Sabarimala: ಶಬರಿಮಲೆಯಕ್ಕೆ ನಿತ್ಯ ಲಕ್ಷಾಂತರ ಭಕ್ತರ ಭೇಟಿ, ನೂಕುನುಗ್ಗಲು: ದರ್ಶನ ಸಮಯ ವಿಸ್ತರಣೆ!
ಶಬರಿಮಲೆಯ ಭಕ್ತರಿಗೆ ಒಂದು ಸಿಹಿ ಸುದ್ದಿ. ಏನೆಂದರೆ ಶಬರಿಮಲೆಯಗೆ ಹಿಂದೆಂದೂ ಕಾಣದ ರೀತಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ. ಶಬರಿಮಲೆಯ ಭಕ್ತರಿಗೆ ಇರುವ ವ್ಯವಸ್ಥೆಗಳ ಮೇಲೆ ಕೇರಳ ಹೈಕೋರ್ಟ್ ಕೂಡ ನಿಗಾ ಇರಿಸಿದೆ.
ಕೇರಳ ಶಬರಿಮಲೆ ಅಯ್ಯಪ್ಪನ ದೇವಾಲಯ, ಮಂಡಲ ಪೂಜೆ ಮತ್ತು ಮಕರ ದೀಪ ಪೂಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಈ ಸಮಯದಲ್ಲಿ ಭಕ್ತರನ್ನು ಬೊಂಬಾಯಿ ನದಿಯ ದಡದಿಂದ ಸರತಿ ಸಾಲಿನಲ್ಲಿ ನಿಲ್ಲಿಸಿ ನಂತರ ಹಂತಹಂತವಾಗಿ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಈ ವಿಧಾನವನ್ನು ಅನುಸರಿಸುವುದಿಲ್ಲ. ಆದರೀಗ ಅಪ್ಪಾಚಿ ಮೇಡು ಮತ್ತು ಸರಂಗುತಿ ದಾಟಿ ಸನ್ನಿಧಾನಕ್ಕೆ ಬರುವಾಗ ಭಕ್ತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ವಿಭಾಗಗಳಲ್ಲಿ ದರ್ಶನಕ್ಕೆ ಕಳುಹಿಸಲಾಗುತ್ತದೆ.

ಅಯ್ಯಪ್ಪನ ದರ್ಶನ್ಕಕಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಈ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಕೇರಳ ಹೈಕೋರ್ಟ್ ಈಗಾಗಲೇ ವಿವಿಧ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಾಗಿ ಭಕ್ತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ದರ್ಶನಕ್ಕೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಭಕ್ತರು 14 ಗಂಟೆಯಿಂದ 16 ಗಂಟೆಗಳವರೆಗೆ ದರ್ಶನಕ್ಕಾಗಿ ಕಾಯಬೇಕಾದ ಅನಿವಾರ್ಯತೆಯೂ ಇದೆ.
ನಿನ್ನೆ ಶಬರಿಮಲೆಯಲ್ಲಿ ದಟ್ಟಣೆ ಏಕಾಏಕಿ ಹೆಚ್ಚಾಗಿದ್ದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ವೃದ್ಧರು ಮತ್ತು ಮಕ್ಕಳಿಗೆ ಪ್ರತ್ಯೇಕ ಸರತಿ ಸಾಲು ರಚಿಸಲಾಗಿತ್ತು. ಆದರೆ ಈ ಸಾಲುಗಳನ್ನೂ ಭಕ್ತರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ದೇವಸಂ ಮಂಡಳಿ ಆಡಳಿತ ಎಚ್ಚೆತ್ತುಕೊಂಡಿದೆ.
ಅಯ್ಯಪ್ಪ ದರ್ಶನ ಸಮಯ ವಿಸ್ತರಣೆ
ಹೀಗಾಗಿ ಇದೀಗ ಭಕ್ತರ ದರ್ಶನದ ಸಮಯವನ್ನು ವಿಸ್ತರಿಸಿದ್ದಾರೆ. ಇದರಿಂದಾಗಿ ರಾತ್ರಿ 11 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಬಹುದು. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಭಕ್ತರ ದಂಡು ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೂ ಸಮಯವನ್ನು ಹೆಚ್ಚಿಸಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಿಂದೆಂದೂ ಕಾಣದ ರೀತಿಯಲ್ಲಿ ಶಬರಿಮಲೆಯ ದೇವಸ್ಥಾನ ಭಕ್ತರಿಂದ ತುಂಬಿ ಹೋಗಿದೆ. ಇದರಿಂದ ನಾವು ಅರ್ಧಕ್ಕೆ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮುಡಿ ಕಟ್ಟಿಕೊಂಡಿದ್ದ ಭಕ್ತರು ನೋವು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿ ಮಕ್ಕಳು ಮತ್ತು ವೃದ್ಧರೊಂದಿಗೆ ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರು ಅತ್ಯಂತ ಜಾಗರೂಕತೆಯಿಂದ ಪ್ರಯಾಣಿಸಲು ಮತ್ತು ದರ್ಶನದ ಸಮಯದಲ್ಲಿ ಸುರಕ್ಷಿತವಾಗಿರಲು ಸೂಚಿಸಿದೆ. ಹೀಗಾಗಿ ಭದ್ರತಾ ವ್ಯವಸ್ಥೆಗಳ ವಿವರಗಳನ್ನು ಮತ್ತು ಅವರಿಗೆ ಮಾರ್ಗದರ್ಶನ ನೀಡುವಂತೆ ಕೇರಳ ರಾಜ್ಯ ಹೈಕೋರ್ಟ್ ದೇವಸಂ ಮಂಡಳಿಯ ಆಡಳಿತಕ್ಕೆ ಸೂಚಿಸಿದೆ.
ಶಬರಿಮಲೆ ಪಾದಯಾತ್ರೆ ವೇಳೆ ಕುಸಿದು ಬಿದ್ದು 12 ವರ್ಷದ ಬಾಲಕಿ ಸಾವು!
ಶಬರಿಮಲೆಯ ಅಯ್ಯಪ್ಪ ದೇಗುಲದ ದರ್ಶನಕ್ಕೆ ಬಂದಿದ್ದ 12 ವರ್ಷದ ಬಾಲಕಿ ಪಾದಯಾತ್ರೆ ವೇಳೆ ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ನಡೆದಿದೆ. ತಮಿಳುನಾಡು ಮೂಲದ ಪದ್ಮಶ್ರೀ ಮೃತ ಬಾಲಕಿ. ಈ ಬಾಲಕಿಯು ಬೆಟ್ಟದ ಮೇಲಿನ ದೇಗುಲಕ್ಕೆ ಪಾದಯಾತ್ರೆ ಮಾಡುತ್ತಿರುವಾಗ ಅಪ್ಪಾಚಿಮೇಡು ಎಂಬಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಕೆಗೆ ಉಸಿರಾಟ ಇನ್ನಿತರ ಆರೋಗ್ಯ ಸಮಸ್ಯೆಗಳು ಇತ್ತು ಎನ್ನುವ ಮಾಹಿತಿ ನಂತರ ತಿಳಿದು ಬಂದಿದೆ. ಮಾತ್ರವಲ್ಲದೆ ಮೂರು ವರ್ಷದಿಂದ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ.












Click it and Unblock the Notifications