ಅಯೋಧ್ಯೆಕ್ಕೆ ಭೇಟಿ ನೀಡಬೇಕಾ? ಪಂಚೆ ಎತ್ತಿಕಟ್ಟಿ ಕ್ರಿಕೆಟ್ ಆಡಿ- ಭೋಪಾಲ್‌ನಲ್ಲಿ ವಿಶಿಷ್ಟ ಪಂದ್ಯಾವಳಿ
ಭೋಪಾಲ್ ಜನವರಿ 11: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಂಸ್ಕೃತಿ ಬಚಾವೋ ಮಂಚ್‌ನಿಂದ ವಿಶಿಷ್ಟವಾದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದರಲ್ಲಿ ಆಟಗಾರರು ಪ್ಯಾಂಟ್ ಶಾಟ್ಸ್ ಬದಲಿಗೆ ಧೋತಿ ಮತ್ತು ಕುರ್ತಾ ಧರಿಸಿ ಭಾಗವಹಿಸುತ್ತಿದ್ದಾರೆ.
ಪಂದ್ಯಾವಳಿಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಕಾಮೆಂಟರಿಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಸದೆ ಸಂಸ್ಕೃತ ಭಾಷೆಯಲ್ಲಿ ನಡೆಸಲಾಗುತ್ತಿದೆ. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡದ ಆಟಗಾರರನ್ನು ಸಂಸ್ಕೃತಿ ಸಂರಕ್ಷಣಾ ವೇದಿಕೆಯಿಂದ ಸಾಂಸ್ಕೃತಿಕ ಭೇಟಿಗಾಗಿ ಅಯೋಧ್ಯೆಗೆ ಕರೆದೊಯ್ಯಲಾಗುತ್ತದೆ. ಭೋಪಾಲ್‌ನಲ್ಲಿ ನಡೆದ ವಿಶಿಷ್ಟ ಪಂದ್ಯಾವಳಿಯಲ್ಲಿ ಆಟಗಾರರು ಪಂಚೆ ಎತ್ತಿಕಟ್ಟಿ ಭಾಗವಹಿಸುತ್ತಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ
ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶ ವಿದೇಶದಿಂದ ಗಣ್ಯರಿಗೆ ಆಹ್ವಾನಿಸಲಾಗಿದೆ. ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ರಾಮ ಮಂದಿರ ಉದ್ಘಾಟನೆ ಆಗಲಿದೆ.
ಶಿಕ್ಷಣ ಸಂಸ್ಥೆಗಳಿಗೆ ರಜೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸೂಚನೆ ನೀಡಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನದಂದು ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಯೋಗಿ ಅದಿತ್ಯನಾಥ್ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಒಂದು ರಾಷ್ಟ್ರೀಯ ಉತ್ಸವ ಆಗಿದೆ. ಶತಮಾನಗಳ ಕಾಯುವಿಕೆಯ ನಂತರ ಈ ಶುಭ ಗಳಿಗೆ ಬಂದಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳನ್ನು ದಿವ್ಯಸ್ವರೂಪದಲ್ಲಿ ಅಲಂಕರಿಸಲಾಗುವುದು. ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜನವರಿ 22 ರಂದು ರಜೆ ಘೋಷಿಸಲು ಸೂಚನೆ ನೀಡಿದ್ದೇನೆ. ಬನ್ನಿ ಎಲ್ಲರೂ ಒಟ್ಟಾಗಿ ರಾಮೋತ್ಸವವನ್ನು ಆಚರಿಸೋಣ ಎಂದು ಕರೆ ನೀಡಿದ್ದಾರೆ.

ಛತ್ತೀಸ್ ಗಢದಲ್ಲಿ ಜ.22 ಮದ್ಯ ಮಾರಾಟ ನಿಷೇಧ ದಿನ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ನಡೆಯಲಿದ್ದು, ಆ ದಿನವನ್ನು ''ಮದ್ಯ ಮಾರಾಟ ನಿಷೇಧ" ದಿನ ಎಂದು ಘೋಷಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.
ಡಿಸೆಂಬರ್ 25 ರಿಂದ ಜನವರಿ 2 ರವರೆಗೆ ನಾವು 'ಉತ್ತಮ ಆಡಳಿತ' ದಿನವನ್ನು ಆಚರಿಸುತ್ತಿದ್ದೇವೆ. ರಾಮರಾಜ್ಯ ಉತ್ತಮ ಆಡಳಿತದ ಮಾದರಿಯಾಗಿದೆ. ಛತ್ತೀಸ್‌ಗಢ ರಾಜ್ಯವು ಭಗವಾನ್ ರಾಮನ 'ನಾನಿಹಾಲ್' (ಭಗವಾನ್ ರಾಮನ ತಾಯಿಯ ಜನ್ಮಸ್ಥಳ) ಆಗಿರುವುದು ನಮ್ಮ ಅದೃಷ್ಟ ಮತ್ತು ಅಯೋಧ್ಯೆಯ ರಾಮಮಂದಿರದ 'ಪ್ರಾಣ ಪ್ರತಿಷ್ಠೆ' ಜನವರಿ 22 ರಂದು ನಡೆಯುವುದು ಸಹ ನಮಗೆ ಅದೃಷ್ಟ" ದಿನವಾಗಿದೆ ಎಂದರು.












Click it and Unblock the Notifications