Fengal Cyclone: ತೀವ್ರಗೊಂಡ ಫೆಂಗಲ್ ಚಂಡಮಾರುತ: ತಮಿಳುನಾಡು ಸೇರಿದಂತೆ ಈ ರಾಜ್ಯಗಳಲ್ಲಿ ರೆಡ್ ಅಲರ್ಟ್- 3 ಮಂದಿ ಸಾವು!

ಫೆಂಗಲ್ ಚಂಡಮಾರುತದಿಂದಾಗಿ ನೆರೆ ರಾಜ್ಯ ತಮಿಳುನಾಡು ಹೆಚ್ಚು ಹಾನಿಗೊಳಗಾಗಿದೆ. ಧಾರಾಕಾರ ಮಳೆ ಹಾಗೂ ವೇಗಗೊಂಡ ಗಾಳಿಗೆ ತಮಿಳುನಾಡಿನ ಕರಾವಳಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಮಳೆ ಸಂಬಂಧಿ ಘಟನೆಗಳಲ್ಲಿ 3 ಜನ ಸಾವನ್ನಪ್ಪಿದ್ದಾರೆ. ಮುಂದಿನ 48 ಗಂಟೆಗಳ ಕಾಲ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ತಮಿಳುನಾಡು ಕರಾವಳಿಯನ್ನು ಫೆಂಗಲ್ ಚಂಡಮಾರುತ ದಾಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚೆನ್ನೈನಲ್ಲಿ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬ ವಲಸೆ ಕಾರ್ಮಿಕನಾಗಿದ್ದು, ನಗರದ ಎಟಿಎಂನಿಂದ ಹಣ ಡ್ರಾ ಮಾಡಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಆತನ ಶವ ಎಟಿಎಂ ಬಳಿ ತೇಲುತ್ತಿರುವುದು ಪತ್ತೆಯಾಗಿದೆ.

Cyclone fengal red alert in these states including tamil nadu- 3 people died

ಚೆನ್ನೈ ವಿಮಾನ ಹಾರಾಟ ಪುನರಾರಂಭ

ತಮಿಳುನಾಡಿನಲ್ಲಿ ಫಂಗಲ್ ಚಂಡಮಾರುತ ಗರಿಷ್ಠ ಪ್ರಭಾವ ಉಂಟು ಮಾಡಿದೆ. ಇದು ಹಲವಾರು ವಿಮಾನಗಳ ಹಾರಾಟದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮಳೆ ತೀವ್ರಗೊಂಡ ಪರಿಣಾಮ ಚೆನ್ನೈ ವಿಮಾನ ನಿಲ್ದಾಣವು ತನ್ನ ಎಲ್ಲಾ ಕಾರ್ಯಾಚರಣೆಗಳನ್ನು ಭಾನುವಾರ ಮುಂಜಾನೆ 4 ಗಂಟೆಯವರೆಗೆ ಸ್ಥಗಿತಗೊಳಿಸಿತ್ತು. ಫೆಂಗಲ್ ಚಂಡಮಾರುತದ ಆಗಮನದ ನಂತರ ಭಾನುವಾರ ಮುಂಜಾನೆ 4 ಗಂಟೆ ನಂತರ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಪುನರಾರಂಭವಾಗಿದೆ. ಚಂಡಮಾರುತದಿಂದಾಗಿ ನಿನ್ನೆಯಿಂದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಲ್ಲದೆ ಫಂಗಲ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ನಿರಂತರ ಭಾರೀ ಮಳೆಯ ನಡುವೆ ಅಧಿಕಾರಿಗಳು ವಿಮಾನ ಪ್ರಯಾಣಿಕರಿಗೆ ಪ್ರಯಾಣ ಸಲಹೆಗಳನ್ನು ನೀಡಿದ್ದಾರೆ.

ಯಾವ ರಾಜ್ಯಗಳು ರೆಡ್ ಅಲರ್ಟ್?

ಫಂಗಲ್ ಚಂಡಮಾರುತದಿಂದಾಗಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಇದಲ್ಲದೆ ಕೇರಳ ಮತ್ತು ಕರ್ನಾಟಕದ ಒಳನಾಡಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Cyclone fengal red alert in these states including tamil nadu- 3 people died

ಸೈಕ್ಲೋನ್ ಫೆಂಗಲ್: ಮಾಡಬೇಕಾದುದು ಮತ್ತು ಮಾಡಬಾರದು

ಫೆಂಗಲ್ ಸೈಕ್ಲೋನ್ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು? ಎನ್ನುವುದನ್ನು ಪರಿಶೀಲಿಸಿ

* ಸಡಿಲವಾದ ಟೈಲ್ಸ್‌, ಬಾಗಿಲು ಮತ್ತು ಕಿಟಕಿಗಳನ್ನು ಭದ್ರಪಡಿಸಿ.

* ಮನೆಯ ಸಮೀಪವಿರುವ ಒಣ ಕೊಂಬೆಗಳನ್ನು ಅಥವಾ ಅಳಿವಿನ ಅಂಚಿನಲ್ಲಿರುವ ಮರಗಳನ್ನು ತೆಗೆದುಹಾಕಿ.

* ಬೀಳುವ ಸ್ಥಿತಿಯಲ್ಲಿರುವ ಮರಗಳು, ಸಡಿಲವಾದ ಟವರ್‌ಗಳು, ಸಡಿಲವಾದ ಇಟ್ಟಿಗೆ ಮನೆಗಳು ಇತ್ಯಾದಿಗಳಿಂದ ದೂರವಿರಿ.

*ಬಲವಾದ ಗಾಳಿಯಲ್ಲಿ ಹಾರಿಹೋಗಬಹುದಾದ ವಸ್ತುಗಳನ್ನು ಸುರಕ್ಷಿತಗೊಳಿಸಿ.

* ನಿಷ್ಕ್ರಿಯ ಕಟ್ಟಡಗಳು ಹಾಗೂ ಟ್ರಾನ್ಸ್‌ಫರ್‌ಮ್ ಕೆಡವಲು ತುರ್ತು ಸಹಾಯವಾಣಿಗೆ ಕರೆ ಮಾಡಿ.

* ನಿಮ್ಮೊಂದಿಗೆ ಆಹಾರವನ್ನು ಇಟ್ಟುಕೊಳ್ಳಿ. ತುರ್ತು ಸೇವೆ ಬೇಕಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ

* ಹೊರಗಡೆ ಬರಲು ಯೋಗ್ಯವಲ್ಲದ ಸಮಯದಲ್ಲಿ ಮನೆಯಿಂದ ಹೊರಬರಬೇಡಿ.

*ರೋಗಗಳನ್ನು ತಡೆಗಟ್ಟಲು ಕೆಲ ಮುಜಾಗೃತ ಕ್ರಮವನ್ನು ತೆಗೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+