ಭಯೋತ್ಪಾದನೆಗಿಂತ ಗೋಹತ್ಯೆ ಮಹಾಪರಾಧ: ಬಿಜೆಪಿ ಶಾಸಕ

ಜೈಪುರ, ಜುಲೈ 31: 'ಗೋಹತ್ಯೆ ಮಾಡುವುದು ಭಯೋತ್ಪಾದನೆಗಿಂತ ದೊಡ್ಡ ಅಪರಾಧ' ಎಂದು ರಾಜಸ್ಥಾನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜಸ್ಥಾನದ ಅಲ್ವಾರ್ ನಲ್ಲಿ ಗೋಕಳ್ಳನೆಂದು ದೂರಿ ವ್ಯಕ್ತಿಯನ್ನು ಜನರ ಗುಂಪು ಹೊಡೆದು ಸಾಯಿಸಿದ ಘಟನೆಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.

"ಒಂದು ಗೋವು ಸಾಯುವುದರಿಂದ ಕೋಟಿಗೂ ಅಧಿಕ ಹಿಂದುಗಳ ಧಾರ್ಮಿಕ ಭಾವನೆಗೆ ನೋವಾಗುತ್ತದೆ" ಎಂದ ಅವರು, 'ಭಯೋತ್ಪಾದನೆಗಿಂತ ಗೋ ಹತ್ಯೆ ಮಹಾಪರಾಧ. ಏಕೆಂದರೆ ಭಯೋತ್ಪಾದಕರು ಎರಡು ಮೂರು ಜನರನ್ನು ಕೊಲ್ಲಬಹುದು. ಆದರೆ ಗೋವನ್ನು ಸಾಯಿಸುವುದರಿಂದ ಕೋಟ್ಯಂತರ ಹಿಂದುಗಳ ಮನಸ್ಸಿಗೆ ನೋವಾಗುತ್ತದೆ' ಎಂದು ರಾಮಗಢ ಶಾಸಕ ಅಹುಜಾ ಹೇಳಿದರು.

Cow slaughter bigger crime than terrorism: BJP MLA

"ಗೋಹತ್ಯೆ, ಗೋ ಕಳ್ಳತನದ ಆರೋಪದ ಮೇಲೆ ಕಾನೂನನ್ನು ಕೈಗೆ ತೆಗೆದುಕೊಂಡು ವ್ಯಕ್ತಿಗಳನ್ನು ಸಾಯಿಸುವುದು ಅಪರಾಧ. ಅಂಥ ಅಪರಾಧದ ವಿರುದ್ಧ ಕಠಿಣ ಕ್ರಮಗಳನ್ನು ಆಯಾ ರಾಜ್ಯಗಳು ತೆಗೆದುಕೊಳ್ಳಬೇಕು" ಎಂದು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಖಡಕ್ಕಾಗಿ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಇತ್ತೀಚೆಗಷ್ಟೇ ರಾಜಸ್ಥಾನದ ಅಲ್ವಾರ್ ನಲ್ಲಿ ರಕ್ಬರ್ ಖಾನ್ ಎಂಬ ಯುವಕನನ್ನು ಗೋಕಳ್ಳನೆಂದು ದೂರಿ ಜನರ ಗುಂಪೊಂದು ಹೊಡೆದು ಸಾಯಿಸಿತ್ತು. ಈ ಪ್ರಕರಣಕ್ಕೆ ರಾಜಕೀಯ ಧುರೀಣರು ಸೇರಿದಂತೆ ದೇಶದಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+