ಕರ್ತರ್ ಪುರ್ ಕಾರಿಡಾರ್: ಭಾರತದ ಕ್ರಮಕ್ಕೆ ಪಾಕಿಸ್ತಾನದಿಂದ ಮೆಚ್ಚುಗೆ
ಪಂಜಾಬ್ ನಿಂದ ಪಾಕಿಸ್ತಾನದ ಗುರ್ ದ್ವಾರ ಕರ್ತರ್ ಪುರ್ ಸಾಹಿಬ್ ಗೆ ಕಾರಿಡಾರ್ ನಿರ್ಮಾಣದ ಘೋಷಣೆ ಮಾಡಿದ ಭಾರತದ ಕ್ರಮವನ್ನು ಪಾಕ್ ಸ್ವಾಗತಿಸಿದೆ. ಅಂದಹಾಗೆ ಸಿಖ್ ಧರ್ಮ ಸಂಸ್ಥಾಪಕರಾದ ಗುರು ನಾನಕ್ ರು ದೇಹ ತ್ಯಜಿಸಿದ್ದು ಇದೇ ಸ್ಥಳದಲ್ಲಿ. ಎರಡೂ ದೇಶಗಳ ಮಧ್ಯೆ ಶಾಂತಿ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವವರ ಪಾಲಿಗೆ ಭಾರತ ಸಚಿವ ಸಂಪುಟದ ಈ ತೀರ್ಮಾನವು ದೊಡ್ಡ ಗೆಲುವು ಎಂದು ಕರೆದಿದ್ದಾರೆ.
ಸರಿಯಾದ ದಿಕ್ಕಿನೆಡೆಗೆ ಹೆಜ್ಜೆ ಇಡಲಾಗುತ್ತಿದೆ ಮತ್ತು ಇಂತಹ ಹೆಜ್ಜೆಗಳಿಂದ ಎರಡೂ ದೇಶಗಳ ಮಧ್ಯೆ ಬಾಂಧವ್ಯ ವೃದ್ಧಿ ಆಗಬೇಕು ಎಂಬ ಧ್ವನಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದು ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.
ನವೆಂಬರ್ ಇಪ್ಪತ್ತೆಂಟನೇ ತಾರೀಕಿನಂದು ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಂಕುಸ್ಥಾಪನೆ ನೆರವೇರಿಸುತ್ತಾರೆ ಎಂದು ವಿದೇಶಾಂಗ ಮಂತ್ರಿ ಶಾದ್ ಮೆಹ್ಮೂದ್ ಖುರೇಷಿ ತಿಳಿಸಿದ್ದಾರೆ. ಗುರುನಾನಕ್ ರ 550ನೇ ಜನ್ಮ ವರ್ಷಾಚರಣೆ ಅಂಗವಾಗಿ ಈ ಯೋಜನೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಈ ಶುಭ ಸಮಾರಂಭಕ್ಕೆ ಸಿಖ್ ಸಮುದಾಯದವರನ್ನು ಪಾಕ್ ಗೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಗುರ್ ದ್ವಾರ್ ಕರ್ತರ್ ಪುರ್ ಸಾಹಿಬ್ ಭಾರತ-ಪಾಕಿಸ್ತಾನದ ಗಡಿಗೆ ಮೂರು ಕಿ.ಮೀ. ದೂರದಲ್ಲಿದೆ.












Click it and Unblock the Notifications