ಸಹೋದರಿಯ ಮಗಳ ಶವವನ್ನು ಸೈಕಲ್ಲಿನಲ್ಲಿಯೇ ಕೊಂಡಯ್ದ ಮಾವ

Posted By:
Subscribe to Oneindia Kannada

ಕೌಶಂಬಿ (ಉ.ಪ್ರ.), ಜೂನ್ 14: ಒಂದು ಕಡೆ ಸಹೋದರಿಯ ಏಳು ತಿಂಗಳ ಮಗುವಿನ ಕಳೇಬರ, ಇನ್ನೊಂದೆಡೆ ಆ ಮಗುವಿನ ಶವವನ್ನು ಹೊತ್ತು ತರಲು ನಿರಾಕರಿಸಿದ ಅಂಬುಲೆನ್ಸ್, ಕೊನೆಗೆ ಆ ಮಗುವಿನ ಶವವನ್ನು ಆಸ್ಪತ್ರೆಯಿಂದ ತನ್ನ ಸೈಕಲ್ಲಿನಲ್ಲೇ ಹೊತ್ತು ತರಬೇಕಾದ ದಯನೀಯ ಸ್ಥಿತಿ... ಈ ಅಮಾನವೀಯ ಘಟನೆ ಕಂಡುಬಂದಿದ್ದು ಉತ್ತರ ಪ್ರದೇಶದ ಕೌಶಂಬಿ ಎಂಬ ಪ್ರದಶದಲ್ಲಿ.

ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ತಿಂಗಳ ಹೆಣ್ಣುಕೂಸು ಪೂನಂ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿತ್ತು. ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದಕ್ಕಾಗಿ ಅಲಹಾಬಾದಿಗೆ ತೆರಳಿದ್ದ ಮಗುವಿನ ತಂದೆ ಅನಂತ್ ಕುಮಾರ್, ತಾವು ಬರುವವರೆಗೂ ಮಗುವನ್ನು ನೋಡಿಕೊಳ್ಳುವಂತೆ ತನ್ನ ಹೆಂಡತಿಯ ಸಹೋದರನಿಗೆ ಹೇಳಿ ಹೋಗಿದ್ದರು.

ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ

Death of Humanity: a man carries 7-month-old niece's corpse on bicycle

ಆದರೆ ತೀವ್ರ ವಾಂತಿ, ಬೇಧಿಯಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ. ಅಂತ್ಯಸಂಸ್ಕಾರಕ್ಕಾಗಿ ಆಕೆಯ ದೇಹವನ್ನು ಆಸ್ಪತ್ರೆಯಿಂದ ಮನೆಗೆ ಕೊಂಡೊಯ್ಯಲು ಆಂಬುಲೆನ್ಸ್ ಕೇಳಿದರೆ ಆಂಬುಲೆನ್ಸ್ ಚಾಲಕ ತಾನು ಬರುವುದಿಲ್ಲ ಎಂದಿದ್ದಾನೆ! ಪರಿ ಪರಿಯಾಗಿ ಬೇಡಿಕೊಂಡರೂ ಅಂಬುಲೆನ್ಸ್ ಚಾಲಕನ ಮನ ಕರಗದಿದ್ದಾಗ, ಏನು ಮಾಡಬೇಕೆಂದೇ ತೋಚದೆ ಬಾಲಕಿಯ ಸೋದರ ಮಾವ ತನ್ನ ಸೈಕಲ್ಲಿನಲ್ಲಿಯೇ ಮಗುವಿನ ಶವವನ್ನು ಹೊತ್ತುಕೊಂಡು ಹೊಗಿದ್ದಾರೆ!

Death of Humanity: a man carries 7-month-old niece's corpse on bicycle

ಅಪ್ಪಾ, ನನ್ನ ಬದುಕಿಸಿಕೋ ಎಂದು ಆ ಪುಟಾಣಿ ಗೋಗರೆದರೂ...

ಸದ್ಯಕ್ಕೆ ಅಂಬುಲೆನ್ಸ್ ಚಾಲಕ ಮತ್ತು ಈ ಬಗ್ಗೆ ಬೇಜವಾಬ್ದಾರಿ ತೋರಿಸಿದ ವೈದ್ಯರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೌಶಂಬಿ ಪೊಲೀಸರು ತಿಳಿಸಿದ್ದಾರೆ.

ಬೈಕ್ ನಲ್ಲಿ ಮಗುವಿನ ಶವವನ್ನು ತೆಗೆದುಕೊಂಡು ಹೋದ ಅಸಹಾಯಕ ತಂದೆ

ಇದೇ ರೀತಿಯ ಘಟನೆ ಇದೇ ಜೂನ್ 5 ರಂದು ಬಿಹಾರದಲ್ಲೂ ನಡೆದಿತ್ತು. ವ್ಯಕ್ತಿಯೊಬ್ಬ ತನ್ನ ಮೋಟಾರ್ ಸೈಕಲ್ಲಿನಲ್ಲೇ ಪತ್ನಿಯ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಹೊತ್ತುತಂದಿದ್ದ! ಆಗಲೂ ಅಲ್ಲಿನ ಆಸ್ಪತ್ರೆಯೊಂದು ಅಂಬುಲೆನ್ಸ್ ನೀಡಲು ನಿರಾಕರಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man carried the dead body of his seven-month-old niece on a bicycle after being denied for an ambulance, in perhaps another shocking display of disregard for humanity. The incident took place on Monday when the girl Poonam died during a treatment at the district hospital.
Please Wait while comments are loading...