ಕೂಲ್ ಡ್ರಿಂಕ್ಸ್ ಬಾಟಲಿನಲ್ಲಿ ಸತ್ತ ಹಾವು, ಹೀಗೂ ಉಂಟೆ!

ತಿರುವನಂತಪುರದ ಹಳ್ಳಿಯೊಂದರಲ್ಲಿ ಈ ಘಟನೆ ಸಂಭವಿಸಿದೆ. ನನ್ನ ಎರಡುವರೆ ವರ್ಷದ ಮಗುವಿಗಾಗಿ ತಂಪು ಪಾನೀಯ ಖರೀದಿಸಿದ್ದೆ. ಮಾವಿನ ಸ್ವಾದದ ಪ್ಯಾಕ್ ನಲ್ಲಿ ಸತ್ತ ಹಾವು ಇತ್ತು ಎಂದು ಸಜೀವ್ ಎನ್ನುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೂಲ್ ಡ್ರಿಂಕ್ಸ್ ಕುಡಿದ ತಕ್ಷಣ ಮಗು ಸುಸ್ತಾಗಿ ಎಚ್ಚರ ತಪ್ಪಿ ಬಿತ್ತು. ಕೂಡಲೇ ನಾವು ಆಸ್ಪತ್ರೆಗೆ ದಾಖಲಿಸಿದೆವು. ದೇವರ ದಯೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಮಗಿವಿನ ತಂದೆ ನಿಟ್ಟುಸಿರು ಬಿಟ್ಟಿದ್ದಾರೆ.
ಪೊಲೀಸರು ದೂರು ದಾಖಲಿಸಿ ಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಯಾವ ಕಂಪೆನಿಯ ಟೆಟ್ರಾ ಪ್ಯಾಕಿನಲ್ಲಿ ಸತ್ತ ಹಾವು ಲಭ್ಯವಾಯಿತು ಎನ್ನುವ ಮಾಹಿತಿಯನ್ನು ಪೊಲೀಸರು ಬಿಟ್ಟು ಕೊಡುತ್ತಿಲ್ಲ.
ಕೂಲ್ ಡ್ರಿಂಕ್ಸ್ ಬಾಟಲಿನಲ್ಲಿ ಸತ್ತ ಜಿರಳೆ, ಇರುವೆ ಇದ್ದ ಘಟನೆ ಈ ಹಿಂದೆಯೂ ಹಲವು ಬಾರಿ ವರದಿಯಾಗಿತ್ತು. ಮಗು ಕುಡಿದ ಕೂಲ್ ಡ್ರಿಂಕ್ಸಿನ expirty date ಮುಗಿದಿತ್ತು.












Click it and Unblock the Notifications