ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ, ನಿಮ್ಮ ನಿರ್ಧಾರ ಅಚಲವಾಗಿರಲಿ
ಲೋಕಸಭೆ ಚುನಾವಣೆಗೂ ಮುನ್ನ ಡೇಲಿಹಂಟ್-ಒನ್ಇಂಡಿಯಾ ಜಂಟಿಯಾಗಿ ನಡೆಸುತ್ತಿರುವ ದೇಶದ ಅತೀದೊಡ್ಡ ರಾಜಕೀಯ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಅವರನ್ನು ಮಾತ್ರ ದೇಶ ಮುನ್ನಡೆಸುವ ಪ್ರಮುಖ ಅಭ್ಯರ್ಥಿಗಳನ್ನಾಗಿ ಪರಿಗಣಿಸಿಲ್ಲ.
ಇವರಿಬ್ಬರ ಜೊತೆ, ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ಸಿಗೆ ಭಾರೀ ಶಾಕ್ ಕೊಟ್ಟಿರುವ ಮಾಯಾವತಿ, ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಮತಾ ಬ್ಯಾನರ್ಜಿ, ಭ್ರಷ್ಟಾಚಾರದ ವಿರುದ್ಧ ತಮ್ಮದೇ ರೀತಿ ಹೋರಾಟ ನಡೆಸಿರುವ ಅರವಿಂದ್ ಕೇಜ್ರಿವಾಲ್, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಯತ್ನಿಸುತ್ತಿರುವ ಅಖಿಲೇಶ್ ಯಾದವ್ ಮತ್ತು ಹಳೆಯ ಹುಲಿ ಶರದ್ ಪವಾರ್.

ತಕ್ಕಡಿಯಲ್ಲಿ ತೂಗಿದಾಗ ಒಬ್ಬರಿಗಿಂತ ಮತ್ತೊಬ್ಬರು ಒಂದೊಂದು ರೀತಿಯಲ್ಲಿ ತೂಗುತ್ತಾರೆ, ಇಡೀ ದೇಶದಲ್ಲಿ ತಮ್ಮದೇ ವಿಶಿಷ್ಟವಾದ ವರ್ಚಸ್ಸು, ಪ್ರಭಾವ, ಜನಪ್ರಿಯತೆ ಹೊಂದಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆ ಬಂದಾಗ, ಇವರಲ್ಲಿ ಯಾವ ನಾಯಕನ ಮೇಲೆ ನೀವು ಭಾರ ಹಾಕಲು ಇಚ್ಛಿಸುತ್ತೀರಿ? ಆಯ್ಕೆ ಸಂಪೂರ್ಣವಾಗಿ ನಿಮ್ಮದು.
ಅಕ್ಟೋಬರ್ 19ರವರೆಗೆ ಮಾತ್ರ ನಡೆಯಲಿರುವ ಈ ಬೃಹತ್ ರಾಜಕೀಯ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮಾತ್ರ ಮರೆಯಬೇಡಿ. ನಿಮ್ಮ ಒಂದೊಂದು ಮತವೂ ಭಾರತದ ಭವಿತವ್ಯವನ್ನು ನಿರ್ಧರಿಸುತ್ತದೆ. ಈಗಾಗಲೆ, ಮೂವತ್ತೆರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಮತ ಚಲಾಯಿಸಿದ್ದಾರೆ. ಫಲಿತಾಂಶಕ್ಕೆ ಕಾಯುತ್ತಿರಿ.












Click it and Unblock the Notifications