ಮಾಂಡೌಸ್ ಚಂಡಮಾರುತ: ತಮಿಳುನಾಡು, ಆಂಧ್ರ, ಪುದುಚೇರಿಗೆ IMD ಮಳೆ, ಗಾಳಿ ಎಚ್ಚರಿಕೆ

ದೆಹಲಿ ಡಿಸೆಂಬರ್ 9: ಬುಧವಾರ ಸಂಜೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಮಾಂಡೌಸ್ ಚಂಡಮಾರುತ ಇಂದು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದರಿಂದ ಶುಕ್ರವಾರ ಬೆಳಿಗ್ಗೆ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಯಲ್ಲಿ ಮಳೆಯೊಂದಿಗೆ ಗಂಟೆಗೆ 105 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಮಹಾಬಲಿಪುರಂ ಬಳಿ ತಮಿಳುನಾಡು ಕರಾವಳಿಯನ್ನು ತಲುಪುವ ಚಂಡಮಾರುತ ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಐಎಂಡಿ ತಿಳಿಸಿದೆ.

"ಸಮುದ್ರ ಮೇಲ್ಮೈ ತಾಪಮಾನ, ಸಮುದ್ರದ ಶಾಖ ಹಾಗೂ ಸಾಗರದ ಪರಿಸ್ಥಿತಿಗಳು ಚಂಡಮಾರುತ ರಚನೆಗೆ ಅವಕಾಶಿಸುತ್ತವೆ. ಇದು ಇಂದು ರಾತ್ರಿ ತೀವ್ರತೆಯನ್ನು ಪಡೆಯುತ್ತದೆ. ಶುಕ್ರವಾರ ಭೂ ಮೇಲ್ಮೈಗೆ ಹತ್ತಿರವಾಗುತ್ತಿದ್ದಂತೆ ಮಾಂಡೌಸ್ ಚಂಡಮಾರುತ ಶನಿವಾರ ಕ್ರಮೇಣ ದುರ್ಬಲಗೊಳ್ಳುತ್ತದೆ. ಈ ವೇಳೆ ವೇಗವಾಗಿ ಗಾಳಿ ಬೀಸುವುದನ್ನು ಕಾಣಬಹುದು "ಎಂದು ಐಎಂಡಿ ಮಹಾನಿರ್ದೇಶಕ ಎಂ ಮೊಹಪಾತ್ರ (Mohapatra) ಹೇಳಿದರು.

ಇಂದು ತೀವ್ರಗೊಳ್ಳಲಿರುವ ಮಾಂಡೌಸ್

ಇಂದು ತೀವ್ರಗೊಳ್ಳಲಿರುವ ಮಾಂಡೌಸ್

ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಮಾಂಡೌಸ್ ಚಂಡಮಾರುತ ಮೊದಲು ಪಶ್ಚಿಮ-ವಾಯುವ್ಯಕ್ಕೆ ಚಲಿಸಿತು. ಗುರುವಾರ ಮಧ್ಯಾಹ್ನ ಶ್ರೀಲಂಕಾದ ಟ್ರಿಂಕೋಮಲಿಯ ಪೂರ್ವ-ಈಶಾನ್ಯಕ್ಕೆ 250 ಕಿಮೀ, ಜಾಫ್ನಾದಿಂದ 350 ಕಿಮೀ ಪೂರ್ವಕ್ಕೆ, ಪುದುಚೇರಿಯ ಕಾರೈಕಲ್‌ನಿಂದ 390 ಕಿಮೀ ಪೂರ್ವ-ಆಗ್ನೇಯಕ್ಕೆ ಮತ್ತು ಚೆನ್ನೈನ ಆಗ್ನೇಯಕ್ಕೆ 480 ಕಿಮೀ ಕೇಂದ್ರೀಕೃತವಾಗಿತ್ತು.

ತಮಿಳುನಾಡು, ಪುದುಚೇರಿ, ಆಂದ್ರದಲ್ಲಿ ಮಳೆ

ತಮಿಳುನಾಡು, ಪುದುಚೇರಿ, ಆಂದ್ರದಲ್ಲಿ ಮಳೆ

ಆದರಿಂದು ಇದು ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶವನ್ನು ಪುದುಚೇರಿ ಮತ್ತು ಶ್ರೀಹರಿಕೋಟಾ ನಡುವೆ ದಾಟುವ ಸಾಧ್ಯತೆಯಿದೆ. ಇದರಿಂದ ಮಹಾಬಲಿಪುರಂ ಸುತ್ತಮುತ್ತ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಗಂಟೆಗೆ 75 ಕಿಮೀನಿಂದ 85 ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ. "ಶುಕ್ರವಾರದಂದು ತಮಿಳುನಾಡು, ಪುದುಚೇರಿ ಮತ್ತು ಪದುಚೇರಿಯಲ್ಲಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸಲಿದೆ" ಎಂದು ಮೊಹಪಾತ್ರ ಹೇಳಿದರು.

ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದ ಪಕ್ಕದ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಶನಿವಾರದವರೆಗೂ ಮಳೆಯೊಂದಿಗೆ ಗಾಳಿ

ಶನಿವಾರದವರೆಗೂ ಮಳೆಯೊಂದಿಗೆ ಗಾಳಿ

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಗಂಟೆ 75-85ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಇದು ಗುರುವಾರ ರಾತ್ರಿಯ ವೇಳೆಗೆ 100ಕಿಮೀಗೆ ಹೆಚ್ಚಾಗಿತ್ತು. ಶುಕ್ರವಾರ ಬೆಳಿಗ್ಗೆ 95ಕಿಮೀಗೆ ಕ್ರಮೇಣ ಕಡಿಮೆಯಾಗುತ್ತದೆ.

ಗುರುವಾರದಿಂದ ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ಶ್ರೀಲಂಕಾ ಕರಾವಳಿಯಲ್ಲಿ 40ರಿಂದ 60 ಕಿಮೀ ವೇಗದಲ್ಲಿ ಚಂಡಮಾರುತ ಪ್ರಾರಂಭವಾಗಿ, ಶುಕ್ರವಾರ ಬೆಳಿಗ್ಗೆ ಗಂಟೆಗೆ 85 ಕಿಮೀ ವೇಗದಲ್ಲಿ ಹಾಗೂ ಶನಿವಾರದ ಮುಂಜಾನೆಯವರೆಗೆ ಗಂಟೆಗೆ 50-60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ನಂತರ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ.

ರಾಜ್ಯಗಳಲ್ಲಿ ಭೂಕುಸಿತ- ತಗ್ಗು ಪ್ರದೇಶಗಳಿಗೆ ನೀರು

ರಾಜ್ಯಗಳಲ್ಲಿ ಭೂಕುಸಿತ- ತಗ್ಗು ಪ್ರದೇಶಗಳಿಗೆ ನೀರು

ನೈಋತ್ಯ ಬಂಗಾಳ ಕೊಲ್ಲಿಯ ಮೇಲೆಯಲ್ಲಿ ಮಾಂಡೌಸ್ ಚಂಡಮಾರುತ ತೀವ್ರಗೊಂಡಿದ್ದು ಶನಿವಾರದ ಮುಂಜಾನೆ ತನಕ ಪಶ್ಚಿಮ-ಮಧ್ಯ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ದಕ್ಷಿಣ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಶ್ರೀಲಂಕಾ ಕರಾವಳಿಯುದ್ದಕ್ಕೂ ಸಮುದ್ರದ ಪರಿಸ್ಥಿತಿಗಳು ತುಂಬಾ ಒರಟಾಗಿರುತ್ತವೆ. ಚಂಡಮಾರುತದ ಉಲ್ಬಣ ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯ ತಗ್ಗು ಪ್ರದೇಶಗಳನ್ನು ಮುಳುಗಿಸುವ ಹಾಗೂ ಭೂಕುಸಿತ ಉಂಟು ಮಾಡುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+