ಡಾನ್ ದಾವೂದ್ ಇಬ್ರಾಹಿಂ ಆರೋಗ್ಯಕ್ಕೆ ಏನೂ ಆಗಿಲ್ವಾ? ದಾವೂದ್ ಆಪ್ತನಿಂದ ಸ್ಫೋಟಕ ಹೇಳಿಕೆ ಬಹಿರಂಗ!
ಡಾನ್ ದಾವೂದ್ ಇಬ್ರಾಹಿಂಗೆ ವಿಷ ಹಾಕಲಾಗಿದೆ, ದಾವೂದ್ ಇದೀಗ ಆಸ್ಪತ್ರೆಯಲ್ಲಿ ಸಾವು & ಬದುಕಿನ ನಡುವೆ ಹೋರಾಡುವ ಸ್ಥಿತಿ ಇದೆ. ಹೀಗೆ, ಬೆಳಗ್ಗೆಯಿಂದ ಹಲವಾರು ವರದಿಗಳು ಓಡಾಡಿವೆ. ಆದರೆ ಈಗ ಸ್ವತಃ ದಾವೂದ್ ಇಬ್ರಾಹಿಂ ಆಪ್ತ ಸ್ಫೋಟಕ ಹೇಳಿಕೆ ನೀಡಿದ್ದು, ದಾವೂದ್ ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಹಾಗಾದ್ರೆ ದಾವೂದ್ ಕುರಿತಾಗಿ ಆಪ್ತ ಹೇಳಿದ್ದೇನು? ದಾವೂದ್ ಇಬ್ರಾಹಿಂ ಆರೋಗ್ಯಕ್ಕೆ ಏನಾಗಿದೆ ಈಗ?
ಹೌದು, ಭಾರತದ ನೆಲ ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿರುವ ದಾವೂದ್‌ಗೆ 'ಅಪರಿಚಿತ' ವ್ಯಕ್ತಿ ವಿಷ ಹಾಕಿದ್ದಾನೆ ಎಂಬ ವದಂತಿ ಎಲ್ಲೆಲ್ಲೂ ಹಬ್ಬಿದ್ದವು. ಈ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮದಲ್ಲೂ ಹರಿದಾಡಿತ್ತು. ಅದರಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ವಿಷಯ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಹಾಗಾದರೆ ದಾವೂದ್ ಇಬ್ರಾಹಿಂ ಆರೋಗ್ಯ ಕುರಿತು ಈಗ ಹೊರಬಿದ್ದಿರುವ ಬ್ರೇಕಿಂಗ್ ನ್ಯೂಸ್ ಏನು? ದಾವೂದ್ ಇಬ್ರಾಹಿಂ ಆಪ್ತನಿಂದ ಸಿಗುತ್ತಿರುವ ಮಾಹಿತಿ ಏನು? ಮುಂದೆ ಓದಿ.

ಛೋಟಾ ಶಕೀಲ್ ಹೇಳಿದ್ದು ಏನು?
ಅಂದಹಾಗೆ ದಾವೂದ್ ಕುರಿತು ಹಬ್ಬಿರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಾವೂದ್ ಇಬ್ರಾಹಿಂ ಆಪ್ತ ಛೋಟಾ ಶಕೀಲ್, 'ದಾವೂದ್‌ಗೆ ವಿಷ ಹಾಕಿದ್ದಾರೆ ಎಂಬ ವರದಿ ಸುಳ್ಳಾಗಿವೆ ಅಲ್ಲದೆ ಆತ ಆರೋಗ್ಯವಾಗಿದ್ದಾನೆ. ಪ್ರತಿ ವರ್ಷ ಕೆಲವರು ಇಂತಹ ಸುದ್ದಿಗಳ ಹಬ್ಬಿಸುತ್ತಾರೆ.' ಎಂದಿದ್ದಾನೆ. ಈ ಮೂಲಕ ದಾವೂದ್ ಇಬ್ರಾಹಿಂ ಆಪ್ತ ಛೋಟಾ ಶಕೀಲ್ ಮಾತುಗಳು ಈಗ ವೈರಲ್ ಆಗುತ್ತಿವೆ. ಬೆಳಗ್ಗೆಯಿಂದಲೂ ಈ ಬಗ್ಗೆ ಸುದ್ದಿಗಳು ಹರಿದಾಡಿ, ದಾವೂದ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಸೃಷ್ಟಿಯಾಗಿತ್ತು.
ಬೆಳಗ್ಗೆ ಓಡಾಡಿದ್ದ ವರದಿ ಏನು?
ಅಷ್ಟಕ್ಕೂ ಕುಖ್ಯಾತ ಭೂಗತ ಪಾತಕಿ, ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರವಾದ ಹಿನ್ನೆಲೆ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿತ್ತು. ಈ ನಡುವೆ ದಾವೂದ್ ಇಬ್ರಾಹಿಂ ಹೊಟ್ಟೆಯಲ್ಲಿ ವಿಷ ಕಂಡು ಬಂದಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಮಾತುಗಳಿಗೆ ಸಾಕ್ಷಿ ಮಾತ್ರ ಸಿಕ್ಕಿರಲಿಲ್ಲ. ಆದರೆ ಇದೀಗ ನೇರವಾಗಿ ದಾವೂದ್ ಸಹಚರ ಈ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದು ಸಂಚಲನ ಸೃಷ್ಟಿಯಾಗಿದೆ.
ಎಲ್ಲೆಲ್ಲೂ ವೈರಲ್ ಆಗಿದ್ದ ಸುದ್ದಿ
2 ದಿನದ ಹಿಂದೆ ದಾವೂದ್‌ಗೆ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇ ದಾವೂದ್ ಇರುವ ಆಸ್ಪತ್ರೆಗೆ ಭಾರಿ ಭದ್ರತೆ ಒದಗಿಸಲಾಗಿದೆ ಅಂತ ಹೇಳಲಾಗುತ್ತಿತ್ತು. ದಾವೂದ್ ಚಿಕಿತ್ಸೆ ಪಡೆಯುತ್ತಿರುವ ಕರಾಚಿ ಆಸ್ಪತ್ರೆ ಫ್ಲೋರ್‌ನಲ್ಲಿ ಬೇರೆ ಯಾವುದೆ ರೋಗಿಗಳನ್ನ ಇರಿಸಿಲ್ಲ. ಎಲ್ಲರನ್ನೂ ಖಾಲಿ ಮಾಡಿಸಿ ಅದೇ ಫ್ಲೋರ್‌ನಲ್ಲಿ ದಾವೂದ್‌ಗೆ ಟ್ರೀಟ್‌ಮೆಂಟ್‌ನ ನೀಡಲಾಗುತ್ತಿದೆ ಎನ್ನಲಾಗಿತ್ತು. ಹೀಗೆ ದಾವೂದ್ ಇಬ್ರಾಹಿಂ ಇರುವ ಆಸ್ಪತ್ರೆಯ ಫ್ಲೋರ್‌ಗೆ, ಆಸ್ಪತ್ರೆ ವೈದ್ಯರು & ಕುಟುಂಬ ವರ್ಗವನ್ನ ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿಲ್ಲ ಎಂದು ವರದಿಗಳು ಪ್ರಕಟ ಆಗಿದ್ದವು. ಆದರೆ ಈಗ ದಾವೂದ್‌ಗೆ ಏನು ಆಗಿಲ್ಲ ಅಂತಾ ಅವರ ಆಪ್ತರು ಹೇಳುತ್ತಿದ್ದಾರೆ.












Click it and Unblock the Notifications