ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಳ್ಳುವ ಭೀತಿಯಲ್ಲಿವೆ ಈ ಪಕ್ಷಗಳು
ನವದೆಹಲಿ, ಜುಲೈ 16: ಲೋಕಸಭೆ ಚುನಾವಣೆ 2019ರಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಪ್ರಮುಖ ಪಕ್ಷಗಳು ತಮ್ಮ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ.
ಪ್ರಮುಖ ಪಕ್ಷ ಸಿಪಿಐ ನಂತರ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‍ಸಿಪಿ), ತೃಣಮೂಲ ಕಾಂಗ್ರೆಸ್(ಟಿಎಂಸಿ) ಕೂಡಾ ಈ ಭೀತಿ ಎದುರಿಸುತ್ತಿರುವ ಪಕ್ಷಗಳಾಗಿವೆ. 2014ರ ಚುನಾವಣೆ ಫಲಿತಾಂಶದ ಬಳಿಕ ಬಿಎಸ್ಪಿ, ಎನ್ಸಿಪಿ ಈ ಭೀತಿ ಎದುರಿಸಿದ್ದರೂ ಸ್ಥಾನಮಾನ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ, 2016ರಲ್ಲಿ ಚುನಾವಣಾ ಆಯೋಗವು ತನ್ನ ನೀತಿ, ನಿಯಮದಲ್ಲಿ ಬದಲಾವಣೆ ಮಾಡಿದ್ದರಿಂದ ಎರಡು ಪಕ್ಷಗಳು ಬಚಾವಾಗಿದ್ದವು.
ಏನಿದು ನಿಯಮ?: 1968ರ ಚುನಾವಣಾ ಚಿನ್ಹೆ ಕಾಯ್ದಿರಿಸುವುದು ಹಾಗೂ ಹಂಚಿಕೆ ಆದೇಶದ ಅನ್ವಯ ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಪಕ್ಷದ ಅಭ್ಯರ್ಥಿಗಳು ಶೇ 6ರಷ್ಟು ಮತಗಳಿಕೆ ಹೊಂದಿರಬೇಕು. ಕನಿಷ್ಠ ನಾಲ್ಕ ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಈ ಸಾಧನೆ ಮಾಡಿರಬೇಕು. ಕನಿಷ್ಠ 4 ಅಭ್ಯರ್ಥಿಗಳು ಗೆಲುವು ಸಾಧಿಸಿರಬೇಕು.

ಸಿಪಿಐನ ಇಬ್ಬರು ಮಾತ್ರ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ರಾಜ್ಯದ ಪಕ್ಷವಾಗಿ ಕೇರಳದಲ್ಲಿ 2016ರಲ್ಲಿ 19ರಲ್ಲಿ ಹೊಂದುವ ಮೂಲಕ ಹಾಗೂ ಮಣಿಪುರದಲ್ಲಿ 8.3% ಮತಗಳಿಸಿದ್ದು ಬಿಟ್ಟರೆ ಮಿಕ್ಕ ಕಡೆಗಳಲ್ಲಿ ಸೋಲು ಕಂಡಿದೆ. ಬಿಎಸ್ಪಿ 10 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶೇ 2ರಷ್ಟು ಸ್ಥಾನ ಅಥವಾ 3ಕ್ಕಿಂತ ಕಡಿಮೆ ಸ್ಥಾನ ಹೊಂದಿರಬೇಕು ಎಂಬ ನಿಯಮ ಮೀರಿಲ್ಲ.
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಬಿಎಸ್ಪಿ, ಸಿಪಿಐ, ಸಿಪಿಐಎಂ, ಕಾಂಗ್ರೆಸ್(ಐಎನ್ಸಿ), ಎನ್ಸಿಪಿ, ಮೇಘಾಲಯದ ನ್ಯಾಷಲಿಸ್ಟ್ ಪೀಪಲ್ಸ್ ಪಾರ್ಟಿಗಳು ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿವೆ. ಏಪ್ರಿಲ್ 11 ರಿಂದ ಮೇ 19ರ ತನಕ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲಾ ಪಕ್ಷಗಳು ಸ್ಪರ್ಧಿಸಿದ್ದವು, ಮೇ 23ರಂದು ಫಲಿತಾಂಶ ಹೊರಬಂದಿತ್ತು.












Click it and Unblock the Notifications