ಉತ್ತರಾಖಂಡ: ಮೇಲ್ಜಾತಿಯವರು ತಯಾರಿಸಿದ ಊಟ ನಿರಾಕರಿಸಿದ ಮಕ್ಕಳು

ಚಂಪಾವತ್, ಡಿಸೆಂಬರ್ 27: ಉತ್ತರಾಖಂಡದ ಶಾಲೆಯೊಂದರಲ್ಲಿ ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯ ಅಡುಗೆಯವರು ತಯಾರಿಸಿದ ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದ್ದಾರೆ. 6 ರಿಂದ 8 ನೇ ತರಗತಿಯ 66 ವಿದ್ಯಾರ್ಥಿಗಳ ಪೈಕಿ 23 ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯವರು ಮಾಡಿದ ಅಡುಗೆಯನ್ನು ತಿನ್ನಲು ನಿರಾಕರಿಸಿದ್ದಾರೆ. 6 ರಿಂದ 8 ನೇ ತರಗತಿಯ 66 ವಿದ್ಯಾರ್ಥಿಗಳ ಪೈಕಿ 53ವಿದ್ಯಾರ್ಥಿಗಳು ತರಗತಿಗೆ ಹಾಜರಿದ್ದರು. ಇವರಲ್ಲಿ 23 ದಲಿತ ವಿದ್ಯಾರ್ಥಿಗಳು ಮೇಲ್ವರ್ಗದವರು ಬೇಯಿಸಿದ ಮಧ್ಯಾಹ್ನದ ಊಟವನ್ನು ಸೇವಿಸಲು ನಿರಾಕರಿಸಿದ್ದಾರೆ. ದಲಿತರು ತಯಾರಿಸಿದ ಆಹಾರವನ್ನು ಮೇಲ್ಜಾತಿ ವಿದ್ಯಾರ್ಥಿಗಳು ಬಹಿಷ್ಕರಿಸಿದರೆ, ತಾವು ಮೇಲ್ಜಾತಿ ಮಹಿಳೆ ಬೇಯಿಸಿದ ಊಟವನ್ನು ಬಹಿಷ್ಕರಿಸುವುದಾಗಿ ಹೇಳಿಕೊಂಡಿದ್ದಾರೆ ಎಂದು ಚಂಪಾವತ್ ಜಿಲ್ಲೆಯ ಸುಖಿಧಾಂಗ್‌ನ ಸರ್ಕಾರಿ ಇಂಟರ್ ಕಾಲೇಜಿನ ಪ್ರಾಂಶುಪಾಲ ಪ್ರೇಮ್ ಸಿಂಗ್ ಅವರು ಹೇಳಿದ್ದಾರೆ.

ಅಡುಗೆ ಮಾಡಲು ದಲಿತ ಮಹಿಳೆ ನೇಮಕ

ಅಡುಗೆ ಮಾಡಲು ದಲಿತ ಮಹಿಳೆ ನೇಮಕ

ಕಳೆದ ವಾರ ಡಿಸೆಂಬರ್ 13 ರಂದು ನೇಮಕಗೊಂಡ ದಲಿತ ಮಹಿಳೆ ಸುನಿತಾ ದೇವಿ ಅಡುಗೆ ಮಾಡಿದ ಆಹಾರವನ್ನು ಮೇಲ್ಜಾತಿ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದಾಗ ಶಾಲೆಯಲ್ಲಿ ಗಲಾಟೆ ನಡೆದಿತ್ತು. ಹೀಗಾಗಿ ಸುನಿತಾ ದೇವಿ ಅವರ ನೇಮಕಾತಿಯಲ್ಲಿ ಕಾರ್ಯವಿಧಾನದ ಲೋಪಗಳನ್ನು ಉಲ್ಲೇಖಿಸಿ ರಾಜ್ಯದ ಶಿಕ್ಷಣ ಇಲಾಖೆ ಅವರನ್ನು ಡಿಸೆಂಬರ್ 21 ರಂದು ಅವರ ಹುದ್ದೆಯಿಂದ ತೆಗೆದುಹಾಕಿದೆ. "ನಾವು ಭೋಜನ್ಮಾತಾ (ಅಡುಗೆ ಮಾಡುವ) ಹುದ್ದೆಗೆ 11 ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಡಿಸೆಂಬರ್ 5 ರಂದು ನಡೆದ ಸಭೆಯಲ್ಲಿ ಆಕೆಯನ್ನು (ದೇವಿ) ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಸಿಂಗ್ ಹೇಳಿದ್ದಾರೆ. ಆದರೆ ಆಕೆ ಮಾಡಿದ ಮಧ್ಯಾಹ್ನದ ಊಟವನ್ನು ಬಹಿಷ್ಕರಿಸುವ ಮಕ್ಕಳು ನಿರಾಕರಿಸಿದಾ ನಮ್ಮ ಹಿರಿಯ ಅಧಿಕಾರಿಗಳು ಈ ವಿಷಯದ ಬಗ್ಗೆ ವಿಚಾರಣೆ ನಡೆಸಿದರು. ಡಿಸೆಂಬರ್ 21 ರಂದು ಅವರ ನೇಮಕಾತಿಯನ್ನು ರದ್ದುಗೊಳಿಸಿದರು. ಜೊತೆಗೆ ಅವರಿಗೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಹೇಳಿದರು.

ದಾಖಲಾಗದ ಪ್ರಕರಣ

ದಾಖಲಾಗದ ಪ್ರಕರಣ

ದೇವಿ ಮತ್ತು ಅವರ ಪತಿ ಪ್ರೇಮ್ ರಾಮ್ ಇಬ್ಬರೂ ಕೃಷಿ ಕೈ ಕೆಲಸ ಮಾಡುತ್ತಾರೆ. ತನ್ನನ್ನು ವಜಾಗೊಳಿಸಿದ ನಂತರ ದೇವಿ ಚಂಪಾವತ್‌ನ ತನಕ್‌ಪುರದ ಸ್ಥಳೀಯ ಆಡಳಿತ ಮತ್ತು ಛಲ್ತಿಯಲ್ಲಿನ ಪೊಲೀಸ್ ಔಟ್‌ಪೋಸ್ಟ್‌ಗೆ ಜಾತಿ ತಾರತಮ್ಯದ ಬಗ್ಗೆ ದೂರು ನೀಡಿದರು. ಆದರೂ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ನಂತರ ದೇವಿಯ ಸ್ಥಾನಕ್ಕೆ ಮೇಲ್ಜಾತಿಯ ಮಹಿಳೆ ವಿಮಿಲೇಶ್ ಉಪ್ರೇತಿ (37) ಅವರನ್ನು ನೇಮಿಸಲಾಯಿತು.

ಅಡುಗೆ ಮಾಡಲು ಮೇಲ್ಜಾತಿ ಮಹಿಳೆ

ಅಡುಗೆ ಮಾಡಲು ಮೇಲ್ಜಾತಿ ಮಹಿಳೆ

ಸುನಿತಾ ಅವರನ್ನು ತೆಗೆದು ಹಾಕಿದ ನಂತರ ಅವರ ಬದಲಿಗೆ ಮೇಲ್ಜಾತಿಯ ಮಹಿಳೆಯನ್ನು ನೇಮಕಗೊಳಿಸಲಾಗಿತು. ನಂತರ ಅವರು ಮಧ್ಯಾಹ್ನದ ಅಡುಗೆಯನ್ನು ತಯಾರಿಸಿದ್ದಾರೆ. ಆದರೆ "ನಾನು ಶುಕ್ರವಾರ ಮಧ್ಯಾಹ್ನದ ಊಟ ಮಾಡುವಂತೆ ದಲಿತ ಮಕ್ಕಳಿಗೆ ಮನವೊಲಿಸಲು ಪ್ರಯತ್ನಿಸಿದೆ, ಆದರೆ ಅವರು ನಿರಾಕರಿಸಿದರು" ಎಂದು ಉಪಪ್ರೇತಿ ಶನಿವಾರ ಹೇಳಿದರು.

ಊಟ ನಿರಾಕರಿಸಿದ ಮಕ್ಕಳು

ಊಟ ನಿರಾಕರಿಸಿದ ಮಕ್ಕಳು

ಆದರೆ ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯವರಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ದೇವಿ ಹೇಳಿದ್ದಾರೆ. "ದಲಿತ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ಮೇಲ್ಜಾತಿಯ ವಿದ್ಯಾರ್ಥಿಗಳು ತಿನ್ನದಿದ್ದರೆ, ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯ ಮಹಿಳೆ ಬೇಯಿಸಿದ ಊಟವನ್ನು ಹೇಗೆ ತಿನ್ನುತ್ತಾರೆ?" ಎಂದು ಅವರು ಪ್ರಶ್ನಿಸಿದರು.

ದಲಿತ ಮಹಿಳೆ ಮೇಲೆ ಆರೋಪ

ದಲಿತ ಮಹಿಳೆ ಮೇಲೆ ಆರೋಪ

ಇದೇ ವೇಳೆ ದೇವಿ ಎಂಬ ಹೊಸ ಅಡುಗೆಯವರು ತಯಾರಿಸಿದ ಆಹಾರವನ್ನು ತಿನ್ನುವಂತೆ ಮಕ್ಕಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಪೋಷಕ ಶಿಕ್ಷಕರ ಸಂಘ ಆರೋಪಿಸಿದೆ. "ಇದು ತಾರತಮ್ಯದ ಪ್ರಕರಣವಲ್ಲ ಆದರೆ ಸುನೀತಾ ದೇವಿ ನೇಮಕದಲ್ಲಿ ದೋಷಪೂರಿತ ಪ್ರಕ್ರಿಯೆಯ ವಿಷಯವಾಗಿದೆ. ಈಗ ಮಕ್ಕಳನ್ನು ಪ್ರಚೋದಿಸುತ್ತಿದ್ದಾಳೆ' ಎಂದು ಪೋಷಕ ಶಿಕ್ಷಕರ ಸಂಘದ ಅಧ್ಯಕ್ಷ ನರೇಂದ್ರ ಜೋಶಿ ಹೇಳಿದರು.

ಘೇರಾವ್ ಹಾಕುವ ಎಚ್ಚರಿಕೆ

ಘೇರಾವ್ ಹಾಕುವ ಎಚ್ಚರಿಕೆ

ದಲಿತ ಅಡುಗೆಯವರನ್ನು ವಜಾ ಮಾಡುವ ಮೂಲಕ ರಾಜ್ಯ ಸರ್ಕಾರ ದಲಿತರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಟ್ವೀಟ್ ಮಾಡಿದ್ದಾರೆ. "ದಲಿತ ಮಹಿಳೆಯನ್ನು ಮರುಸ್ಥಾಪಿಸದಿದ್ದರೆ, ಭೀಮ್ ಆರ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಘೇರಾವ್ ಮಾಡಲಿದೆ" ಎಂದು ಆಜಾದ್ ಎಚ್ಚರಿಕೆ ಕೊಟ್ಟಿದ್ದಾರೆ.

ಶಿಕ್ಷಣಾಧಿಕಾರಿಯಿಂದ ಸಮಸ್ಯೆ ಬಗೆಹರಿಸುವ ಭರವಸೆ

ಶಿಕ್ಷಣಾಧಿಕಾರಿಯಿಂದ ಸಮಸ್ಯೆ ಬಗೆಹರಿಸುವ ಭರವಸೆ

"ನಾವು ವಿಚಾರಣೆಯ ವರದಿಗಾಗಿ ಕಾಯುತ್ತಿದ್ದೇವೆ ಮತ್ತು ಅದರ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಚಂಪಾವತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್‌ಸಿ ಪುರೋಹಿತ್ ಹೇಳಿದರು. "ದಲಿತ ವಿದ್ಯಾರ್ಥಿಗಳ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ, ನಾವು ಮತ್ತೊಮ್ಮೆ ಶಾಲೆಗೆ ಹೋಗುತ್ತೇವೆ ಮತ್ತು ಉದ್ದೇಶಪೂರ್ವಕ ತಾರತಮ್ಯದ ವಿಷಯವನ್ನು ಬಗೆಹರಿಸುತ್ತೇವೆ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+