7th Pay Commission: ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ, ಡಿಎ ಹೆಚ್ಚಳದ ಕಾಯುವಿಕೆ ಅಂತ್ಯ?
ನವದೆಹಲಿ, ಮಾರ್ಚ್ 19: ಹಣದುಬ್ಬರ ನೀಗಿಸಲು ಸಹಾಯವಾಗುವ ಉದ್ದೇಶದಿಂದ ಸರ್ಕಾರ ಪ್ರತಿ ವರ್ಷ ಎರಡು ಬಾರಿ ನೀಡುತ್ತಾ ಬರುತ್ತಿರುವ ತುಟ್ಟಿಭತ್ಯೆಯನ್ನು ಕಳೆದ ಹೋಳಿ ಹಬ್ಬಕ್ಕೆ ಪರಿಷ್ಕರಣೆ ಮಾಡಲಿಲ್ಲ. ಇದರಿಂದ ಕೇಂದ್ರ ಸರ್ಕಾರಿ ನೌಕರರಿ ನಿರಾಸೆಯಾಗಿದ್ದು, ಅವರೆಲ್ಲ ಡಿಎ ಪರಿಷ್ಕರಣಾ ಆದೇಶಕ್ಕೆ ಕಾಯುತ್ತಿದ್ದಾರೆ. ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.
7ನೇ ವೇತನ ಆಯೋಗದಡಿ ಒಂದು ಕೋಟಿಗೂ ಹೆಚ್ಚು ನೌಕರರಿಗೆ ಈ ವರ್ಷದ ಜನವರಿಯ ತುಟ್ಟಿಭತ್ಯೆ ಏರಿಕೆ ಮಾಡಬೇಕಿದೆ. ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶಿಸಬೇಕು. ಹೋಳಿ ಹಬ್ಬಕ್ಕೆ ಆದೇಶವಾಗದೇ ತಡವಾಗಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದೆ ಘೋಷಣೆ ಆಗುವ ಸಾಧ್ಯತೆ ಇದೆ. ಒಂದು ವೇಳೆ ಇವತ್ತು ಆಗದಿದ್ದರೆ, ಇದೇ ವಾರಾಂತ್ಯದೊಳಗೆ ನೌಕರರಿಗೆ ಕಾಯುವಿಕೆ ಅಂತ್ಯಗೊಳ್ಳಲಿದ್ದು, ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.

DA ಮತ್ತು DR ಹೆಚ್ಚಳ ಎಂದರೇನು?
ಕೇಂದ್ರ ಸರ್ಕಾರಿ ನೌಕರರು ಹಾಗೂ ಕೆಲಸ ಮಾಡಿ ನಿವೃತ್ತಿ ಆದ ನೌಕರರಿಗೆ ನೀಡುವ ಭತ್ಯೆ ಸೌಲಭ್ಯಗಳ ಪೈಕಿ ತುಟ್ಟಿಭತ್ಯೆ (DA) ತುಟ್ಟಿ ಪರಿಹಾರ (DR) ಹೆಚ್ಚಳ ಮಾಡಿ ಆರ್ಥಿಕ ಸೌಲಭ್ಯ ಒದಗಿಸಲಾಗುತ್ತದೆ. ತುಟ್ಟಿಭತ್ಯೆಯನ್ನು ನೌಕರರಿಗೆ ಹಾಗೂ ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತಿದೆ. ಇದು ಕಾಲ ಕಾಲಕ್ಕೆ ಎದುರಾಗುವ ಹಣದುಬ್ಬರ, ಬೆಲೆ ಏರಿಕೆಯ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿಸುತ್ತದೆ.
ಈ ಕಾರಣದಿಂದಲೇ ಕೇಂದ್ರ ಸರ್ಕಾರಿ ಪ್ರತಿ ವರ್ಷ ಎರಡು ಬಾರಿ ಜನವರಿ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿಸಿ ಆದೇಶಿಸುತ್ತದೆ. ಜನವರಿ ತಿಂಗಳ ಡಿಎ ಹೆಚ್ಚಳ ಹೋಳಿ ಹಬ್ಬಕ್ಕೆ ಮಾರ್ಚ್ ಮಧ್ಯದಲ್ಲಿ ಘೋಷಣೆ ಆದರೆ, ಜುಲೈ ತಿಂಗಳ ಭತ್ಯೆ ಹೆಚ್ಚಳವು ಅಕ್ಟೋಬರ್ ಅಂತ್ಯಕ್ಕೆ ಘೋಷಣೆ ಆಗುತ್ತದೆ.
ಈ ಬಾರಿ ತುಟ್ಟಿಭತ್ಯೆ ಎಷ್ಟು ಹೆಚ್ಚಾಗಲಿದೆ?
ದೇಶದಲ್ಲಿ ಕಳೆದ ಕೆಲವು ವರ್ಷಗಳ ಪೈಕಿ 2018 ರಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಡಿಎ ಹೆಚ್ಚಾಗಿದೆ. ಒಬ್ಬ ಉದ್ಯೋಗಿಯ ಮೂಲ ವೇತನ 18,000 ರೂ. ಇದ್ದರೆ, ತುಟ್ಟಿಭತ್ಯೆ ಶೇಕಡಾ 2 ರಷ್ಟು ಹೆಚ್ಚಾದರೆ, ಅವನಿಗೆ 360 ರೂ.ಹಣ ವೇತನಕ್ಕೆ ಸೇರ್ಪಡೆಯಾಗುತ್ತದೆ. ಕಳೆದ ಬಾರಿ ಡಿಎ ಶೇಕಡಾ 3ರಷ್ಟು ಹೆಚ್ಚಾಗಿದೆ. ಸದ್ಯ ತುಟ್ಟಿಭತ್ಯೆ ಪ್ರಮಾಣ 53 ರಷ್ಟಿದೆ. ಈ ಬಾರಿ ಶೆಕಡಾ 3ರಷ್ಟು ತುಟ್ಟಿಭತ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಡಿಎ ಪ್ರಮಾಣ 56ಕ್ಕೆ ತಲುಪುವ ಸಾಧ್ಯತೆ ಇದೆ.

ಕೆಲವರು ಈ ಬಾರಿ ತುಟ್ಟಿಭತ್ಯೆ ಶೇಕಡಾ 3ರಿಂದ 4 ರಷ್ಟು ಹೆಚ್ಚಳವಾಗಬಹುದೆಂದು ಅಂದಾಜಿಸಿದ್ದಾರೆ. ಪಿಂಚಣಿದಾರರು ತಮ್ಮ ಆರ್ಥಿಕ ಸುಧಾರಣೆಯ ಘೋಷಣೆಗಾಗಿ ಕಾಯುತ್ತಿದ್ದಾರೆ. ಇಂದು ಇಲ್ಲವೇ ಮಾರ್ಚ್ ಅಂತ್ಯದೊಳಗೆ ತುಟ್ಟಿಭತ್ಯ ಪರಿಷ್ಕರಣೆ ಆದೇಶ ಹೊರ ಬೀಳಲಿದೆ.
8ನೇ ವೇತನ ಆಯೋಗ ಜಾರಿ ಯಾವಾಗ?
ಹಾಲಿ ಏಳನೇ ವೇತನ ಆಯೋಗವು ಇದೇ ವರ್ಷ 2025ರ ಡಿಸೆಂಬರ್‌ಗೆ ಅಂತ್ಯಗೊಳ್ಳುತ್ತದೆ. 8ನೇ ವೇತನ ಆಯೋಗವು ಮುಂದಿನ ವರ್ಷ 2026ರ ಜನವರಿ ಜಾರಿಗೆ ಬರಬೇಕಿದೆ. ಈ ಬಗ್ಗೆ ಸಮಿತಿ ರಚಿಸಿರುವ ಕೇಂದ್ರ ಸರ್ಕಾರದಿಂದ ಹೊಸ ತೀರ್ಮಾನಗಳು ಅಪ್ಡೇಟ್ ಘೋಷಣೆಗಾಗಿ ನೌಕರರು ಕಾಯುತ್ತಿದ್ದಾರೆ. ಈ ಎಂಟನೇ ವೇತನ ಆಯೋಗ ಜಾರಿಯಾದರೆ ವ ವೇತನ ಹೆಚ್ಚಳ, ಭತ್ಯೆ ಪರಿಷ್ಕರಣೆಯಲ್ಲಿ ಭಾರೀ ಬದಲಾವಣೆ ಆಗಲಿವೆ.












Click it and Unblock the Notifications