ಚಂಡಮಾರುತ 'ಡಾನಾ' ಮಾಡಿದ ಹಾನಿ ಮೌಲ್ಯಮಾಪನ ವರದಿ: ಶೀಘ್ರವೇ ಕೇಂದ್ರಕ್ಕೆ ಸಲ್ಲಿಕೆ!

ಭುವನೇಶ್ವರ, ನವೆಂಬರ್ 02: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಿದ 'ಡಾನಾ' ಚಂಡಮಾರುತವು ಸಾಕಷ್ಟು ಅವಾಂತರ ಮಾಡಿತು. ಪ್ರತಿ ಗಂಟೆಗೆ 110-120 ಕಿಮೀ ವೇಗದಲ್ಲಿ ಬಂದು ತೀರಕ್ಕೆ ಅಪ್ಪಳಿಸಿದ 'ಡಾನಾ'ದಿಂದ ಆದ ನಷ್ಟ, ಹಾನಿಯ ವರದಿಯನ್ನು ಕಲೆ ಹಾಕಲಾಗುತ್ತಿದೆ. ಭಾನುವಾರ ನವೆಂಬರ್ 3ರಂದು ಇಲ್ಲವೇ ಸೋಮವಾರ ಕೆಂದ್ರ ವರದಿ ಸಲ್ಲಿಕೆ ಆಗಲಿದೆ ಎಂದು ಒಡಿಶಾ ಸಚಿವರು ಮಾಹಿತಿ ನೀಡಿದ್ದಾರೆ.

ಒಡಿಶಾ ರಾಜ್ಯ ಸರ್ಕಾರವು 'ಡಾನಾ' ಚಂಡಮಾರುತದಿಂದ ಆದ ಹಾನಿಯ ಮೌಲ್ಯಮಾಪನ ಮಾಡುತ್ತಿದೆ. ನವೆಂಬರ್ 3 ರೊಳಗೆ ಈ ಮೌಲ್ಯಮಾಪನ ಪೂರ್ಣಗೊಳಿಸಲಾಗುವುದು. ನಂತರ ವರದಿಯನ್ನು ಸಂಬಂಧಿಸಿದವರಿಗೆ ಸಲ್ಲಿಸಲಾಗುವುದು ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ.

Dana Cyclone Effects on Odisha Parts Damage Assesment Report Complete Minister Pujari

'ಡಾನಾ' ಚಂಡಮಾರುತದ ಅಬ್ಬರಕ್ಕೆ ಒಡಿಶಾ ರಾಜ್ಯದ ಬಲಾಸೋರ್, ಭದ್ರಕ್ ಮತ್ತು ಕೇಂದ್ರಪಾರ ಮೂರು ಜಿಲ್ಲೆಗಳ ಮೇಲೆ ತೀವ್ರ ಹಾನಿ ಉಂಟು ಮಾಡಿದೆ. ಚಂಡಮಾರುತದಿಂದ ಸುರಿದ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹವು ಬಾಲಸೋರ್ ಜನಜೀವನವನ್ನು ಕಷ್ಟಕ್ಕೆ ನೂಕಿತು. ಮಾಹಿತಿ ಕಲೆ ಹಾಕಿದ್ದರ ಪ್ರಕಾರ, ಚಂಡಮಾರುತಕ್ಕಿಂತ ಅತೀ ವೃಷ್ಟಿಯಿಂದ ಆದ ಹಾನಿ ಹೆಚ್ಚು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ವರದಿ ಸಲ್ಲಿಕೆ ಬಳಿಕ, ಅನುದಾನ ಪ್ರಕ್ರಿಯೆ

ಕೆಲವು ಜಿಲ್ಲೆಗಳಲ್ಲಿ ಈ ಡಾನಾ ಚಂಡಮಾರುತ ಅತ್ಯಂತ ಕೆಟ್ಟ ಪ್ರಭಾವ ಬೀರಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯ ಸರ್ಕಾರವು ಪ್ರಸ್ತುತ ಪೀಡಿತ ಜಿಲ್ಲೆಗಳಿಂದ ವರದಿಗಳನ್ನು ಸಂಗ್ರಹಿಸುತ್ತಿದೆ. ಇನ್ನೊಂದು ದಿನಗದಲ್ಲಿ ಮೌಲ್ಯಪಾಮನ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದೇವೆ. ನಂತರ ಆ ವರದಿಯನ್ನು ಪರಿಹಾರ ಪಡೆಯುವ ದೃಷ್ಟಿಯಿಂದ ಹಾಗೂ ಹಾನಿಯ ಪ್ರದೇಶಗಳ ಪುನಶ್ಚೇತನ ಸಲುವಾಗಿ ಕೇಂದ್ರಕ್ಕೆ ಸಲ್ಲಿಸಲಿದ್ದೇವೆ ಎಂದುರು.

ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಆದ ತಕ್ಷಣವೇ ಕೇಂದ್ರದ ಅಧಿಕಾರಿಗಳು ಮುಖ್ಯಸ್ಥರ ತಂಡವು ಒಡಿಶಾದ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಇದೆಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಕೇಂದ್ರ ಸರ್ಕಾರದ ಪ್ರವಾಹ ಮತ್ತು ಹಾನಿಯದ ಪ್ರದೇಶಗಳ ಜನರಿಗಾಗಿ ಅನುದಾನದ ಬಿಡುಗಡೆ ಮಾಡಲಿದೆ. ಮೌಲ್ಯಮಾಪನ ಪೂರ್ಣಗೊಳಿಸಿದ ತಕ್ಷಣ ಪರಿಹಾರ ವಿತರಣೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಜನರಿಗೆ ಪ್ರವಾಹ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆ ಆಗಿದೆ ಎಂದರು.

ಬಾಲಸೋರ್, ಭದ್ರಕ್ ಮತ್ತು ಕೇಂದ್ರಪಾರಾ ಸೇರಿದಂತೆ ಅನೇಕ ಪ್ರದೇಶಗಳು, ಕರಾವಳಿಗೆ ಹೊಂದಿಕೊಂಡ ಭಾಗಗಳಲ್ಲಿ ಸಾಕಷ್ಟು ಹಾನಿ ಆಗಿದೆ. ಈ ಕುರಿತು ಪರಿಹಾರಕ್ಕೆ ಸಂತ್ರಸ್ತರು ಮನವಿ ಮಾಡಿದ್ದರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+