ಸೈಬರ್ ಸೆಲ್ ಠಾಣೆಯ ಮೆಟ್ಟಿಲೇರಿದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್: ಕಾರಣವೇನು?
ಭಾರತದ ಕ್ರಿಕೆಟಿಗ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಈ ಪ್ರಕರಣ ದಾಖಲಿಸಿದ್ದಾರೆ. ಉತ್ಪನ್ನಗಳನ್ನು ಕೊಳ್ಳಲು ಹಾಗೂ ಆನ್‌ಲೈನ್ ಸೇವೆಗೆ ಸಂಬಂಧಿಸಿದಂತೆ ನಾಗರಿಕರ ದಿಕ್ಕುತಪ್ಪಿಸಲು ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ದೂರು ನೀಡಿರುವ ಸಂಸ್ಥೆಯ ವ್ಯಕ್ತಿಗಳ ವಿರುದ್ಧ ವಂಚನೆ, ನಕಲಿ ಸಹಿ ಹಾಗೂ ಮಾನನಷ್ಟ ಮೊಕದ್ದಮೆಯನ್ನು ಹಾಕಲಾಗಿದೆ. ಮುಂಬೈ ಪೊಲೀಸ್ ಸೈಬರ್ ಸೆಲ್‌ನಲ್ಲಿ ಐಪಿಸಿಯ ಸೆಕ್ಷನ್ 426, 465 ಮತ್ತು 500 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಆರ್‌ಟಿ ಮ್ಯಾನೇಜ್‌ಮೆಂಟ್ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಇನ್ನು ಎಸ್‌ಆರ್‌ಟಿ ಮ್ಯಾನೇಜ್‌ಮೆಂಟ್ ಈ ಹೇಳಿಕೆಯಲ್ಲಿ ನಾಗರೀಕರು ದುಷ್ಕರ್ಮಿಗಳ ವಂಚನೆಗಳಿಗೆ ಬಲಿಯಾದಂತೆ ಎಚ್ಚರವಹಿಸುವಂತೆ ಮನವಿ ಮಾಡಿದೆ. ಅಲ್ಲದೆ ಗುಣಮಟ್ಟದ ವಸ್ತುಗಳು ಹಾಗೂ ಸಾರ್ವಜನಿಕರಿಗೆ ದೊರೆಯಲು ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದಿದೆ. ಇನ್ನು ಯಾರಿಂದಲೂ ವಂಚನೆಗೆ ಒಳಗಾಗದಂತೆ ಎಚ್ಚರವಹಿಸಲು ಮನವಿ ಮಾಡಿದೆ.
"ಅನಧಿಕೃತ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಮೋಸದಿಂದ ನಾಗರಿಕರನ್ನು ದಾರಿ ತಪ್ಪಿಸುವ ಕೆಲಸಗಳಾಗಿದೆ. ದುರುದ್ದೇಶಪೂರಿತವಾಗಿ ಇವುಗಳನ್ನು ಮಾಡಲಾಗುತ್ತಿದೆ. ಈ ವಿಚಾರವಾಗಿ ನಾವು ನಾವು ಸೈಬರ್ ಸೆಲ್ ಇಲಾಖೆಗೆ ಅಧಿಕೃತ ದೂರು ಸಲ್ಲಿಸಿದ್ದೇವೆ ಮತ್ತು ಇಂತಹ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಈ ಬಗ್ಗೆ ಉಲ್ಲೇಖ ಮಾಡಿದ್ದೇವೆ" ಎಂದು ಎಸ್ಆರ್‌ಟಿ ಮ್ಯಾನೇಜ್‌ಮೆಂಟ್ ತಿಳಿಸಿದೆ.
"ಸಚಿನ್ ತೆಂಡೂಲ್ಕರ್ ವ್ಯವಹಾರ ಹೊಂದಿರುವ ಸಂಸ್ಥೆಗಳ ಪಟ್ಟಿ ಸಚಿನ್ ತೆಂಡೂಲ್ಕರ್ ಅವರ ವೆಬ್‌ಸೈಟ್‌ನಲ್ಲಿ ಇದೆ. ನಿಮಗೇನಾದರೂ ವಂಚಿಸುವಂತಾ ಜಾಹೀರಾತುಗಳು ಕಂಡುಬಂದಲ್ಲಿ ಅದನ್ನು ದಯವಿಟ್ಟು ವರದಿ ಮಾಡಿ. ಈ ಬಗ್ಗೆ ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸುವಾಗ, ಆನ್‌ಲೈನ್ ಸೇವೆ ಪಡೆಯುವಾಗ ಜಾಗರೂಕರಾಗಿರಬೇಕು" ಎಂದು ಎಚ್ಚರಿಕೆಯ ಸಂದೇಶ ನೀಡಿದೆ.












Click it and Unblock the Notifications