ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನಿಗೇ ತಲಾಕ್ ಹೇಳಿದ ದಿಟ್ಟ ಹೆಣ್ಣು ಮೊಹಸೀನಾ!

By Prasad
|
Google Oneindia Kannada News

ದಹಾ (ಉತ್ತರ ಪ್ರದೇಶ), ಜುಲೈ 26 : ತಲಾಕ್ ತಲಾಕ್ ತಲಾಕ್! ಮೂರೇ ಮೂರು ತಲಾಕಿಗೆ ಮದುವೆ ಸಮಾಪ್ತಿ! ಆದರೆ, ಹೀಗೆ ಹೇಳಿ ಮದುವೆಗೆ ವಿಚ್ಛೇದನ ನೀಡಿದ್ದು ಮುಸ್ಲಿಂ ಗಂಡಲ್ಲ, 19 ವರ್ಷದ ದಿಟ್ಟ ಹೆಣ್ಣು. ಆಕೆಯ ಹೆಸರು ಮೊಹಸೀನಾ!

ಮುಸ್ಲಿಂ ಸಮಾಜದಲ್ಲಿ ಯಾವುದೇ ಹೆಣ್ಣು ಮಾಡದಂಥ ಕೆಲಸವನ್ನು ಈ ಹತ್ತೊಂಬತ್ತು ವರ್ಷದ ದಿಟ್ಟ ಯುವತಿ ಮಾಡಿದ್ದಾಳೆ. ಗಂಡ ವರದಕ್ಷಿಣೆ ಕೇಳಿದ್ದಕ್ಕಾಗಿ ಸುಮಾರು 500 ಅತಿಥಿಗಳೆದಿರು ಆತನಿಂದ ಫೋನ್ ಮೂಲಕ ಕ್ಷಮೆ ಕೇಳಿಸಿದ್ದು ಮಾತ್ರವಲ್ಲ, ತಲಾಕ್ ತಲಾಕ್ ತಲಾಕ್ ಅಂತ ಹೇಳಿ ಮದುವೆಯನ್ನೂ ಮುರಿದುಕೊಂಡಿದ್ದಾಳೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

Daring young muslim lady gives talaq to husband

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾಘ್‌ಪಟ್ ಜಿಲ್ಲೆಯ ದಹಾ ಎಂಬಲ್ಲಿ. ಮುಸ್ಲಿಂ ಸಮುದಾಯದಲ್ಲಿ ಗಂಡ ತನ್ನ ಹೆಂಡತಿಗೆ ಮೂರು ತಲಾಕ್ ಹೇಳಿ ವಿಚ್ಛೇದನ ನೀಡಬಹುದೆ ಹೊರತು ಹೆಂಡತಿಯಲ್ಲ. ಹೀಗಾಗಿ, ಆಕೆ ಹೇಳಿದ ತಲಾಕ್‌ಗೆ ಸಮ್ಮತಿ ಸಿಗಬೇಕಾದರೆ, ಕಾಜಿಯಿಂದ ಆಕೆ 'ಖುಲಾ'ಗೆ ಅನುಮತಿ ಪಡೆಯಬೇಕು.

ಇಂಥ ಧೈರ್ಯ ಯಾವ ಮುಸ್ಲಿಂ ಹೆಣ್ಣುಮಗಳಿಗಿರುತ್ತದೆ ಹೇಳಿ? ಗಂಡು ಮಾತ್ರ ಮೂರು ಬಾರಿ ಫೋನ್ ಮುಖಾಂತರವಾಗಲಿ, ಸಾಮಾಜಿಕ ತಾಣದಲ್ಲಾಗಲಿ ಹೇಳಿ ಕ್ಷಣಾರ್ಧದಲ್ಲಿ ವಿಚ್ಛೇದನ ಪಡೆಯಬಹುದು. ಈ ಅನಿಷ್ಟ, ಅಸಂವಿಧಾನಿಕ ಪದ್ಧತಿಯನ್ನು ಅಳಿಸಿಹಾಕಬೇಕೆಂದು ಮಹಿಳಾ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ.

ಮೊಹಸೀನಾ ತನ್ನ ಗಂಡನಿಗೆ ತಲಾಕ್ ಹೇಳಿದ ನಂತರ ಸುಮ್ಮನಿರದ ಗ್ರಾಮ ಪಂಚಾಯತ್ ಇಬ್ಬರ ನಡುವೆ ಸಂಧಾನ ನಡೆಸಲು ಸಾಕಷ್ಟು ಪ್ರಯತ್ನ ನಡೆಸಿದೆ. ಈ ಪಂಚಾಯತ್ ನಲ್ಲಿ ಹಿಂದೂ ಮತ್ತು ಮುಸ್ಲಿಂ ನಾಯಕರುಗಳಿದ್ದಾರೆ. ಆದರೆ, ಆಕೆ ಇದಾವುದಕ್ಕೂ ಸೊಪ್ಪು ಹಾಕಿಲ್ಲ.

ಸ್ಥಳೀಯ ಖಾಪ್ ಪಂಚಾಯತ್, ಹೆಣ್ಣಿನಿಂದ ವರದಕ್ಷಿಣೆ ಪಡೆಯುವುದು ಅಪರಾಧ ಆದೇಶ ನೀಡಿದೆ. ಆದರೂ ವರದಕ್ಷಿಣೆ ಕೇಳಿದ್ದರಿಂದ, ಮೊಸಹೀನಾಳ ಮಾವ ಮೊಹಮ್ಮದ್ ಸತ್ತಾರ್ ಮೇಲೆ 3 ತಿಂಗಳು ಕಾಲ ಯಾವುದೇ ಮದುವೆಯಲ್ಲಿ ಭಾಗವಹಿಸದಂತೆ ನಿಷೇಧಾಜ್ಞೆ ಹೇರುವ ಸಂಭವನೀಯತೆಯಿದೆ.

English summary
In an incident a daring young lady of 19 years made her husband not only apologize for asking dowry, but also gave divorce to him by uttering talaq thrice. Local khap panchayat in Daha village in Baghpat district has made dowry illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X