Cyclone Remal: ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟಕ್ಕೆ ಎರಡು ಬಲಿ, ಮೆಟ್ರೋ ಸೇವೆ ಅಸ್ತವ್ಯಸ್ತ
ಕೋಲ್ಕತ್ತಾ, ಮೇ. 27: ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯಲ್ಲಿ ಸುರಿದ ಮಳೆಯಿಂದ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರೆಮಲ್ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿ ನಂತರ ಪುನರಾರಂಭಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ರೆಮಲ್ ಚಂಡಮಾರುತ ಭಾರೀ ವಿನಾಶಕ್ಕೆ ಕಾರಣವಾಗಿದೆ. ಕೋಲ್ಕತ್ತಾದ ಹಲವಾರು ಭಾಗಗಳಲ್ಲಿ ಮರಗಳು ಧರೆಗೆ ಉರುಳಿವೆ. ಮರ ಬಿದ್ದು ಮೂವರು ಗಾಯಗೊಂಡಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸದರ್ನ್ ಅವೆನ್ಯೂ, ಲೇಕ್ ಪ್ಲೇಸ್, ಚೆಟ್ಲಾ, ಡಿಎಲ್ ಖಾನ್ ರಸ್ತೆ, ಡಫರಿನ್ ರಸ್ತೆ, ಬ್ಯಾಲಿಗುಂಜ್ ರಸ್ತೆ, ನ್ಯೂ ಅಲಿಪೋರ್, ಬೆಹಾಲಾ, ಜಾದವ್‌ಪುರ್, ಗೋಲ್‌ಪಾರ್ಕ್, ಹತಿಬಗನ್, ಜಗತ್ ಮುಖರ್ಜಿ ಪಾರ್ಕ್ ಮತ್ತು ಕಾಲೇಜ್ ಸ್ಟ್ರೀಟ್ ಹಾಗೂ ನಗರದ ವಿವಿಧೆಡೆ ಮರಗಳು ಉರುಳಿದ ವರದಿಗಳು ಬಂದಿವೆ. ಕೋಲ್ಕತ್ತಾದಲ್ಲಿ ಸುಮಾರು 68 ಮರಗಳು ಮತ್ತು ಸಮೀಪದ ಸಾಲ್ಟ್ ಲೇಕ್ ಮತ್ತು ರಾಜರಹತ್ ಪ್ರದೇಶದಲ್ಲಿ 75 ಮರಗಳು ಉರುಳಿವೆ
"ಸದರ್ನ್ ಅವೆನ್ಯೂ, ಲೇಕ್ ವ್ಯೂ ರಸ್ತೆ, ಪ್ರತಾಪಾದಿತ್ಯ ರಸ್ತೆ, ಟಾಲಿಗಂಜ್ ಫರಿ, ಅಲಿಪೋರ್ ಮತ್ತು ಸೆಂಟ್ರಲ್ ಅವೆನ್ಯೂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನೀರು ನಿಂತಿರುವುದರಿಂದ ಸಂಚಾರ ವ್ಯತ್ಯಯವಾಗಿದೆ. ಚಂಡಮಾರುತ ಅಪ್ಪಳಿಸಿದ ನಂತರ ಮಾಣಿಕ್ಟಾಲಾ ಪ್ರದೇಶದಲ್ಲಿ ಮೂವರು ಗಾಯಗೊಂಡಿದ್ದಾರೆ" ಎಂದು ಕೋಲ್ಕತ್ತಾ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ರೈಲ್ವೆಯ ಸೀಲ್ಡಾ ದಕ್ಷಿಣ ವಿಭಾಗದಲ್ಲಿ ರೈಲು ಸೇವೆಗಳು ಬೆಳಗ್ಗೆ ಮೂರು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ನಂತರ ಬೆಳಗ್ಗೆ 9 ಗಂಟೆಗೆ ಪುನರಾರಂಭಗೊಂಡಿವೆ. ಚಂಡಮಾರುತದ ಹಿನ್ನೆಲೆಯಲ್ಲಿ 21 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ನಂತರ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳು ಸೋಮವಾರ ಬೆಳಗ್ಗೆ ಪುನರಾರಂಭಗೊಂಡಿವೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಟ್ರೋ ಕಾರ್ಯಾಚರಣೆ ಅಸ್ತವ್ಯಸ್ತ
ಇನ್ನು, ಪಾರ್ಕ್ ಸ್ಟ್ರೀಟ್ ಮತ್ತು ಎಸ್ಪ್ಲೇನೇಡ್ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ನೀರು ನಿಂತಿದ್ದರಿಂದ ಗಿರೀಶ್ ಪಾರ್ಕ್ ಮತ್ತು ಮಹಾನಾಯಕ್ ಉತ್ತಮ್ ಕುಮಾರ್ ನಿಲ್ದಾಣಗಳ ನಡುವೆ ಕೋಲ್ಕತ್ತಾ ಮೆಟ್ರೋದ ಕಾರ್ಯಾಚರಣೆ ಅಸ್ತವ್ಯಸ್ತವಾಗಿದೆ. ದಕ್ಷಿಣೇಶ್ವರದಿಂದ ಗಿರೀಶ್ ಪಾರ್ಕ್‌ವರೆಗೆ ಮತ್ತು ಕಬಿ ಸುಭಾಸ್‌ನಿಂದ ಮಹಾನಾಯಕ್ ಉತ್ತಮ್‌ಕುಮಾರ್‌ವರೆಗೆ ಮೆಟ್ರೋ ಸೇವೆ ನೀಡುತ್ತಿವೆ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications