Cyclone Biparjoy: ಮೋಚಾ ನಂತರ 'ಬಿಪರ್‌ಜಾಯ್ ಚಂಡಮಾರುತ ಸೃಷ್ಟಿ: IMD ನೀಡಿದ ಎಚ್ಚರಿಕೆ ಏನು?
ಬೆಂಗಳೂರು, ಜೂನ್ 06: ಬದಲಾವಣೆ ಹವಾಮಾನ ವೈಪರಿತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರತ ಕುಸಿತವು ತೀವ್ರಗೊಂಡು ಚಂಡಮಾರುತವಾಗಿ ಬದಲಾಗಿದೆ. ಇದಕ್ಕೆ 'ಬಿಪರ್‌ಜಾಯ್' (Biparjoy Cyclone) ಚಂಡಮಾರುತ ಎಂದು ಹೆಸರಿಡಲಾಗಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜೋರು ಮಳೆ ಸಂಭವವಿದೆ.
ಗುಜರಾತ್‌ನ ಕರಾವಳಿಯ ದಕ್ಷಿಣಕ್ಕೆ ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಗಾಳಿಯ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ತೀವ್ರಗೊಂಡು ಸ್ಪಷ್ಟ ಚಂಡಮಾರುತವಾಗಿ ಬದಲಾಗಲಿದೆ. ಈ ಸೈಕ್ಲೋನ್ ಗಾಳಿಯ ವೇಗವು ಆರಂಭಿಕ ಹಂತದಲ್ಲಿ ಪ್ರತಿ ಗಂಟೆಗೆ 45-55 ಕಿಲೋ ಮೀಟರ್ ಇರಲಿದ್ದು, ಗರಿಷ್ಠ 145-155 ಕಿಲೋ ಮೀಟರ್‌ವರೆಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಐಎಂಡಿ ಮುನ್ಸೂಚನೆ ಪ್ರಕಾರ, ಈ ಕಡಿಮೆ ಒತ್ತಡದ ಪ್ರದೇಶ ಅರಬ್ಬಿ ಸಮುದ್ರದಲ್ಲಿ ಗೋವಾದಿಂದ ಪಶ್ಚಿಮ-ನೈಋತ್ಯಕ್ಕೆ 920 ಕಿಮೀ ದೂರದಲ್ಲಿದೆ. ಮುಂಬೈನಿಂದ ದಕ್ಷಿಣ-ನೈಋತ್ಯಕ್ಕೆ 1,120 ಕಿ.ಮೀ, ಗುಜರಾತ್‌ನ ಪೋರಬಂದರ್‌ನಿಂದ ದಕ್ಷಿಣಕ್ಕೆ 1,160 ಕಿ.ಮೀ, ಪಾಕಿಸ್ತಾನದ ಕರಾಚಿಯಿಂದ 1,520 ಕಿಮೀ ದಕ್ಷಿಣ ದಿಕ್ಕಿನಲ್ಲಿದೆ.
ಈ ಬಿಪರ್‌ಜಾಯ್ ಚಂಡಮಾರುತವು ಆಗ್ನೇಯ ಅರಬ್ಬಿ ಸಮುದ್ರದಿಂದ ಪೂರ್ವ-ಮಧ್ಯ ಅರಬ್ಬಿ ಸಮುದ್ರತ್ತ ಚಲಿಸುವ ಸಾಧ್ಯತೆ ಇದೆ. ಇದರ ಪ್ರಭಾವ ಜೂನ್ 12ರವರೆಗೆ ಇರುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಮುಂಬೈ ಮತ್ತು ಕೊಂಕಣ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಈ ಸಂಬಂಧ ಕರಾವಳಿ ಭಾಗದ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಅರಬ್ಬಿ ಸಮುದ್ರದ ತೀರದ ಭಾಗವಾದ ಮುಂಬೈ ಕರಾವಳಿಯಲ್ಲಿ ಮುಂದಿನ ಕೆಲವು ದಿನ ಬಲವಾದ ಗಾಳಿ ಬೀಸುವ ಜೊತೆಗೆ ಸಮುದ್ರದಲ್ಲಿ ಎತ್ತರದ ಅಲೆಗಳ ಏಳುವ ಮುನ್ಸೂಚನೆ ಇದೆ. ಈ ವಾರಾಂತ್ಯದಲ್ಲಿ ಮುಂಗಾರು ಸುರಿಸುವ ಮಾರುತುಗಳ ಸಹ ಸಕ್ರಿವಾಗಲಿವೆ. ಇದೆಲ್ಲ ಕಾರಣದಿಂದ ಕೆಲವು ಕಡೆಗಳಲ್ಲಿ ಆಗಾಗ ಭಾರೀ ಮಳೆಯಾಗುವ ಸಂಭವವಿದೆ ಎಂದು ಐಎಂಡಿ ತಿಳಿಸಿದೆ.

ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ರಾಜ್ಯದ ವಿವಿಧೆಡೆ, ಗುಜರಾತ್, ಕರ್ನಾಟಕದ ವಿವಿಧೆಡೆ ಜೂನ್ 8 ರಿಂದ ಜೂನ್ 10ರವರೆಗೆ ಮೂರು ದಿನ ಜೋರು ಮಳೆಯ ಸುರಿಯಲಿದೆ. ಪ್ರಸಕ್ತ ಮುಂಗಾರು ಆರಂಭ ದಲ್ಲಿ ಮುಂಬೈ ಹೆಚ್ಚು ಮಳೆಯಾಗಲಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ನಗರವು ಎಲ್ಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (AMMRDA) ಆಯುಕ್ತ ಎಸ್.ವಿ.ಆರ್. ಶ್ರೀನಿವಾಸ್ ಶುಕ್ರವಾರ ತಿಳಿಸಿದ್ದಾರೆ.
ಗುಜರಾತ್ ಭಾಗದ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ಇತ್ತ ಕೇರಳ ಕರಾವಳಿ ಮಾರ್ಗವಾಗಿ ಮುಂಗಾರು ಮಳೆ ಸುರಿಸುವ ಮಾರುತಗಳು ಆಗಮಿಸಲಿವೆ. ಇದೆಲ್ಲ ಕಾರಣಗಳಿಂದ ಮುಂದಿನ ಒಂದು ವಾರ ಅರಬ್ಬಿ ಸಮುದ್ರದ ತೀರ ಪ್ರದೇಶಗಳು, ಜಿಲ್ಲೆ ಮತ್ತು ನಗರಗಳು ಮಹಾಮಳೆಗೆ ಸಾಕ್ಷಿಯಾಗಲಿವೆ ಎಂದು IMD ಎಚ್ಚರಿಕೆ ನೀಡಿದೆ.
ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ಕಡಿಮೆ ಒತ್ತಡದ ವ್ಯವಸ್ಥೆ ಮತ್ತು ಅದರ ತೀವ್ರತೆಯು ಕೇರಳ ಕರಾವಳಿಯತ್ತ ಮಾನ್ಸೂನ್ ಮುನ್ನಡೆಯ ಮೇಲೆ ವಿಮರ್ಶಾತ್ಮಕವಾಗಿ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದು IMD ಸೋಮವಾರ ತಿಳಿಸಿದೆ.












Click it and Unblock the Notifications