ಗೌರಿ ಹತ್ಯೆ, ಆರೆಸ್ಸೆಸ್ ಕೈವಾಡ ಎಂದ ರಾಹುಲ್ , ಯೆಚೂರಿ ವಿರುದ್ಧ ದಾವೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂಬ ಆರೋಪ ಮಾಡಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀರಾಮ್ ಯೆಚೂರಿ ವಿರುದ್ಧ ಆರೆಸ್ಸೆಸ್ ನ ಸ್ವಯಂಸೇವಕ- ಮುಂಬೈನಲ್ಲಿ ವಕೀಲರಾಗಿರುವ ವ್ಯಕ್ತಿಯೊಬ್ಬರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ವಕೀಲ ಧ್ರುತಿಮನ್ ಜೋಶಿ ಅವರು ಕುರ್ಲಾದ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆ ನಂತರ ರಾಹುಲ್ ಗಾಂಧಿ ಹಾಗೂ ಸೀತಾರಾಮ್ ಯೆಚೂರಿ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಗಳನ್ನು ಜೋಶಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.

"ಇಬ್ಬರೂ ಆರೆಸ್ಸೆಸ್ ನ ಟೀಕಿಸಿದ್ದು, ಆರೆಸ್ಸೆಸ್ ನ ಸಿದ್ಧಾಂತದಿಂದಲೇ ಗೌರಿ ಲಂಕೇಶ್ ಹತ್ಯೆಯಾಗಿದೆ ಎಂಬ ಆರೋಪ ಮಾಡಿದ್ದಾರೆ" ಎಂದು ಜೋಶಿ ಮಾಧ್ಯಮಗಳ ಎದುರು ತಿಳಿಸಿದ್ದಾರೆ.

Rahul Gandhi

ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಿಂದ ಜನಸಾಮಾನ್ಯರ ದೃಷ್ಟಿಯಲ್ಲಿ ಸಂಘಟನೆಗೆ ಅವಮಾನವಾಗಿದೆ. ಯಾವುದೇ ಆಧಾರವಿಲ್ಲದೆ ಆರೆಸ್ಸೆಸ್ ನ ವರ್ಚಸ್ಸು ಹಾಳು ಮಾಡಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

"ನನಗೆ ಈ ಹೇಳಿಕೆಗಳು ವೈಯಕ್ತಿಕವಾಗಿ ಪರಿಣಾಮ ಬೀರಿದ್ದರಿಂದ ದೂರು ದಾಖಲು ಮಾಡಿದ್ದೇನೆ. ಆ ಹೇಳಿಕೆ ನಂತರ, ನನ್ನ ಸ್ನೇಹಿತರು ಹೇಳಿದರು: ಆರೆಸ್ಸೆಸ್ ಸಿದ್ಧಾಂತಗಳು ಗೌರಿಯ ಹತ್ಯೆ ಮಾಡಿವೆ" ಎಂದು ಜೋಶಿ ಹೇಳಿದ್ದಾರೆ.

Seetaram Yechuri

ಮುಂಬೈ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂಜಯ್ ನಿರುಪಮ್ ಮಾತನಾಡಿ, ಕೋರ್ಟ್ ನಿಂದ ನೋಟಿಸ್ ಬಂದ ನಂತರ ಅದಕ್ಕೆ ಕಾನೂನಾತ್ಮಕವಾಗಿಯೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ಸೀತಾರಾಮ್ ಯೆಚೂರಿ, ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಅವರು ಏನು ಬೇಕೋ ಹೇಳಿಕೊಳ್ಳಲಿ. ನಾನು ಕಾನೂನಾತ್ಮಕವಾಗಿಯೇ ಹೋರಾಡುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+