ಪ್ರತಿಭಟನಾಕಾರರ ಮೇಲೆ ಹರಿದ ಸಿಆರ್‌ಪಿಎಫ್ ವಾಹನ

ನವದೆಹಲಿ/ಶ್ರೀನಗರ, ಜೂನ್ 2: ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಆರ್‌ಪಿಎಫ್‌ನ ವಾಹನವೊಂದು ಮೂವರ ಮೇಲೆ ಹರಿದ ಘಟನೆ ಶ್ರೀನಗರದಲ್ಲಿ ನಡೆದಿದೆ.

ಮೂವರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳು ಮತ್ತೆ ಆರಂಭವಾಗಿವೆ.

ಗೃಹಸಚಿವ ರಾಜನಾಥ್ ಸಿಂಗ್ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಕೆಲವೇ ದಿನಗಳಿರುವಂತೆಯೇ ಈ ಘಟನೆ ನಡೆದಿದೆ. ರಂಜಾನ್ ಪ್ರಯುಕ್ತ ಉಗ್ರರ ಮೇಲಿನ ಕಾರ್ಯಾಚರಣೆಗೆ ವಿರಾಮ ಘೋಷಣೆ ಮಾಡುವ ಮೂಲಕ ಕಾಶ್ಮೀರದ ಯುವಜನರನ್ನು ತಲುಪುವ ಪ್ರಯತ್ನದಲ್ಲಿರುವ ಕೇಂದ್ರ ಸರ್ಕಾರಕ್ಕೆ ಈ ಘಟನೆ ಹಿನ್ನಡೆ ಉಂಟುಮಾಡಲಿದೆ.

ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರನ್ನು ಡ್ರಾಪ್ ಮಾಡಿ ಮರಳಿ ಬರುವ ವೇಳೆ ಸಿಆರ್‌ಪಿಎಫ್ ವಾಹನ ಪ್ರತಿಭಟನಾಕಾರರ ಮೇಲೆ ಹರಿದಿದೆ ಎನ್ನಲಾಗಿದೆ.

ಆದರೆ, ವಾಹನವನ್ನು ಜನರ ಗುಂಪು ಸುತ್ತುವರಿದಿತ್ತು. ವಾಹನದ ಮೇಲೆ ದಾಳಿ ಮಾಡುತ್ತಿದ್ದರು. ಚಾಲಕನಿಗೆ ಮುಂದೆ ಹೋಗಲು ಯಾವುದೇ ದಾರಿ ಇರಲಿಲ್ಲ ಎಂಬುದು ಒಂದು ವಿಡಿಯೋದಲ್ಲಿ ಕಂಡುಬಂದಿದೆ.

crpf vehicle runs over protesters in srinagar

ಇನ್ನೊಂದು ವಿಡಿಯೋದಲ್ಲಿ ಸಮೀಪದಿಂದ ಕಲ್ಲು, ಇಟ್ಟಿಗೆಗಳನ್ನು ತೂರುತ್ತಿದ್ದ ಜನರ ಗುಂಪಿನ ಮಧ್ಯೆಯೇ ಚಾಲಕ ವಾಹನ ಚಲಾಯಿಸಿಕೊಂಡು ಮುಂದೆ ಸಾಗುವುದು ಸೆರೆಯಾಗಿದೆ.

ಪ್ರತಿಭಟನಾಕಾರರ ಪರವಾಗಿರುವ ಕೆಲವರು ಜೀಪ್‌ನ ಅಡಿಯಲ್ಲಿ ವ್ಯಕ್ತಿ ಸಿಲುಕಿರುವ ಚಿತ್ರಗಳನ್ನು ಪ್ರಕಟಿಸಿ ಸೇಮೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ ಜನರ ಗುಂಪು ಅದಕ್ಕೂ ಮೊದಲು ವಾಹನದ ಮೇಲೆ ದಾಳಿ ನಡೆಸುವ ಚಿತ್ರಗಳನ್ನು ಪ್ರಕಟಿಸುತ್ತಿರುವ ಕೆಲವರು, ವಾಸ್ತವ ಸಂಗತಿಯನ್ನು ಮರೆಮಾಚಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, 'ಕದನ ವಿರಾಮ ಎಂದರೆ ಬಂದೂಕಿನ ಬದಲು ಜೀಪ್ ಬಳಸುವುದು' ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ಆಯ್ದ ಚಿತ್ರಗಳು ಇಡೀ ಘಟನೆಯ ಚಿತ್ರಣವನ್ನು ನೀಡುವುದಿಲ್ಲ. ವಿಡಿಯೋಗಳು ಮತ್ತು ಚಿತ್ರಗಳು ಪುಂಡಾಟಿಕೆಯ ಗುಂಪು ವಾಹನದ ಮೇಲೆ ದಾಳಿ ಮಾಡುವುದನ್ನು ತೋರಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+