡ್ ಗ್ರೆನೇಡ್‌ಗಳನ್ನು ಬಳಸಲು ಚಿಂತನೆ ನಡೆಸಿದೆ.

ಸೇನಾ ವಲಯದಲ್ಲಿನ 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಭಾರತೀಯ ಸೇನೆಗೆ ಹತ್ತು ಲಕ್ಷ ಬಹು ಗುಣಗಳ ಹ್ಯಾಂಡ್ ಗ್ರೆನೇಡ್‌ಗಳನ್ನು ಖರೀದಿಸುವ ಪ್ರಸ್ತಾವವನ್ನು ರಕ್ಷಣಾ ಸಚಿವಾಲಯ ಪರಿಗಣಿಸುವ ಸಾಧ್ಯತೆ ಇದೆ.

ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

ದೇಶಿ ಗ್ರೆನೇಡ್ ತಯಾರಕಾ ಸಂಸ್ಥೆಯಿಂದ ಹತ್ತು ಲಕ್ಷ ಹ್ಯಾಂಡ್ ಗ್ರೆನೇಡ್‌ಗಳನ್ನು ಖರೀದಿಸುವ ಪ್ರಸ್ತಾವ ಸಲ್ಲಿಸಲಾಗಿದ್ದು, ಇದರ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಈ ವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

defence ministry likely to consider proposal to buy 10 lakh multi mode hand grenades

ಈ ಖರೀದಿಯು 500 ಕೋಟಿ ರೂಪಾಯಿಗೂ ಅಧಿಕ ಬಜೆಟ್ ಒಳಗೊಂಡಿದೆ. ಈಗಾಗಲೇ ಸರ್ಕಾರ ಸೇನಾ ಯೋಧರಿಗೆ ಮುಖ್ಯ ವೈಯಕ್ತಿಕ ಶಸ್ತ್ರಾಸ್ತ್ರ ಅಗತ್ಯವನ್ನು ಪೂರೈಸುವ ಸಲುವಾಗಿ ಆಧುನಿಕ ರೈಫಲ್‌ಗಳ ಖರೀದಿಗೆ ಮುಂದಾಗಿದೆ.

ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ

ಅಮೆರಿಕದ ಕಂಪೆನಿಯಿಂದ 700 ಕೋಟಿ ರೂಪಾಯಿ ವೆಚ್ಚದಲ್ಲಿ 75 ಸಾವಿರ ಸಿಗ್ ಸಾರ್ ಅಸಾಲ್ಟ್ ರೈಫಲ್‌ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ರಷ್ಯಾದೊಂದಿಗೆ ಜಂಟಿ ಪಾಲುದಾರಿಕೆಯಲ್ಲಿ 7.5 ಲಕ್ಷ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್ಸ್‌ಗಳ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ? ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?

ಪ್ರಸ್ತುತ ಎಚ್‌ಇ-36 ಗ್ರೆನೇಡ್‌ಗಳನ್ನು ಬಳಸಲಾಗುತ್ತಿದೆ. ಈಗ ಡಿಆರ್‌ಡಿಓ ಬಹು ಗುಣದ ಹ್ಯಾಂಡ್ ಗ್ರೆನೇಡ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಭಾರಿ ಪ್ರಮಾಣದಲ್ಲಿ ಇವುಗಳ ತಯಾರಿಕೆಗೆ ದೇಶಿ ಉತ್ಪಾದನಾ ಸಂಸ್ಥೆಯೊಂದನ್ನು ಆಯ್ದುಕೊಳ್ಳಲಾಗಿದೆ.

English summary
The Defence Ministry is likely to consider a proposal to buy 10 lakh multi-mode hand grenades for the Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X