ಪಿನಾಕಾ ರಾಕೆಟ್ ಲಾಂಚರ್ ಖರೀದಿ: ಕೇಂದ್ರದಿಂದ 2,580 ಕೋಟಿ ರೂ. ಒಪ್ಪಂದ

ನವದೆಹಲಿ,ಸೆಪ್ಟೆಂಬರ್ 01: ಕೇಂದ್ರ ರಕ್ಷಣಾ ಸಚಿವಾಲಯವು 2580 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸೇನೆಗೆ ಪಿನಾಕಾ ರಾಕೆಟ್ ಲಾಂಚರ್‌ಗಳನ್ನು ಖರೀದಿಸಲು ಮುಂದಾಗಿದೆ.

ಆರು ಸೇನಾ ರೆಜಿಮೆಂಟ್​ಗೆ ಒಟ್ಟು 114 ಪಿನಾಕಾ ರಾಕೆಟ್ ಲಾಂಚರ್​ಗಳು ಈ ಒಪ್ಪಂದದ ಮೂಲಕ ಲಭ್ಯವಾಗಲಿವೆ. ಇದರಲ್ಲಿ ಆಟೋಮೇಟೆಡ್​ ಗನ್​ ಆ್ಯಂಡ್ ಪೊಸಿಷನಿಂಗ್ ಸಿಸ್ಟಂ(ಎಜಿಎಪಿಎಸ್​) ಮತ್ತು 45 ಕಮಾಂಡ್ ಪೋಸ್ಟ್​ಗಳು ಟಿಪಿಸಿಎಲ್​ ಮತ್ತು ಎಲ್​ಆ್ಯಂಡ್​ ಟಿಯಿಂದ ಮತ್ತು 330 ವೆಹಿಕಲ್ಸ್ ಬಿಇಎಂಎಲ್​ನಿಂದ ಪೂರೈಕೆಯಾಗಲಿದೆ.

Defence Ministry Inks Rs 2,580 Crore Deal With Indian Companies To Procure Pinaka Rocket Launchers

ಈ ಒಪ್ಪಂದವು ರಕ್ಷಣಾ ಸಚಿವಾಲಯದ ಅಕ್ವಿಸಿಷನ್ ವಿಂಗ್ ಮತ್ತು ಭಾರತ್ ಅರ್ಥ್​ ಮೂವರ್ಸ್ ಲಿಮಿಟೆಡ್​ (ಬಿಇಎಂಎಲ್​), ಟಾಟಾ ಪವರ್ ಕಂಪನಿ ಲಿಮಿಟೆಡ್​ (ಟಿಪಿಸಿಎಲ್​) ಮತ್ತು ಲಾರ್ಸೆನ್ ಆ್ಯಂಡ್ ಟೂಬ್ರೋ (ಎಲ್​ ಆ್ಯಂಡ್ ಟಿ) ಜತೆಗೆ ಆಗಸ್ಟ್ 31ರಂದು ಏರ್ಪಟ್ಟಿದೆ.

ಪಿನಾಕಾ ಮಲ್ಟಿಪಲ್ ಲಾಂಚ್​ ರಾಕೆಟ್ ಸಿಸ್ಟಮ್ ಡಿಆರ್​ಡಿಒ ವಿನ್ಯಾಸಗೊಳಿಸಿದ್ದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿರಲಿದೆ. 2024ಕ್ಕೆ ಪೂರ್ಣಗೊಂಡು ಉತ್ತರ, ಪೂರ್ವ ಗಡಿಭಾಗದಲ್ಲಿ ಸೇನೆಯ ಸೇವೆಗೆ ಲಭ್ಯವಾಗಬೇಕು ಎಂಬುದು ಒಪ್ಪಂದದ ಮಹತ್ವದ ಅಂಶ. ಈ ಯೋಜನೆಯ ಪ್ರಸ್ತಾವನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಅನುಮೋದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+