ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಿಂದ 18 ವರ್ಷದ ಮಕ್ಕಳ ಮೇಲೆ 2/3ನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

|
Google Oneindia Kannada News

ನವದೆಹಲಿ, ಸಪ್ಟೆಂಬರ್ 2: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳ ಪಾಲಿಗೆ ಅಪಾಯಕಾರಿ ಎಂದು ಈಗಾಗಲೇ ಸೂಕ್ಷ್ಮಾಣು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಮಕ್ಕಳಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಸಂಶೋಧನೆಯನ್ನು ನಡೆಸಲಾಗುತ್ತಿದೆ.

ಹೈದ್ರಾಬಾದ್ ಮೂಲದ ಬಯಾಲಜಿಕಲ್-ಇ ಲಿಮಿಟೆಡ್ ಕಂಪನಿಯ ಕೊರೊನಾವೈರಸ್ ಲಸಿಕೆಯ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಅನುಮತಿ ನೀಡಿದೆ. 5 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಭಾರತೀಯ ಕೊವಿಡ್-19 ಲಸಿಕೆಯನ್ನು ಪ್ರಯೋಗಿಸುವುದಕ್ಕೆ ಅನುಮತಿ ನೀಡಿದ್ದರೂ, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ವಿಶೇಷ ವರದಿ: ಭಾರತದಲ್ಲಿ ಮಕ್ಕಳಿಗೆ ಯಾವಾಗ ಸಿಗುತ್ತೆ ಕೊರೊನಾವೈರಸ್ ಲಸಿಕೆ?ವಿಶೇಷ ವರದಿ: ಭಾರತದಲ್ಲಿ ಮಕ್ಕಳಿಗೆ ಯಾವಾಗ ಸಿಗುತ್ತೆ ಕೊರೊನಾವೈರಸ್ ಲಸಿಕೆ?

ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಅನುಮೋದಿತ ಶಿಷ್ಟಾಚಾರಗಳ ಪ್ರಕಾರ ಒಂದು ನಿರೀಕ್ಷಿತ, ಯಾದೃಚ್ಛಿಕ ಮತ್ತು ನಿಯಂತ್ರಿಸಲ್ಪಟ್ಟ ಕ್ರಮಗಳಲ್ಲಿ ನಡೆಸಲಾಗುತ್ತದೆ. 2 ಅಥವಾ 3ನೇ ಹಂತದ ವೈದ್ಯಕೀಯ ಪ್ರಯೋಗಗಳು ಲಸಿಕೆ ಸುರಕ್ಷತೆಯ ಮೌಲ್ಯಮಾಪನ ಹಾಗೂ ಪ್ರತಿಕ್ರಿಯಾತ್ಮಕತೆಯ ಜೊತೆಗೆ ಹದಿಹರೆಯದರಲ್ಲಿ ಮಕ್ಕಳಲ್ಲಿ ಇರುವ ರೋಗ ನಿರೋಧಕ ಶಕ್ತಿ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವೈದ್ಯಕೀಯ ಪ್ರಯೋಗಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ದೇಶದಲ್ಲಿ ಮೊದಲು ಅನುಮೋದನೆ ಪಡೆದ ಮಕ್ಕಳ ಲಸಿಕೆ

ದೇಶದಲ್ಲಿ ಮೊದಲು ಅನುಮೋದನೆ ಪಡೆದ ಮಕ್ಕಳ ಲಸಿಕೆ

ಭಾರತದಲ್ಲಿ ಜೈಡಸ್ ಕ್ಯಾಡಿಲಾ ಕಂಪನಿಯು ಉತ್ಪಾದಿಸುತ್ತಿರುವ ZyCoV-D ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ. ದೇಶದಲ್ಲಿ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲು ಅನುಮೋದನೆ ಪಡೆದಿರುವ ಮೊದಲ ಲಸಿಕೆ ಇದಾಗಿದೆ. ಇದರ ಹೊರತಾಗಿ ಹಲವು ಕಂಪನಿಗಳು ಮಕ್ಕಳಿಗೆ ನೀಡುವ ಲಸಿಕೆಗಳ ಬಗ್ಗೆ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿವೆ.

ತಜ್ಞರ ಸಮಿತಿ ನೀಡಿದ ಶಿಫಾರಸ್ಸು ಆಧರಿಸಿ ಅನುಮತಿ

ತಜ್ಞರ ಸಮಿತಿ ನೀಡಿದ ಶಿಫಾರಸ್ಸು ಆಧರಿಸಿ ಅನುಮತಿ

ಕೊರೊನಾವೈರಸ್ ತಜ್ಞರ ಸಮಿತಿ ನೀಡಿರುವ ಶಿಫಾರಸ್ಸಿನ ಆಧಾರದ ಮೇಲೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರವು 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಸುವಕ್ಕೆ ಅನುಮತಿ ನೀಡಿದೆ. ದೇಶದ 10 ಕಡೆಗಳಲ್ಲಿ ಈ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡುವ ಬಗ್ಗೆ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೊವೊವ್ಯಾಕ್ಸ್ ಲಸಿಕೆಯನ್ನು 2 ರಿಂದ 17 ವರ್ಷದೊಳಗಿನವರಿಗೆ ನೀಡುವುದಕ್ಕೆ ಸಂಬಂಧಿಸಿದಂತೆ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗ ನಡೆಸುವುದಕ್ಕೆ ಕಳೆದ ಜುಲೈನಲ್ಲೇ ಡಿಸಿಜಿಐ ಅನುಮತಿ ನೀಡಿದೆ.

ಭಾರತದಲ್ಲಿ ಬಯಾಲಜಿಕಲ್-ಇ ಲಸಿಕೆ ಬಗ್ಗೆ ವೈದ್ಯಕೀಯ ಪ್ರಯೋಗ

ಭಾರತದಲ್ಲಿ ಬಯಾಲಜಿಕಲ್-ಇ ಲಸಿಕೆ ಬಗ್ಗೆ ವೈದ್ಯಕೀಯ ಪ್ರಯೋಗ

ಕೊರೊನಾವೈರಸ್ ಸೋಂಕಿಗೆ ಬಯಾಲಜಿಕಲ್-ಇ ಕಂಪನಿಯ ಆರ್ ಬಿಡಿ ಪ್ರೊಟೀನ್ ಅಂಶವನ್ನು ಒಳಗೊಂಡಿರುವ ಕಾರ್ಬೆವ್ಯಾಕ್ಸ್ ಲಸಿಕೆಯ ಮೇಲೆ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಜೂನ್ ತಿಂಗಳಿನಲ್ಲಿ ಘೋಷಿಸಿದಂತೆ ಬಯಾಲಜಿಕಲ್-ಇ ಕಂಪನಿಯು 30 ಕೋಟಿ ಡೋಸ್ ಕಾರ್ಬೆವಾಕ್ಸ್ ಅನ್ನು ಡಿಸೆಂಬರ್ ವೇಳೆಗೆ ಕೇಂದ್ರ ಸರ್ಕಾರಕ್ಕೆ ಪೂರೈಸುತ್ತದೆ. ಸಚಿವಾಲಯವು ಹೈದರಾಬಾದ್ ಮೂಲದ ಲಸಿಕೆ ತಯಾರಕರೊಂದಿಗೆ 30 ಕೋಟಿ ಲಸಿಕೆ ಡೋಸೇಜ್ ಕಾಯ್ದಿರಿಸಲು ವ್ಯವಸ್ಥೆ ಮಾಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತೀಯ ಸರ್ಕಾರವು ಬಯಾಲಜಿಕಲ್-ಇ ಕಂಪನಿಯ ಕೋವಿಡ್ -19 ಲಸಿಕೆ ಪೂರ್ವಭಾವಿ ಹಂತದಿಂದ ಮೂರನೇ ಹಂತದವರೆಗಿನ ಅಧ್ಯಯನದಲ್ಲಿ ಬೆಂಬಲವಾಗಿ ನಿಂತಿದೆ.

ಬಯಾಲಜಿಕಲ್-ಇ ಕಂಪನಿಗೆ ಆರ್ಥಿಕ ನೆರವಿನ ಜೊತೆ ಬೆಂಬಲ

ಬಯಾಲಜಿಕಲ್-ಇ ಕಂಪನಿಗೆ ಆರ್ಥಿಕ ನೆರವಿನ ಜೊತೆ ಬೆಂಬಲ

ಭಾರತದ ಜೈವಿಕ ತಂತ್ರಜ್ಞಾನ ಇಲಾಖೆಯು 100 ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ನೆರವು ನೀಡುವುದರ ಜೊತೆಗೆ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಸಂಶೋಧನಾ ಸಂಸ್ಥೆಯ ಆರೋಗ್ಯ ವಿಜ್ಞಾನ ತಂತ್ರಜ್ಞಾನ ಸಂಸ್ಥೆ (ಟಿಎಚ್‌ಟಿಐ) ಮೂಲಕ ಎಲ್ಲಾ ಪ್ರಾಣಿಗಳ ಮೇಲಿನ ಸವಾಲು ಮತ್ತು ವಿಶ್ಲೇಷಣೆ ಅಧ್ಯಯನಗಳನ್ನು ನಡೆಸಲು ಬಯಾಲಜಿಕಲ್-ಇ ಕಂಪನಿಗೆ ನೆರವು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 229 ದಿನಗಳಾಗಿದೆ. ಬುಧವಾರ ರಾತ್ರಿ 7 ಗಂಟೆ ವೇಳೆಗೆ 69,42,335 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಈವರೆಗೂ 66,17,38,647 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 64,51,07,160 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲಭ್ಯತೆ

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲಭ್ಯತೆ

2021ರ ಸಪ್ಟೆಂಬರ್ 2ರ ಅಂಕಿ-ಅಂಶಗಳ ಪ್ರಕಾರ, 64,51,07,160 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 64,51,07,160

* ಕೊವಿಡ್-19 ಲಸಿಕೆಯ ಲಭ್ಯತೆ - 5,21,37,660

English summary
DCGI gives permission for phase 2/3 trials of Biological E's Covid vaccine on those aged between 5 and 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X