Cyclone Alert: ಮತ್ತೆ ಚಂಡಮಾರುತ ಪ್ರಸರಣ ಸೃಷ್ಟಿ: ಭಾರೀ ಮುಂಗಾರು ಮಳೆ ಅಬ್ಬರ, ಮುನ್ಸೂಚನೆ
IMD Weather Forecast: ಭಾರತದ ಕೆಲವೆಡೆ ಭಾರೀ ಮಳೆ ಆಗುತ್ತಿದೆ. ಮುಂಗಾರು ಚುರುಕಾಗಿದೆ. ಪ್ರತಿಕೂಲ ವಾತಾವರಣ ನಿರ್ಮಾಣವಾಗುವ ಮುನ್ಸೂಚನೆ ಸಿಕ್ಕಿದೆ. ಸಮುದ್ರ ಮಟ್ಟದಲ್ಲಿ ವ್ಯಾಪಕ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಈಗಾಗಲೇ ಮೂರು ಕಡೆಗಳಲ್ಲಿ ಚಂಡಮಾರುತ ಪ್ರಸರಣ, ಕಡಿಮೆ ಒತ್ತಡದ ಪ್ರದೇಶ (IMD Cyclone Alert) ನಿರ್ಮಾಣವಾಗಿದೆ. ಇದರಿಂದ ಮಳೆ ಆರ್ಭಟ (Rain Alert) ಕಂಡು ಬರಲಿದೆ ಎಂದು ದೇಶದ ಹವಾಮಾನ ಇಲಾಖೆ (IMD Forecast) ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದ ಈಶಾನ್ಯ ಭಾಗದಿಂದ ದಕ್ಷಿಣ ಗುಜರಾತ್ ಪ್ರದೇಶದವರೆಗೆ ಹಾಗೂ ಉತ್ತರ ಮಧ್ಯ ಮಹಾರಾಷ್ಟ್ರ, ದಕ್ಷಿಣ ಮಧ್ಯಪ್ರದೇಶ, ಉತ್ತರ ಛತ್ತೀಸ್‌ಗಢದಲ್ಲಿ ದಕ್ಷಿಣ ಜಾರ್ಖಂಡ್ ಮತ್ತು ನೆರೆಹೊರೆಗಳ ಮೇಲೆ ಚಂಡಮಾರುತದ ಪರಿಚಲನೆಯು ಸಾಗುತ್ತಿದೆ. ಆ ಭಾಗದಲ್ಲೆಲ್ಲೆ ಬಿರುಗಾಳಿ ಬೀಸುತ್ತಿದೆ. ಗಾಳಿಯ ವೇಗ ನೆನ್ನೆಗಿಂತಲೂ ಇಂದು ಹೆಚ್ಚಾಗಿದೆ.

ಇನ್ನೂ ಪಶ್ಚಿಮ ಬಂಗಾಳದ ಭೂ ಮೇಲ್ಮೈನಲ್ಲಿ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ ಕಡಿಮೆ ಒತ್ತಡದ ನಿರ್ಮಾಣವಾಗಿದೆ. ಅದರ ಯಥಾ ಸ್ಥಿತಿಯಲ್ಲಿದೆ. ಒಂದು ವೇಳೆ ಅದರ ತೀವ್ರತೆ ಹೆಚ್ಚಾದರೆ ಇನ್ನಷ್ಟು ಭಾರೀ ಮಳೆ ಬರುವ ನಿರೀಕ್ಷೆ ಇದೆ. ಸದ್ಯ ಈ ವೈಪರೀತ್ಯವು ದಕ್ಷಿಣ ಜಾರ್ಖಂಡ್ ಮತ್ತು ನೆರೆಹೊರೆಗಳ ಮೇಲಿದೆ. ಅದು ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿಲೋ ಮೀಟರ್ ವರೆಗೆ ವಿಸ್ತರಣೆ ಗೊಂಡಿದೆ.
ಈ ವೈಪರೀತ್ಯವು ನಾಳೆ ಶುಕ್ರವಾರ ಹೊತ್ತಿಗೆ ಅಲ್ಲಿಂದ ಬೇರೆ ದಿಕ್ಕಿನತ್ತ ಕದಲುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಪ್ರಕಾರ,
ಸರಾಸರಿ ಸಮುದ್ರ ಮಟ್ಟದಲ್ಲಿ ಸೂರತ್‌ಗಢ, ಭಿವಾನಿ, ಅಲಿಗಢ, ಬಂದಾ, ಡಾಲ್ಟೊಂಗಂಜ್, ದಿಘಾ ಮೂಲಕ ಹಾದುಹೋಗುತ್ತದೆ. ಅಲ್ಲಿಂದ ಆಗ್ನೇಯಕ್ಕೆ ತಿರುಗಿ ಈಶಾನ್ಯ ಮಾರ್ಗವಾಗಿ ಬಂಗಾಳಕೊಲ್ಲಿಗೆ ತಲುಪುತ್ತದೆ ಎಂದು ಹವಾಮಾನ ತಜ್ಞರು ಊಹಿಸಿದ್ದಾರೆ. ಸಮುದ್ರ ಸೇರಿದರೆ ಈ ವೈಪರೀತ್ಯ ಬೇಗನೆ ದುರ್ಬಲಗೊಳ್ಳವ ಸಂಭವವಿದೆ.

ಮಳೆ ಅಬ್ಬರ ಹೆಚ್ಚಗಲು ವಾಯುಭಾರ ಕುಸಿತ ಕಾರಣ
ಅದೇ ರೀತಿ ಪಶ್ಚಿಮ ಅಸ್ಸಾಂನಿಂದ ತೆಲಂಗಾಣವರೆಗೆ ಇಲ್ಲೊಂದು ವಾಯುಭಾರ ಕುಸಿತ ಉಂಟಾಗಿದೆ. ಈಗ ಅದು ಪಶ್ಚಿಮ ಅಸ್ಸಾಂನಿಂದ ವಿದರ್ಭದವರೆಗೆ ಗಂಗಾನದಿಯ ಪಶ್ಚಿಮ ಬಂಗಾಳ ಕಡೆಗೆ ಸಾಗಿದೆ. ಗಾಳಿಯ ವೇಗ ಸಾಮಾನ್ಯ ವೇಗದಲ್ಲಿದೆ. ಜಾರ್ಖಂಡ್ ರಾಜ್ಯದ ದಕ್ಷಿಣ, ಛತ್ತೀಸ್‌ಗಢದ ಉತ್ತರ ಭಾಗಗಳ ಮೇಲೆ ಕೇಂದ್ರೀಕೃತವಾಗಿದೆ. ಸಮುದ್ರ ಮಟ್ಟದಿಂದ ಸರಾಸರಿ 3.1 ಕಿ.ಮೀ ಎತ್ತರದಲ್ಲಿದೆ. ಇದು ಗುರುವಾರಕ್ಕೆ ಚಂಡಮಾರುತದ ಪ್ರಸರಣವಾಗಿ ಬದಲಾಗಿದೆ. ಮುಂದಿನ ದಿನಗಳಲ್ಲಿ ಇದರ ಪ್ರಭಾವ ಕ್ಷೀಣಿಸದೇ ತೀವ್ರತೆ ಹೆಚ್ಚಿಸಿಕೊಂಡಲ್ಲಿ ಮುಂಗಾರು ಮಳೆ ಅಬ್ಬರ ಹೆಚ್ಚಾಗಲು ಕಾರಣವಾಗುತ್ತದೆ.
ಸೈಕ್ಲೋನ್‌ನಿಂದ ಭಾರೀ ಮಳೆ
ಈ ಸೈಕ್ಲೋನ್ ಪ್ರಭಾವದಿಂದಾಗಿ ಭಾರತದ ದಕ್ಷಿಣ ರಾಜ್ಯಗಳಲ್ಲಿ ಅದರಲ್ಲೂ ಕರಾವಳಿ ರಾಜ್ಯಗಳಾದ ಕೇರಳ, ಕರ್ನಾಟಕ, ಆಂಧ್ರ, ಒಡಿಶಾ ಭಾಗದಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇದೆ. ಮುಂಗಾರು ಕೊಂಚ ತಣ್ಣಗಾಗಿದೆ. ಸದ್ಯದ ಹವಾಮಾನ ವೈಪರೀತ್ಯಗಳು ಹೀಗೆ ಮುಂದುವರಿದರೆ ಇನ್ನೂ ಒಂದು ವಾರ ಸಾಕಷ್ಟು ಮಳೆ ಸುರಿಯುವ ಲಕ್ಷಣಗಳು ಇವೆ.












Click it and Unblock the Notifications