Cyclone: ಮೇ 6ಕ್ಕೆ ಅಪ್ಪಳಿಸಲಿದೆ ವರ್ಷದ ಮೊದಲ ಮೋಚಾ ಚಂಡಮಾರುತ, ಕರ್ನಾಕಟಕಕ್ಕೆ ವರುಣಾಘಾತ
ಬೆಂಗಳೂರು, ಮೇ 02: ಮುಂದಿನ ಕೆಲವೇ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಿಗೆ ಮಳೆಯ ಆಘಾತ ಎದುರಾಗುವ ಸಂಭವವಿದೆ. ಹವಾಮಾನದಲ್ಲಿ ಬದಲಾಗೊಂಡ ವೈಪರಿತ್ಯ ತೀವ್ರ ಸ್ವರೂಪ ಪಡೆದಿರುವುದು ಖಚಿತವಾಗಿದೆ. ಮೇ 6ರಂದು ಬಂಗಾಳಕೊಲ್ಲಿಯಲ್ಲಿ ಈ ವರ್ಷದ ಮೊದಲ 'ಮೋಚಾ' ಚಂಡಮಾರುತ ಸೃಷ್ಟಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ.
ಹೌದು, ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಕಾಡುತ್ತಿರುವ ಮಳೆಗಿಂತಲೂ ಸಾಕಷ್ಟು ಪಟ್ಟು ಅಧಿಕ ಪ್ರಮಾಣದಲ್ಲಿ ಸುರಿಯಲಿದೆ. ಒಂದು ವಾರದಿಂದ ಭೂಮೇಲ್ಮೈ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿತ್ತು. ಇದರಿಂದ ಮಳೆ ಅಬ್ಬರ ಹೆಚ್ಚಾಗಿತ್ತು.

ಇದೀಗ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಮೇ 6ರಂದು ಶನಿವಾರ ' ಚಂಡಮಾರುತ' ಪರಿಚಲನೆ ಬೆಳೆಯುವ ಸಾಧ್ಯತೆಯಿದೆ. ಅದರ ಪ್ರಭಾವದಿಂದಲೇ ಮುಂದಿನ 48 ಗಂಟೆಗಳ ಅವಧಿಯಲ್ಲಿ ಬಂಗಾಳಕೊಲ್ಲಿ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿ ವಾಯುಭಾರತ ಕುಸಿತಗೊಳ್ಳಲಿದೆ. ಈಗಾಗಲೇ ಆಗ್ನೇಯ ಭಾಗದಲ್ಲಿ ಗಾಳಿ ಸುತ್ತುವರಿಯುವಿಕೆ ಪ್ರಮಾಣ ಹೆಚ್ಚಾಗುತ್ತಿದೆ.
— India Meteorological Department (@Indiametdept) May 2, 2023
ತೀವ್ರತರ ಬದಲಾವಣೆ ಸಾಧ್ಯತೆ
ಮುಂದಿನ 120 ಗಂಟೆಗಳವರೆಗೆ ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಬಂಗಾಳಕೊಲ್ಲಿಯ ವಾಯುಭಾರತ ಕುಸಿತ ಮೇ 6ರ ವರೆಗೆ ದಿನೇ ದಿನೆ ತೀವ್ರಗೊಳ್ಳುತ್ತಾ ಸಾಗಲಿದೆ. ಶನಿವಾರ ನಿಖರ ಚಂಡಮಾರುತವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸದ್ಯಕ್ಕೆ ಬಂಗಾಳಕೊಲ್ಲಿಯಲ್ಲಿ ಪಶ್ಚಿಮ ಮತ್ತು ದಕ್ಷಿಣ ಪ್ರದೇಶದಲ್ಲಿ ಕಡಿಮೆ ಮತ್ತು ಮಧ್ಯಮ ಸ್ಥಿತಿಯಲ್ಲಿ ಮೋಡಗಳು ಹರಡಿಕೊಂಡಿವೆ. ಅಂಡಮಾನ್ ಸಮುದ್ರ ಮತ್ತು ಬಂಗಾಳದ ಉತ್ತರ ಮತ್ತು ಪೂರ್ವದ ಕೊಲ್ಲಿಯಲ್ಲಿ ಗಾಳಿಯು ದುರ್ಬಲಗೊಂಡಿದೆ. ಇದೆಲ್ಲ ಕಾರಣಗಳಿಂದ ಸೈಕ್ಲೋನ್ ನಿರ್ಮಾಣವಾಗುತ್ತಿದೆ. ಇದರ ಪರಿಣಾಮವಾಗಿ ತಮಿಳುನಾರು, ಪಶ್ಮಿಮ ಬಂಗಾಳ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಅತ್ಯಧಿಕ ಮಳೆ ಬರಲಿದೆ.
ಒಂದು ವೇಳೆ ಚಂಡಮಾರುತ ತನ್ನ ಮೂಲ ಸ್ಥಳದಿಂದ ಆಂಧ್ರ ಕರಾವಳಿ, ಓಡಿಶಾ ಇಲ್ಲವೇ ತಮಿಳುನಾಡು ಕರಾವಳಿ ತೀರಕ್ಕೆ ಅಪ್ಪಳಿಸಿದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕೆಲವು ದಿನಗಳ ಕಾಲ ಜನಜೀವ ಅಸ್ತವೆಸ್ತವಾಗಲಿದೆ.
ಕರ್ನಾಟಕಕ್ಕೆ ಭಾರೀ ಮಳೆ
ಮುಂದಿನ ಎರಡು ದಿನ ಕರ್ನಾಟಕದ ಒಳನಾಡು ಜಿಲ್ಲೆಗಳಿಗೆ ಅಧಿಕ ಮಳೆ ಯಾಗಲಿದೆ. ಈ ಸಂಬಂದ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ತೀವ್ರತೆ ಹೆಚ್ಚಾದರೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಕೆಲವು ದಿನಗಳ ಕಾಲ ಧಾರಾಕಾರ ಮಳೆ ಬರಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications