Train Accident: ರೈಲು ಅಪಘಾತ ರೈಲ್ವೆಯ ಮೇಕ್ ಓವರ್ ಯೋಜನೆಗೆ ಆಘಾತ ತಂದಿದೆಯೇ?
ನವದೆಹಲಿ, ಜೂನ್. 04: ಒಡಿಶಾದಲ್ಲಿ 280 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೂರು ರೈಲುಗಳ ಅಪಘಾತವು ಹೊಸ ರೈಲುಗಳು ಮತ್ತು ಆಧುನಿಕ ನಿಲ್ದಾಣಗಳೊಂದಿಗೆ 2.4 ಟ್ರಿಲಿಯನ್ ರೂಪಾಯಿ ವ್ಯಯಿಸಿ ಮಾಡ೩ಲಾಗುವ ಆಧುನಿಕ ರೂಪಾಂತರಕ್ಕೆ ಒಳಗಾಗುವ ರೈಲ್ವೆಯ ಯೋಜನೆಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶುಕ್ರವಾರ ನಡೆದ ಈ ಭೀಕರ ಅಪಘಾತ 20 ವರ್ಷಗಳಿಂದ ದೇಶದಲ್ಲಿ ನಡೆದ ಅತ್ಯಂತ ಭೀಕರ ರೈಲು ಅಪಘಾತವಾಗಿದ್ದು, ರೈಲ್ವೆಯ ಬದಲಾವಣೆಯ ಯೋಜನೆಗೆ ಆಘಾತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಛತ್ತೀಸ್‌ಗಢದ ಕಿರೋಡಿಮಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಸೇನ್, "ಸುರಕ್ಷತಾ ದಾಖಲೆಯು ವರ್ಷಗಳಲ್ಲಿ ಸುಧಾರಿಸುತ್ತಿದೆ ಆದರೆ ಇನ್ನೂ ಹೆಚ್ಚಿನ ಕೆಲಸಗಳಿವೆ" ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ರೈಲ್ವೇಯು ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸಲು ಹೆಚ್ಚು ಹೆಚ್ಚು ರೈಲುಗಳನ್ನು ಪರಿಚಯಿಸುತ್ತಿದೆ ಆದರೆ ಅವುಗಳನ್ನು ನಿರ್ವಹಿಸಲು ಉದ್ಯೋಗಿಗಳಿಗೆ ಸಮರ್ಪಕವಾಗಿ ತರಬೇತಿ ನೀಡಲಾಗಿಲ್ಲ ಅಥವಾ ಅವರ ಕೆಲಸದ ಹೊರೆ ತುಂಬಾ ಹೆಚ್ಚಾಗಿದೆ ಎಂದು ರೈಲ್ವೆ ತಜ್ಞರು ಅಸಮಾಧಾನ ಹೊರಹಾಕಿದ್ದಾರೆ.
ಮೂರು ರೈಲುಗಳ ಘರ್ಷಣೆ ಸಂಭವಿಸಿದ ಪೂರ್ವ ಕರಾವಳಿ ಮಾರ್ಗವು ದೇಶದ ಅತ್ಯಂತ ಹಳೆಯ ಮತ್ತು ಜನನಿಬಿಡ ಮಾರ್ಗವಾಗಿದೆ. ಏಕೆಂದರೆ ಇದು ಭಾರತದ ಕಲ್ಲಿದ್ದಲು ಮತ್ತು ತೈಲ ಸರಕು ಸಾಗಣೆಯನ್ನು ಸಹ ಹೊಂದಿದೆ ಎಂದು ಪ್ರಕಾಶ್ ಕುಮಾರ್ ಸೇನ್ ಹೇಳಿದ್ದಾರೆ. "ಈ ಟ್ರ್ಯಾಕ್‌ಗಳು ತುಂಬಾ ಹಳೆಯವು. ಅವುಗಳ ಮೇಲಿನ ಹೊರೆ ತುಂಬಾ ಹೆಚ್ಚಾಗಿದೆ. ನಿರ್ವಹಣೆ ಸರಿಯಾಗಿಲ್ಲದಿದ್ದರೆ, ವೈಫಲ್ಯಗಳು ಸಂಭವಿಸುತ್ತವೆ" ಎಂದು "ಭಾರತದಲ್ಲಿ ರೈಲು ಹಳಿತಪ್ಪುವಿಕೆಗೆ ಕಾರಣಗಳು ಮತ್ತು ಸರಿಪಡಿಸುವ ಕ್ರಮಗಳು- 2020" ರ ಅಧ್ಯಯನದ ಪ್ರಮುಖ ಲೇಖಕರೂ ಆಗಿರುವ ಪ್ರಕಾಶ್ ಕುಮಾರ್ ಸೇನ್ ಹೇಳಿದ್ದಾರೆ.
ಇಂಟರ್‌ನ್ಯಾಶನಲ್ ರೈಲ್ವೇ ಜರ್ನಲ್‌ನ ಸ್ವತಂತ್ರ ಸಾರಿಗೆ ತಜ್ಞ ಮತ್ತು ಲೇಖಕ ಶ್ರೀನಂದ್ ಝಾ, ರೈಲ್ವೇ ನೆಟ್‌ವರ್ಕ್‌ನಾದ್ಯಂತ ಅಪಘಾತ ತಪ್ಪಿಸುವ ಸಾಧನಗಳು ಮತ್ತು ತುರ್ತು ಎಚ್ಚರಿಕೆ ವ್ಯವಸ್ಥೆಗಳಂತಹ ಸುರಕ್ಷತಾ ಕಾರ್ಯವಿಧಾನಗಳನ್ನು ಸ್ಥಾಪಿಸಲು ರೈಲ್ವೆ ತುಂಬಾ ಹಿಂದುಳಿದಿದೆ ಎಂದು ಹೇಳುತ್ತಾರೆ. ಶುಕ್ರವಾರದ ಅಪಘಾತಕ್ಕೆ ಒಳಗಾದ ಮಾರ್ಗದಲ್ಲಿ "ಕವಾಚ್" ಲಭ್ಯವಿರಲಿಲ್ಲ.

ಭಾರತೀಯ ರೈಲ್ವೇಯು ಸುರಕ್ಷತೆಗೆ ಹೆಚ್ಚು ಗಮನ ಹರಿಸಲಾಗಿದೆ, ಈ ವರ್ಷಗಳಲ್ಲಿ ಕಡಿಮೆ ಅಪಘಾತದ ಪ್ರಮಾಣವಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರರು ಹೇಳುತ್ತಾರೆ. " ಈಗ ಸುರಕ್ಷತೆಯ ಬಗ್ಗೆ ಉದ್ಭವಿಸುತ್ತಿದೆ ಏಕೆಂದರೆ ಈಗ ಒಂದು ಘಟನೆ ನಡೆದಿದೆ. ಆದರೆ ನೀವು ಡೇಟಾವನ್ನು ನೋಡಿದರೆ, ವರ್ಷಗಳವರೆಗೆ ಯಾವುದೇ ದೊಡ್ಡ ಅಪಘಾತಗಳು ಸಂಭವಿಸಿಲ್ಲ. ಸುರಕ್ಷತೆಯ ಮಾಪಕವಾದ ಪ್ರತಿ ಮಿಲಿಯನ್ ರೈಲು ಕಿಲೋಮೀಟರ್‌ಗಳಿಗೆ ಅಪಘಾತಗಳ ಸಂಖ್ಯೆ 2013-14 ರಲ್ಲಿ 0.10 ರಿಂದ 2021-22 ರ ಆರ್ಥಿಕ ವರ್ಷದಲ್ಲಿ 0.03 ಕ್ಕೆ ಇಳಿದಿದೆ" ಎಂದು ಹೇಳಿದ್ದಾರೆ.
ಭಾರತೀಯರಿಗೆ ರೈಲ್ವೇ ದೀರ್ಘಾವಧಿಯ ಜೀವನಾಡಿ ಎಂದು ಪರಿಗಣಿಸಲಾಗಿದೆ. 170 ವರ್ಷಗಳ ಹಳೆಯ ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಹೆಚ್ಚಿಸಲು ಪ್ರಮುಖ ಮಾರ್ಗವಾಗಿದೆ. 2017-18 ರಲ್ಲಿ ರಚಿಸಲಾದ ಐದು ವರ್ಷಗಳ ಸುರಕ್ಷತಾ ನಿಧಿಯನ್ನು 2022-23 ರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.
ಭಾರತೀಯ ರೈಲ್ವೇ ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿದೆ. ಇದನ್ನು ಪ್ರತಿದಿನ 13 ಮಿಲಿಯನ್ ಜನರು ಉಪಯೋಗಿಸಿತ್ತಾರೆ. 2022 ರಲ್ಲಿ ಸುಮಾರು 1.5 ಶತಕೋಟಿ ಟನ್ ಸರಕು ಸಾಗಣೆಯನ್ನು ಸ್ಥಳಾಂತರಿಸಿದೆ. ಈ ವರ್ಷ, ರೈಲ್ವೆಗೆ ಸರ್ಕಾರವು ದಾಖಲೆಯ 2.4 ಟ್ರಿಲಿಯನ್ ರೂಪಾಯಿ ಗಳಿಸಿತ್ತು.












Click it and Unblock the Notifications