Get Updates
Get notified of breaking news, exclusive insights, and must-see stories!

ಚೀನಾಗೆ ಖಡಕ್ ಸಂದೇಶ ನೀಡಿದ ರಾಜನಾಥ್‌ ಸಿಂಗ್‌

ನವದೆಹಲಿ: ಭಾರತ-ಚೀನಾ ಮಧ್ಯೆ ಮಹತ್ವದ ಮಾತುಕತೆ ಶುರುವಾಗಿದ್ದು, ಗಡಿ ಸಮಸ್ಯೆ ಇತ್ಯರ್ಥಕ್ಕೆ ಈ ಬಾರಿ ಸ್ವತಃ ಚೀನಾ ಮುಗಿಬಿದ್ದು ಬಂದಿದೆ. ಇದೇ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರಿಗೆ ನೇರ ಉತ್ತರ ನೀಡಿರುವ ರಾಜನಾಥ್‌ ಸಿಂಗ್‌, ಗಡಿಯಲ್ಲಿ ಚೀನಾ ಸೈನಿಕರು ಮಾಡುತ್ತಿರುವ ಉಪಟಳದಿಂದ ಶಾಂತಿ ಹಾಳಾಗುತ್ತಿದೆ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ನವದೆಹಲಿಯಲ್ಲಿ ಆಯೋಜನೆಯಾಗಿರುವ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ರಕ್ಷಣಾ ಸಚಿವ ಜನರಲ್‌ ಲಿ ಶಾಂಗ್‌ಫು ಭಾರತಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭವನ್ನು ಗಡಿ ವಿವಾದ ಇತ್ಯರ್ಥಕ್ಕೆ ಚೀನಾ ಬಳಸಿಕೊಳ್ಳುತ್ತಿದೆ. ಸಂಜೆ ಆರಂಭವಾದ ಮಹತ್ವದ ಸಭೆಯಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ರಾಜನಾಥ್‌ ಸಿಂಗ್‌ ಭಾಗವಹಿಸಿದ್ದರು. ಈ ವೇಳೆ ನೇರವಾಗಿ ಚೀನಾ ಸೇನೆ ತಪ್ಪುಗಳನ್ನು ತಿಳಿಸಿದರು. ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿರೇಖೆಯಲ್ಲಿ ಚೀನಾ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿರುವುದೇ ಸಮಸ್ಯೆಗೆ ಕಾರಣ ಎಂದಿದ್ದಾರೆ.

Defence Minister Rajnath Singh and Li Shangfu discussed about border issue

ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದು ಏನು?

ರಕ್ಷಣಾ ಸಚಿವಾಲಯ ಮಾಹಿತಿಯಂತೆ, ಭಾರತ-ಚೀನಾ ನಡುವಿನ ಸಂಬಂಧ ಗಡಿಯ ಶಾಂತಿಯನ್ನು ಆಧರಿಸಿದೆ. ಇದೀಗ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದ ಮತ್ತು ಬದ್ಧತೆಗೆ ಅನುಗುಣವಾಗಿ ಎಲ್‌ಎಸಿಯ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಈ ಮೂಲಕ ಚೀನಾ ಸೈನಿಕರು ಭಾರತ ಗಡಿಯೊಳಗೆ ಬಂದು ಒಪ್ಪಂದ ಉಲ್ಲಂಘಿಸಿದ ವಿಚಾರವನ್ನ ಪ್ರಸ್ತಾಪಿಸಲಾಗಿದೆ. ಹಾಗೇ ಗಡಿ ವಿಚಾರದಲ್ಲಿ ಭಾರತ ಹೊಸ ನಿಲುವು ತೆಗೆದುಕೊಳ್ಳುವುದಿಲ್ಲ ಎಂಬ ಸಂದೇಶವನ್ನೂ ಚೀನಾ ರಕ್ಷಣಾ ಸಚಿವರ ಮೂಲಕ ನೆರೆ ದೇಶಕ್ಕೆ ರವಾನಿಸಲಾಗಿದೆ.

ಒಪ್ಪಂದ ಮುರಿದಿದ್ದೇ ದೊಡ್ಡ ತಪ್ಪು!

ಜೊತೆಗೆ ಪೂರ್ವಲಡಾಖ್‌ನಲ್ಲಿ ವಾಸ್ತವ ಗಡಿರೇಖೆಯಲ್ಲಿ ಚೀನಾ ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿರುವುದು, ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದ ಅಡಿಪಾಯ ಅಲುಗಾಡಿಸಿದೆ ಎನ್ನುವ ಮೂಲಕ ಚೀನಾ 3 ವರ್ಷಗಳ ಹಿಂದೆ ಮಾಡಿದ್ದ ತಪ್ಪನ್ನು ಮನವರಿಕೆ ಮಾಡಿಸಿದ್ದಾರೆ ಸಚಿವ ರಾಜನಾಥ್‌ ಸಿಂಗ್‌. ಈಗಲೂ ಗಡಿಯಲ್ಲಿ ಚೀನಾ ಸೈನಿಕರು ಮಾಡುತ್ತಿರುವ ಕಿರಿಕಿರಿಯ ಬಗ್ಗೆ ಚೀನಾದ ರಕ್ಷಣಾ ಸಚಿವರಿಗೆ ತಿಳಿಸಿಕೊಡುವ ಕೆಲಸ ಮಾಡಲಾಗಿದೆ.

ಸಂಘರ್ಷದ ಬಳಿಕ ಮೊದಲ ಭೇಟಿ

ಭಾರತ, ಚೀನಾ ಗಡಿಭಾಗ ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆ ಬಳಿ ಎರಡೂ ದೇಶಗಳ ಸೈನಿಕರ ಮಧ್ಯೆ ನಡೆದಿದ್ದ ಭೀಕರ ಸಂಘರ್ಷದ ಬಳಿಕ ಇದು ಮಹತ್ವದ ಭೇಟಿಯಾಗಿದೆ. ಸೇನಾ ಸಂಘರ್ಷದ ಬಳಿಕ 3 ವರ್ಷಗಳಿಂದ ಭಾರತ ಹಾಗೂ ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಇದೆ. ಇಷ್ಟೆಲ್ಲದರ ಮಧ್ಯೆ ಚೀನಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಚರ್ಚೆ ನಡೆಯಿತು. ಭಾರತ ಆತಿಥ್ಯ ವಹಿಸಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ರಕ್ಷಣಾ ಲಿ ಶಾಂಗ್‌ಫು ಭಾರತಕ್ಕೆ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಡಿ ಸಮಸ್ಯೆ ಇತ್ಯರ್ಥಕ್ಕೆ ಮಹತ್ವದ ಸಭೆ ನಡೆದಿದೆ.

ಉಭಯ ರಕ್ಷಣಾ ಸಚಿವರ ಭೇಟಿ ಹಾಗೂ ಸಭೆಯಲ್ಲಿ ನಡೆದ ಮಾತುಕತೆಯ ಹೇಳಿಕೆಗಳನ್ನ ರಕ್ಷಣಾ ಸಚಿವಾಲಯ ತಿಳಿಸಿದೆ.ಗಡಿಯಲ್ಲಿನ ಬೆಳವಣಿಗೆಗಳು ಹಾಗೂ ದ್ವಿಪಕ್ಷೀಯ ಬಾಂಧವ್ಯ ಕುರಿತಾಗಿ ಉಭಯ ದೇಶಗಳ ರಕ್ಷಣಾ ಸಚಿವರು ಮುಕ್ತವಾಗಿ ಚರ್ಚಿಸಿದರು ಎಂದು ಕೂಡ ಮಾಹಿತಿ ನೀಡಲಾಗಿದೆ. ಮತ್ತೊಂದ್ಕಡೆ ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆ ಅಂತ್ಯಗೊಳಿಸಲು ಎರಡೂ ದೇಶಗಳ ನಡುವೆ ಸೇನಾ ಹಂತಗಳ ಚರ್ಚೆ ನಡೆದಿದೆ. ಏಪ್ರಿಲ್ 23ರಂದು 18ನೇ ಸುತ್ತಿನ ಸಭೆ ಕೂಡ ನಡೆದಿತ್ತು. 18ನೇ ಸುತ್ತಿನ ಸಭೆ ಬಳಿಕ ಭಾರತ & ಚೀನಾ ರಕ್ಷಣಾ ಸಚಿವರು ಸಭೆ ನಡೆಸಿರುವುದು ವಿಶೇಷ.

ಅಮೆರಿಕ ಮಣಿಸುವ ತಂತ್ರದಲ್ಲಿ ಚೀನಾ?

ಡ್ರ್ಯಾಗನ್ ಚೀನಾಗೆ ಈಗ ಅಮೆರಿಕ ಜಾಗತಿಕ ಶತ್ರು. ಇದೇ ಕಾರಣಕ್ಕೆ ತನ್ನ ಅಕ್ಕಪಕ್ಕದ ಶತ್ರು ರಾಷ್ಟ್ರಗಳ ಜೊತೆ ರಾಜಿಗಾಗಿ ರಣತಂತ್ರ ರೂಪಿಸಿದೆ ಚೀನಾ. ಕೆಲವು ದಿನಗಳ ಹಿಂದಷ್ಟೇ ಫಿಲಿಪೈನ್ಸ್ ಜೊತೆಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ರಾಜಿ ಮಾಡಿಕೊಂಡಿತ್ತು ಚೀನಾ. ಇದೀಗ ಭಾರತದ ಜೊತೆಗೆ ಗಡಿ ವಿವಾದ ಬಗೆಹರಿಸಿಕೊಳ್ಳುವ ಮೂಲಕ, ಅಮೆರಿಕದ ವಿರುದ್ಧ ಒಂದುಗೂಡಿಸುವ ಪ್ರಯತ್ನ ನಡೆಸಿದೆ. ಹೀಗಾಗಿಯೇ ಗಡಿಯಲ್ಲಿ ಶಾಂತಿ ಕಾಪಾಡುವುದರ ಜೊತೆಗೆ, ಬಿಕ್ಕಟ್ಟಿನ ಕುರಿತು ತ್ವರಿಗತಿಯಲ್ಲಿ ನಿರ್ಧಾರ ಕೈಗೊಳ್ಳಲು ಎರಡೂ ದೇಶಗಳು ಒಪ್ಪಿಗೆ ನೀಡಿವೆ ಎಂದಿತ್ತು ಚೀನಾ.

ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ನಂತರ ಫಿಲಿಪೈನ್ಸ್ ಸೇನೆ ಜೊತೆಗೂ ಮಿಲಿಟರಿ ಡ್ರಿಲ್‌ಗೆ ಶುರು ಮಾಡಿತ್ತು. ಆದರೆ ಇದೇ ಸಮಯಕ್ಕೆ ಕಿಲಾಡಿ ಚೀನಾ, ಫಿಲಿಪೈನ್ಸ್ ಮನವೊಲಿಸಿ ದೊಡ್ಡಣ್ಣ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡಿತಾ? ಅನ್ನೋ ಡೌಟ್ ಶುರುವಾಗಿದೆ. ಜೊತೆಗೆ ಭಾರತದ ಜೊತೆಗೂ ರಾಜಿಗೆ ಮುಂದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+