Man VS Wild Exclusive: ಡೇಲಿಹಂಟ್ App ನಲ್ಲೂ ಲಭ್ಯ!
ಪ್ರಧಾನಿ ನರೇಂದ್ರ ಮೊದಿ ಅವರ ರಾಜಕೀಯದಾಚೆಯ ಬದುಕಿನ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಪ್ರಖ್ಯಾತ ವನ್ಯಪ್ರೇಮಿ, ಸಾಹಸಿ, ಬರಹಗಾರ ಬೇರ್ ಗ್ರಿಲ್ಸ್ ತಮ್ಮ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯಲ್ಲಿ ಮಾಡಿದ್ದು, ಅದು ಆಗಸ್ಟ್ 12 ರಂದು ಪ್ರಸಾರವಾಗಲಿದೆ. ಈ ಎಪಿಸೋಡ್ ಅನ್ನು ಮುಂಚೂಟಿ ನ್ಯೂಸ್ app ಡೇಲಿ ಹಂಟ್ ಸಹ ಪ್ರಸಾರ ಮಾಡಲಿದ್ದು, ತಮ್ಮ ಡೇಲಿ ಹಂಟ್ app ಮೂಲಕ ಯಾರಾದರೂ ಈ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.
ಉತ್ತರಾಖಂಡದ ಪ್ರಖ್ಯಾತ ಜಿಮ್ ಕಾರ್ಬೆಟ್ ನ್ಯಾಶ್ನಲ್ ಪಾರ್ಕ್ ನಲ್ಲಿ ಈ ಟಿವಿ ಶೋ ಚಿತ್ರೀಕರಿಸಲಾಗಿದ್ದು, ಪ್ರಕೃತಿಯ ಜೊತೆಗಿನ ತಮ್ಮ ಪಯಣದ ಕುರಿತು ಪ್ರಧಾನಿ ಮೋದಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಎಪಿಸೋಡ್ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಈ ಸಂದರ್ಶನದ ಕುರಿತ ಕೆಲವು ತುಣುಕುಗಳನ್ನು ಈಗಾಗಲೇ ಡಿಸ್ಕವರಿ ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಕೃತಿ ಬಗೆಗಿನ ತಮ್ಮ ಕಾಳಜಿ ಮತ್ತು ಅದರ ಸಂರಕ್ಷಣೆಯ ಅಗತ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೊದಿ ಮುಕ್ತವಾಗಿ ಮಾತನಾಡಿದ್ದಾರೆ.

ಬೇರ್ ಗ್ರಿಲ್ಸ್ ಖ್ಯಾತ ಬ್ರಿಟಿಶ್ ಟಿವಿ ಶೋ ಮ್ಯಾನ್ ವರ್ಸ್ ವೈಲ್ಡ್ ಅನ್ನು ಹಲವು ವರ್ಷಗಳಿಂ ನಡೆಸಿಕೊಡುತ್ತಿದ್ದು, ಇದು ಜಗದ್ವಿಖ್ಯಾತಿ ಗಳಿಸಿದೆ.












Click it and Unblock the Notifications